ಗ್ರಾಮಸ್ಥರನ್ನು ಮರೆತ ಗ್ರಾಪಂ ಗ್ರಾಮ ಸಭೆಗಳು ಕೋರಂ ಕೊರತೆ ಇದ್ದರೂ ಗ್ರಾಮಸಭೆ ಮಾಡಿದ ಗ್ರಾಪಂ
1 min readಗ್ರಾಮಸ್ಥರನ್ನು ಮರೆತ ಗ್ರಾಪಂ ಗ್ರಾಮ ಸಭೆಗಳು
ಜನರು, ಗ್ರಾಪಂ ಸದಸ್ಯರ ಗೈರಿನಲ್ಲಿ ಗ್ರಾಮ ಸಭೆ
ಕೋರಂ ಕೊರತೆ ಇದ್ದರೂ ಗ್ರಾಮಸಭೆ ಮಾಡಿದ ಗ್ರಾಪಂ
ಗ್ರಾಮ ಪಂಚಾಯತಿಯಿ0ದ ಜನರು ವಿವಿಧ ಸೌಲಭ್ಯ ಪಡೆದು ಗ್ರಾಮ ಸಭೆಗಳು ನಡೆಸಲು ಜನರು ಸಭೆಯಲ್ಲಿ ಹಾಜರಿರಬೇಕು. ಆದರೆ ಸೌಲಭ್ಯ ಪಡೆದು ಗ್ರಾಮ ಸಭೆಗೆ ಗೈರು ಹಾಜರಾಗುವುದು ತಪ್ಪು ಎಂದು ಬೀಚಗಾನಹಳ್ಳಿ ಗ್ರಾಮ ಪಂಚಾಯತಿ ಸಾಮಾಜಿಕ ಪರಿಶೋಧನೆ ನೋಡಲ್ ಅಧಿಕಾರಿ ನಳಿನಾಕ್ಷಿ ತಿಳಿಸಿದರು.
ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮ ಪಂಚಾಯತಿ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೀಚಗಾನಹಳ್ಳಿ ಗ್ರಾಮ ಪಂಚಾಯತಿ ಸಾಮಾಜಿಕ ಪರಿಶೋಧನೆ ನೋಡಲ್ ಅಧಿಕಾರಿ ನಳಿನಾಕ್ಷಿ, ಇಂತಹ ಗ್ರಾಮ ಸಭೆಗಳಿಗೆ ಗ್ರಾಮಸ್ಥರು ಸ್ವಯಂ ಪ್ರೇರಣೆ ಯಿಂದ ಭಾಗವಹಿಸಬೇಕು. ಗ್ರಾಮಗಳ ಅಭಿವೃದ್ಧಿ ಬಗ್ಗೆ, ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಸರ್ಚೆ ಮಾಡಿದಾಗ ಮಾತ್ರ ಸಮಸ್ಯೆ ಗಳಿಗೆ ಗ್ರಾಮಗಳ ಅಭಿವೃದ್ಧಿ ಯಾಗುತ್ತದೆ. ಜನರೇ ಗ್ರಾಮ ಸಭೆಗೆ ಬಾರದಿದ್ದರೆ ಅಭಿವೃದ್ಧಿ ಅಸಾಧ್ಯ ಎಂದರು.
ಸಭೆಯಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಮಗಾರಿಗಳ ವಿವರ ಹಾಗೂ ತಾಲ್ಲೂಕು ಪಂಚಾಯತಿ 15 ನೇ ಹಣಕಾಸು ಯೋಜನೆ ಕಾಮಗಾರಿಗಳ ಬಗ್ಗೆ ವರದಿಯನ್ನು ಸಭೆಯಲ್ಲಿ ತಿಳಿಸಿದರು. ಕೆಲವು ಕಾಮಗಾರಿಗಳು ದೋಷ ಪೂರಿತ ವಾಗಿದ್ದು, ಅವುಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ತಾಲ್ಲೂಕು ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ ಅಧಿಕಾರಿ ಗಿರೀಶ್ ಕುಮಾರ್ ತಿಳಿಸಿದರು.
ಗ್ರಾಮಸಭೆ ಕೇವಲ ಕಾಟಾಚಾರಕ್ಕೆ ನಡೆಸುವಂತಾಗಿದೆ. ಸಭೆಯ ಬಗ್ಗೆ ಸರಿಯಾದ ಮಾಹಿತಿ ನೀಡುವುದಿಲ್ಲ. ಪ್ರಚಾರವನ್ನೂ ಮಾಡುವುದಿಲ್ಲ. ಈ ಹಿನ್ನೆಲೆಯಲ್ಲಿ ಸಭೆಗೆ ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರು ಬರಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.
ಗ್ರಾಮಸಭೆಗೆ ಕೋರಂ ಕಡಿಮೆ ಇದ್ದರೂ ಸಭೆ ನಡೆಸಲಾಯಿತು. ಎನರು ಬಾರದಿರುವುದಕ್ಕೆ ಪ್ರಚಾರದ ಕೊರತೆಯೂ ಕಾರಣ ಎಂಬ ಆರೋಪಗಳು ಗ್ರಾಮಸ್ಥರಿದಂ ಕೇಳಿಬಂದವು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷ ಎ. ರಮೇಶ್ ಬಾಬು, ವೆಂಕಟನರಸಪ್ಪ, ಅನಸೂಯಮ್ಮ, ವಾಣಿ ಎಂ.ಎಸ್, ಕಲಾವತಿ, ಪಿಡಿಒ ಗೌಸ್ ಪೀರ್ ಇದ್ದರು.