ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಮಂಚನಬಲೆಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ

1 min read

ಮಂಚನಬಲೆಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ

ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದಿಂದ ರಾಜ್ಯೋತ್ಸವ

ಸಂಸದ ಡಾ.ಕೆ. ಸುಧಾಕರ್ ಭಾಗಿ, ಭಾಷೆ ಉಳಿಸಿ, ಬೆಳೆಸಲು ಕರೆ

ಚಿಕ್ಕಬಳ್ಳಾಪುರ ಆಂಧ್ರದ ಗಡಿಗೆ ಹೊಂದಿಕೊ0ಡಿರುವ ಜಿಲ್ಲೆ. ಇಲ್ಲಿ ತೆಲುಗು ಪ್ರಧಾನ ಆಡು ಭಾಷೆ. ಹಾಗಂತ ಕನ್ನಡ ನಿರ್ಲಕ್ಷ ಮಾಡುವುದಿಲ್ಲ. ಹಾಗಾಗಿಯೇ ವರ್ಷ ಪೂರ್ತಿ ಇಲ್ಲಿ ಕನ್ನಡ ಹಬ್ಬ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಿರುತ್ತದೆ. ಅದರ ಭಾಗವಾಗಿಯೇ ರಾತ್ರಿ ಮಂಚನಬಲೆ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಅತ್ಯಂತ ಅದ್ಧೂರಿಯಾಗಿ ನೆರವೇರಿತು.

ತೆಲುಗು ಪ್ರಧಾವ ಇರುವ ಪ್ರದೇಶವಾದರೂ ಇಲ್ಲಿ ಕನ್ನಡ ಎಂದರೆ ಪ್ರತಿಯೊಬ್ಬರಿಗೂ ಪ್ರೀತಿ, ಗೌರವ. ಚಿಕ್ಕಬಳ್ಳಾಪುರದ ಜನರ ಕನ್ನಡದ ಪ್ರೀತಿ ಅನಾದಿ ಕಾಲದಿಂದಲೂ ಮುಂದುವರಿದಿದೆ. ಹಾಗಾಗಿಯೇ ನವೆಂಬರ್ ತಿಂಗಳ ಕನ್ನಡ ಪ್ರೀತಿಯ ಬದಲಾಗಿ ವರ್ಷ ಪೂರ್ತಿ ಕನ್ನಡದ ಕಂಪು ಪಸರಿಸಲು ಇಲ್ಲಿನ ಆಟೋ ಚಾಲಕರಿಂದ ಕನ್ನಡಪರ ಸಂಘಟನೆಗಳವರೆಗೂ ಶ್ರಮಿಸುತ್ತಿದ್ದಾರೆ. ಶನಿವಾರ ರಾತ್ರಿ ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಯೋಜಿಸಲಾಗಿತ್ತು.

ಕನ್ನಡ ರಾಜ್ಯೋತ್ಸವದಲ್ಲಿ ಗ್ರಾಮದ ಮಹಿಳೆಯರು, ಮಕ್ಕಳು ಎಲ್ಲರೂ ಭಾಗವಹಿಸುವ ಮೂಲಕ ಕನ್ನಡ ಪ್ರೇಮ ಮೆರೆದರು. ಅಲ್ಲದೆ ಕ್ರೀಡೆ, ಸಂಗೀತ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಅಲ್ಲದೆ ಸಂಗೀತ ರಸಮಂಜರಿ ನೆರೆದಿದ್ದ ಎಲ್ಲರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಪ್ರತಿ ವರ್ಷ ಈ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಕಳೆದ ಹಲವು ವರ್ಷಗಳಿಂದಲೂ ಡಾ.ಕೆ. ಸುಧಾಕರ್ ಅವರು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ರೂಡಿಯಾಗಿದೆ.

ಶನಿವಾರ ರಾತ್ರಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿಯೂ ಸಂಸದ ಡಾ.ಕೆ. ಸುಧಾಕರ್ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾಡಿನ ಸಂಸ್ಕಾರ, ಸಂಸ್ಕೃತಿ ಉಳಿಸಿ, ಬೆಳೆಸುವ ಕಾರ್ಯಕ್ರಮ ಇದಾಗಿದೆ, ಸಾಧಕರಿಗೆ ಸನ್ಮಾನ ಮಾಡುವ ವಿನೂತನ ಕಾರ್ಯಕ್ರಮ ನಡೆಸುತ್ತಿರೋದು ಶ್ಲಾಘನೀಯ, ನಾಡಿನ ಹೊರಗೂ ಕನ್ನಡ ಪಸರಿಸುವ ಕಾರ್ಯಕ್ರಮ ಆಗಬೇಕು ಎಂದು ಕರೆ ನೀಡಿದರು.

ಕನ್ನಡವನ್ನು ಕಡ್ಡಾಯವಾಗಿ ಮಕ್ಕಳಿಗೆ ಕಲಿಸುವ ಮೂಲಕ ಮುಂದಿನ ಪೀಳಿಗೆಗೆ ಕನ್ನಡ ಭಾಷೆ ಹಸ್ತಾಂತರಿಸುವ ರಾಯಭಾರಿಗಳಾಗಿ ಪ್ರತಿಯೊಬ್ಬ ಪೋಷಕರೂ ಕರ್ತವ್ಯ ನಿರ್ವಹಿಸಬೇಕು. ಮಕ್ಕಳಿಗೆ ಕನ್ನಡ ಪುಸ್ತಕ ಓದುವ ಹವ್ಯಾಸ ಮಾಡಿಸಿದರೆ ಮುಂದಿನ ದಿನಗಳಲ್ಲಿ ಅವರೇ ಕನ್ಡನ ಪತ್ರಿಕೆ ಮತ್ತು ಪುಸ್ತಕ ಓದಲು ಆಸಕ್ತಿ ತೋರುತ್ತಾರೆ. ಮುಂದಿನ ವರ್ಷ ಇನ್ನೂ ವೈಭವವಾಗಿ ಕಾರ್ಯಕ್ರಮ ಆಚರಿಸಿ, ನಾನೂ ಭಾಗಿಯಾಗುತ್ತೇನೆ, ಮಂಚನಬಲೆ ಗ್ರಾಮದಲ್ಲಿ ಥ್ರೋಬಾಲ್, ಕಬಡ್ಡಿ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ರಾಷ್ಟಿಯ ಮಟ್ಟಕ್ಕೆ ಹೋಗಿರುವುದು ಅಭಿನಂದನೀಯ ಎಂದು ಸಂಸದರು ಹೇಳಿದರು.

ಕನ್ನಡ ರಾಜ್ಯೋತ್ಸವ ಎಂಬುದು ಒಂದು ದಿನಕ್ಕೆ ಸೀಮಿತವಾಗಿರಬಾರದು, ಇಡೀ ವರ್ಷ ಆಚರಿಸುವ ಹಬ್ಬವಾಗಬೇಕು. ಕನ್ನಡ ಭಾಷೆ, ಮಾತೃಭಾಷೆ, ಕನ್ನಡ ತಾಯಿ ಭುಮನೇಶ್ವರಿಯನ್ನು ಆರಾಧಿಸಬೇಕು, ಕನ್ನಡ ಹೃದಯದ ಭಾಷೆಯಾಗಲಿ, ಇದನ್ನು ಉಳಿಸಿ, ಬೆಳೆಸುವ ಕೆಲಸವಾಗಬೇಕು, ತಾವು ಕಾಮನ್‌ವೆಲ್ತ್ ಶೃಂಗಸಭೆಗೆ ಆಸ್ಟೆಲಿಯಾದ ಸಿಡ್ನಿಗೆ ಹೋಗಿದ್ದ ಸಂದರ್ಭದಲ್ಲಿ ಸಿಡ್ನಿಯಲ್ಲಿರುವ ಕನ್ನಡಿಗರ ಮಕ್ಕಳು ಕನ್ನಡ ಉಳಿಸಿ ಬೆಳೆಸುವ ಕೆಲಸ ಮಾಡುತ್ತಿರುವುದು ಕಂಡು ಹೃದಯ ತುಂಬಿ ಬಂತು ಎಂದು ಸುಧಾಕರ್ ಹೇಳಿದರು.

ಆಸ್ಟೆಲಿಯಾ ಎಂದರೆ ಅದು ಪ್ರತ್ಯೇಕ ಖಂಡ, ಆ ಖಂಡದಲ್ಲಿಯೂ ನಮ್ಮ ಭಾಷೆ, ನಮ್ಮ ಸಂಗೀತ, ನಮ್ಮ ಸಂಸ್ಕಾರ, ನಮ್ಮ ಅಡುಗೆ ಪಸರಿಸುವ ಕೆಲಸವನ್ನು ಕನ್ನಡದ ಮಕ್ಕಳು ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಬ್ರಿಟೀಷರು ಬಿತ್ತಿದ ಇಂಗ್ಲೀಷ್ ಹೊಟ್ಟೆಪಾಡಿನ ಭಾಷೆಯಾಗಿದೆ, ಇಂಗ್ಲೀಷ್ ಇಲ್ಲದೆ ಬದುಕಲು ಸಾಧ್ಯವಿಲ್ಲ, ಆದರೆ ಮಾತೃಭಾಷೆ ಕನ್ನಡವನ್ನು ಮರೆಯಬಾರದು ಅದನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ಆಗಬೇಕು ಎಂದು ಹೇಳಿದರು.

About The Author

Leave a Reply

Your email address will not be published. Required fields are marked *