ಶಿಡ್ಲಘಟ್ಟದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ
1 min readಶಿಡ್ಲಘಟ್ಟದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ
ಸಮಾನ ಮನಸ್ಕರ ಹೋರಾಟ ಸಮಿತಿಯಿಂದ ರಾಜ್ಯೋತ್ಸವ
ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೆ ವರ್ಷದ ಎಲ್ಲ ದಿನಗಳಲ್ಲೂ, ಬದುಕಿನ ಉದ್ದಕ್ಕೂ ಕನ್ನಡದ ಉತ್ಸವ ನಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ. ನರೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
ಶಿಡ್ಲಘಟ್ಟ ನಗರದ ಕೋಟೆ ವೃತ್ತದ ಡಾ.ಪುನೀತ್ ರಾಜ್‌ಕುಮಾರ್ ವೇದಿಕೆಯಲ್ಲಿ ಸಮಾನ ಮನಸ್ಕರ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ. ನರೇಂದ್ರ ಕುಮಾರ್, ಮಕ್ಕಳು ಅಗತ್ಯ ಬಿದ್ದರೆ ಮಾತ್ರ ಮೊಬೈಲ್ ಬಳಸಿ. ಉಳಿದ ಸಮಯದಲ್ಲಿ ನಿಮ್ಮ ಪಠ್ಯ ಪುಸ್ತಕಗಳ ಜತೆಗೆ ಉತ್ತಮ ಸಾಹಿತ್ಯ ಪುಸ್ತಕ ಓದಿ, ಕಾನೂನು ಜ್ಞಾನ, ಮಕ್ಕಳ ಹಕ್ಕುಗಳು ಸೇರಿ ಅನೇಕ ವಿಷಯಗಳ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದರು.
ಕನ್ನಡ ಭಾಷೆಯಲ್ಲಿ ನಮ್ಮ ಬದುಕು ಉಸಿರು ಅಡಗಿದೆ. ಭಾಷೆಯ ಅಳಿವು ಅಂದರೆ ಅದು ಕನ್ನಡಿಗರ ಅಳಿವು ಆಗಲಿದೆ. ಕನ್ನಡ ಭಾಷೆಗೂ ಕನ್ನಡಿಗರಿಗೂ ಅಳಿವು ಇಲ್ಲ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ನಾವು ದೊಡ್ಡ ಹೋರಾಟವನ್ನೇನು ಮಾಡಬೇಕಿಲ್ಲ. ಬದುಕಿನ ಉದ್ದಕ್ಕೂ ಕನ್ನಡ ಮಾತನಾಡಿ ಬರೆಯುವುದು ಮಾಡಿದರೆ ಸಾಕು ಎಂದರು. ಶಾಲಾ ಕಾಲೇಜು ಹಾಗೂ ನೃತ್ಯ ತರಗತಿಯ ವಿದ್ಯಾರ್ಥಿಗಳು ಕನ್ನಡದ ಅನೇಕ ಗೀತೆಗಳಿಗೆ ನೃತ್ಯ ಮಾಡಿದರು. ಭರತ ನಾಟ್ಯ ಪ್ರದರ್ಶನವೂ ಗಮನ ಸೆಳೆಯಿತು.
ಜೂನಿಯರ್ ರಾಜ್ ಕುಮಾರ್ ಮತ್ತು ಜೂನಿಯರ್ ರವಿಚಂದ್ರನ್ ಸಿನಿಮಾನದ ಡೈಲಾಗ್ ಹೊಡೆದು, ನಟನೆ ಮಾಡಿ ಸಭಿಕರ ಗಮನ ಸೆಳೆದರು. ಹಳ್ಳಿಕಾರ್ ಒಡೆಯ ವತೂರ್ರ ಸಂತೋಷ್ ಡೈಲಾಗ್ ಹೊಡೆದು ಚಪ್ಪಾಳೆ ಗಿಟ್ಟಿಸಿಕೊಂಡರು. ನಾನಾ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಬಿ.ಎನ್. ಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್, ಮಾರುಕಟ್ಟೆ ಡಿಡಿ ಮಹದೇವ್, ಮಾಜಿ ಶಾಸಕ ಎಂ. ರಾಜಣ್ಣ ಇದ್ದರು.