ಮಂಚೇನಹಳ್ಳಿಯಲ್ಲಿ ಅದ್ಧೂರಿ ಹನುಮ ಜಯಂತಿ
1 min readಮಂಚೇನಹಳ್ಳಿಯಲ್ಲಿ ಅದ್ಧೂರಿ ಹನುಮ ಜಯಂತಿ
ಶ್ರೀರಾಮ, ಲಕ್ಷಣ, ಸೀತಾ, ಆಂಜನೇಯ ವಿಗ್ರಹ ಪ್ರತಿಷ್ಠಾಪನೆ
ವಾಯುಪುತ್ರ ಹನುಮನ ಜನ್ಮದಿನ ಇಂದು. ಹನುಮ ಜಯಂತಿ ಪ್ರಯುಕ್ತ ಜಿಲ್ಲೆಯಾದ್ಯಂತ ಇರುವ ಆಂಜನೇಯ ದೇವಾಲಯಗಳಲ್ಲಿ ವಿಶೇಷ ಪೂಜೆಗಳು, ಹೋಮ, ಹವನದ ಜೊತೆಗೆ ದೇವಾಲಯಗಳಿಗೆ ಆಗಮಿಸುವ ಭಕ್ತರಿಗೆ ಅನ್ನ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು.
ಮಂಚೇನಹಳ್ಳಿ ತಾಲೂಕಿನ ಬುದ್ಧಿವಂತನಹಳ್ಳಿಯಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಶ್ರೀರಾ, ಲಕ್ಷಣ, ಸೀತೆ ಮತ್ತು ಆಂಜನೇಯ ವಿಗ್ರಹಗಳ ಪ್ರತಿಷ್ಠಾಪನಾ ಕಾರ್ಯಕ್ರಮ ವಿಜೃಂಭಣೆಯಿAದ ನೆರವೇರಿತು. ದೇವಾಲಯದಲ್ಲಿ ಬೆಳಗಿನಿಂದಲೇ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ವಿಗ್ರಹ ಪ್ರತಿಷ್ಠಾಪನೆ ವಿಧಿ ವಿಧಾನಗಳಂತೆ ನೆರವೇರಿತು.
ಇಂದು ಮುಂಜಾನೆಯೇ ರಾಮತಾರಕ ಹೋಮ, ಶ್ರೀ ಸೀತಾರಾಮ ಹಾಗೂ ವಿಗ್ರಹಗಳ ಚರ ಪ್ರತಿಷ್ಠಾಪನ ಕಾರ್ಯಕ್ರಮ ನೆರವೇರಿತು. ಅಲ್ಲದೆ ೪೮ ದಿನಗಳ ಅಯ್ಯಪ್ಪ ಸ್ವಾಮಿ ಸಹಸ್ರ ಆಭಿಷೇಕವನ್ನೂ ನೆರವೇರಿಸಲಾಯಿತು. ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗದ ಜೊತೆಗೆ ಅನ್ನಸಂತರ್ಪಣೆ ನಡೆಯಿತು. ಆಗಮಿಸಿದ್ದ ಎಲ್ಲ ಭಕ್ತರು ದೇವರ ದರ್ಶನ ಪಡೆದು ಭಕ್ತಿ ಭಾವ ಮೆರೆದರು.