ಗುಬ್ಬಿ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು
1 min readಗುಬ್ಬಿ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು
ಅಂಗನವಾಡಿ, ಪೊಲೀಸ್ ಠಾಣೆ ಸೇರಿದಂತೆ ಬಡವರ ಮನೆಗಳಿಗೆ ಜಾಗ
ಗುಬ್ಬಿ ಕ್ಷೇತ್ರದಲ್ಲಿ ಮೂಲ ಸೌಕರ್ಯ ಸೇರಿದಂತೆ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು. ಗುಬ್ಬಿ ತಾಲ್ಲೂಕಿನ ಗಂಟೆಪಾಳ್ಯದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಮಡೆನಹಳ್ಳಿಯಲ್ಲಿ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗುಬ್ಬಿ ತಾಲೂಕಿನ ಮಡೇನಹಳ್ಳಿಯಲ್ಲಿ ೪ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗುತ್ತಿದ್ದು, ಇಲ್ಲಿ ಆರೋಗ್ಯ ಸೇವೆ ಪಡೆಯಲು ಸುತ್ತಮುತ್ತಲಿನ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಬಿದರೆ ಹಾಗೂ ದೊಡ್ಡಗುಣಿ ಆಸ್ಪತ್ರೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಇರುವ ಭೂಮಿಯನ್ನು ಸರ್ಕಾರಿ ಕಚೇರಿಗಳಿಗೆ, ವಸತಿ ನಿಲಯಗಳಿಗೆ, ಆಶ್ರಯ ಯೋಜನೆಯಲ್ಲಿ ಆಶ್ರಯ ಮನೆಗಳಿಗೆ ಮೀಸಲಿಡಲಾಗಿದೆ ಎಂದರು.
ಜಿ ಹೊಸಹಳ್ಳಿಯ ಬಳಿ ೧೦ ಎಕರೆ, ಮತ್ತಿಕೆರೆ ಬಳಿ ೨೦ ಎಕರೆಯನ್ನು ಕಿತ್ತೂರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಮೀಸಲಿರಿಸಲಾಗಿದೆ. ರಿಂಗ್ ರಸ್ತೆಯಲ್ಲಿ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ೨ ಎಕರೆ ನೀಡಲಾಗಿದೆ, ಪಿಡಬ್ಲೂಡಿ ಕಟ್ಟಡ ನಿರ್ಮಾಣಕ್ಕೂ ಜಾಗ ನೀಡಲಾಗದೆ. ೯೮ ಅಂಗನವಾಡಿ ಕಟ್ಟಡಗಳನ್ನು ಹಾಕಲಾಗಿದೆ. ಎಚ್‌ಎಎಲ್ ನಿಂದ ೨೨ ಕಟ್ಟಡಗಳನ್ನು ನೀಡಿದ್ದುರೆ. ಮುಂದಿನ ದಿನಗಳಲ್ಲಿ ಸಿಎಸ್‌ಆರ್ ಫಂಡ್‌ನಲ್ಲಿ ಹೆಚ್ಚಿನ ಕಟ್ಟಡ ನೀಡುವಂತೆ ತಿಳಿಸಲಾಗಿದೆ.
ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಯಾರು ಸುಮ್ಮನೆ ದೂರು ನೀಡುವುದಿಲ್ಲ. ಕಾಂಗ್ರೆಸ್ ಮುನಿರತ್ನ ವೈಯಕ್ತಿಕವಾಗಿ ಹೋರಾಟ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಕೆ ಆರ್ ವೆಂಕಟೇಶ್,
ಟಿಎಚ್‌ಓ ಬಿಂಧುಮಾದವ, ವೈದ್ಯ ಚೇತನ್ ಕುಮಾರ್, ಗ್ರಾಪಂ ಅಧ್ಯಕ್ಷ ಭಾಗ್ಯಮ್ಮ ನರಸಿಂಹರಾಜು, ಉಪಾಧ್ಯಾಕ್ಷೆ ಮಹಾಲಕ್ಷಿ ಇದ್ದರು.