ಪಿಡಿಒ ಅಧಿಕಾರ ದುರಪಯೋಗ ಆರೋಪ; ಎಸ್‌ಡಿಪಿಐ ಬೆಂಬಲಿತ 8 ಸದಸ್ಯರಿಂದ ಗ್ರಾಪಂಗೆ ಮುತ್ತಿಗೆ
1 min read
ಅಧಿಕಾರ ದುರಪಯೋಗಪಡಿಸಿಕೊಂಡಿದ್ದಾರೆ ಆರೋಪಿಸಿ ಎಸ್‌ಡಿಪಿಐ ಬೆಂಬಲಿತ 8 ಸದಸ್ಯರುಗಳಿಂದ ಗ್ರಾಮಪಂಚಾಯಿತಿಗೆ ಮುತ್ತಿಗೆ ಹಾಕಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದಲ್ಲಿ ನಡೆದಿದೆ.
ಸಜೀಪಮುನ್ನೂರು ಗ್ರಾಪಂ ಪಿಡಿಒ ಲಕ್ಷ್ಮಣ್ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಆರೋಪಿಸಿರುವ 8 ಸದಸ್ಯರು. ಕಚೇರಿಗೆ ನುಗ್ಗಿಪಂಚಾಯತ್ ಸಿಬ್ಬಂದಿಗೆ ಮತ್ತು ಪಿಡಿಓಗೆ ಕಚೇರಿಯೊಳಗೆ ಹೋಗದಂತೆ ತಡೆಯೊಡ್ಡಿರುವ ಆರೋಪ. ಪಿಡಿಒರಿಂದ ಬಲವಂತವಾಗಿ ಕಾರ್ಯಾಲಯದ ಕೀ ಕಸಿದುಕೊಂಡು ಗಲಾಟೆ ಮಾಡಿರುವ ಎಸ್‌ಡಿಪಿಐ ಬೆಂಬಲಿತ ಸದಸ್ಯರು. ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಐವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಪಿಡಿಒ ಲಕ್ಷ್ಮಣ್ ದೂರು ನೀಡಿದ್ದಾರೆ.
ಎಸ್‌ಡಿಪಿಐ ಬೆಂಬಲಿತ ಗ್ರಾ.ಪಂ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ಜಮಾಲುದ್ದೀನ್, ಫಾತಿಮಾ ಸೌನ್, ಪೌಝಿಯಾ, ಸಬೀನಾ, ರಜಿಯಾ, ಸಾಜಿದ್, ವಹಿದಾಬಾನು ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಪಿಡಿಒ. ಸದ್ಯ ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿರುವ ಪೊಲೀಸರು.