ಗುಬ್ಬಿಯಲ್ಲಿ ಗ್ರಾಪಂ ಉಪಚುನಾವಣೆ ಫಲಿತಾಂಶ ಪ್ರಕಟ
1 min read
ಗುಬ್ಬಿಯಲ್ಲಿ ಗ್ರಾಪಂ ಉಪಚುನಾವಣೆ ಫಲಿತಾಂಶ ಪ್ರಕಟ
ಮೂರು ಗ್ರಾಪಂ ಕ್ಷೇತ್ರಗಳಿಗೆ ನಡೆದಿದ್ದ ಉಪ ಚುನಾವಣೆ
ಗುಬ್ಬಿ ತಾಲ್ಲೂಕಿನ ಒಟ್ಟು ಆರು ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇದ್ದ ಸದಸ್ಯರ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಮೂರು ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದು, ಉಳಿದ ಮೂರು ಸ್ಥಾನಕ್ಕೆ ನಡೆದ ಚುನಾವಣೆ ಮತ ಎಣಿಕೆ ಇಂದು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆಯಿತು.
ಗುಬ್ಬಿ ಪಟ್ಟಣದ ಚುನಾವಣಾ ಶಾಖೆಯಲ್ಲಿ ಬೆಳಿಗ್ಗೆ ಆರಂಭವಾದ ಮತ ಎಣಿಕೆ ಕಾರ್ಯ ತಹಶೀಲ್ದಾರ್ ಬಿ.ಆರತಿ ನೇತೃತ್ವದಲ್ಲಿ ನಡೆಯಿತು. ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಜಿ.ಹೊಸಹಳ್ಳಿ ವಾರ್ಡ್, ಎಂ.ಎನ್. ಕೋಟೆ ಗ್ರಾಮ ಪಂಚಾಯಿತಿಯ ಎಂ.ಎನ್. ಕೋಟೆ ವಾರ್ಡ್ ಹಾಗೂ ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಚಿಹಳ್ಳಿ ವಾರ್ಡ್ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿತ್ತು.
ಜಿ.ಹೊಸಹಳ್ಳಿ ಕ್ಷೇತ್ರದಲ್ಲಿ ನರೇಶ್, ಎಂ.ಎನ್.ಕೋಟೆ ಕ್ಷೇತ್ರದಲ್ಲಿ ಮೋಹನ್, ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಚಿಹಳ್ಳಿ ಕ್ಷೇತ್ರದಿಂದ ತಿಮ್ಮೇಗೌಡ ಗೆಲುವು ಸಾಧಿಸಿದರು. ಉಳಿದ ಹತ್ತು ತಿಂಗಳಲ್ಲಿ ಅಭಿವೃದ್ದಿ ಕೆಲಸ ಮಾಡುವ ಜೊತೆಗೆ ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನಗೊಳಿಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಎಲ್ಲಾ ಸದಸ್ಯರ ಒಮ್ಮತದಲ್ಲಿ ಕೆಲಸ ಮಾಡುವುದಾಗಿ ಗೆಲುವು ಸಾಧಿಸಿದ ಮೂವರು ನೂತನ ಸದಸ್ಯರು ಭರವಸೆ ನೀಡಿದರು.