ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಗೌರಿಬಿದನೂರು ನಗರಸಭೆಶಾಸಕರ ಬಣದ ತೆಕ್ಕೆಗೆ

1 min read

ಗೌರಿಬಿದನೂರು ನಗರಸಭೆಶಾಸಕರ ಬಣದ ತೆಕ್ಕೆಗೆ

ಕಾಂಗ್ರೆಸ್‌ನ ಮಾಜಿ ಸಚಿವರಿಗೆ ಭಾರೀ ಮುಖಭ0ಗ

ಬಹುಮತ ಇದ್ದರೂ ಅಧಿಕಾರ ಹಿಡಿಯಲು ವಿಫಲವಾದ ಕಾಂಗ್ರೆಸ್

ಬಹುಮತಕ್ಕೆ ಅಗತ್ಯವಿರುವ ಸದಸ್ಯರಿದ್ದರೂ ಗೌರಿಬಿದನೂರು ನಗರಸಭೆ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು, ನಿರೀಕ್ಷೆಯಂತೆ ಮತ್ತೆ ಎರಡನೇ ಬಾರಿಗೆ ಅಧ್ಯಕ್ಷಉಪಾಧ್ಯಕ್ಷ ಸ್ಥಾನ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಬಣದ ಪಾಲಾಗಿದೆ.

ಗೌರಿಬಿದನೂರು ನಗರಸಭೆಯಲ್ಲಿ ಒಟ್ಟು 31 ಸದಸ್ಯ ಬಲ ಇದ್ದು, ಕಾಂಗ್ರೆಸ್ ೧೫ ಸದಸ್ಯರಿದ್ದಾರೆ. ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಬಣದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಹಂಚಿಕೆ ಮಾಡಿಕೊಳ್ಳಬಹುದಿತ್ತು. ಆದರೆ ಶಾಸಕ ಪುಟ್ಟಸ್ವಾಮಿ ಗೌಡರ ಬಣವನ್ನು ಅಧಿಕಾರದಿಂದ ದೂರವಿರಿಸಲೇಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ಬೆಂಬಲ ಪಡೆದು ಅಧಿಕಾರ ಹಿಡಿಯುವ ತಂತ್ರಗಾರಿಕೆಯನ್ನು ಕಾಂಗ್ರೆಸ್ ನಡೆಸಿತು. ಆದರೆ ಕಾಂಗ್ರೆಸ್‌ನ ಇಬ್ಬರು ಸದಸ್ಯರೇ ಶಾಸಕರ ಬಣಕ್ಕೆ ಬೆಂಬಲ ಸೂಚಿಸಿದರು. ಜೆಡಿಎಸ್ ಬಿಜೆಪಿ ಸದಸ್ಯರ ಬೆಂಬಲ ಪಡೆದ ಶಾಸಕರ ಬಣ ವಿಜಯ ಪತಾಕೆ ಹಾರಿಸಿದರೆ ಕಾಂಗ್ರೆಸ್ ಪಕ್ಷ ನಡೆಸಿದ ಪ್ರಯತ್ನಗಳು ವಿಫಲವಾದವು.

ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಾಸಕರ ಬಣದಿಂದ ಲಕ್ಷ್ಮಿನಾರಾಯಣ್ ಹಾಗೂ ಉಪಾಧ್ಯಕ್ಷಸ್ಥಾನಕ್ಕೆ ಫಜೂರುಲ್ಲಾ ಪಿರ್ ನಾಮ ಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಸುಬ್ಬರಾಜು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಮರನಾಥ್ ನಾಮಪತ್ರ ಸಲ್ಲಿಸಿದ್ದರು. ೧೭ ಮತ ಪಡೆದ ಶಾಸಕರ ಬಣದ ಲಕ್ಷ್ಮಿನಾರಾಯಣಪ್ಪ ಹಾಗೂ 16 ಮತ ಪಡೆದ ಫರೀದ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೆಸ್‌ನ ಸುಬ್ಬರಾಜು ಹಾಗೂ ಅಮರನಾಥ್ ತಲಾ ೧೩ ಮತ ಪಡೆದು ಪರಾಭವಗೊಂಡರು.

ಬಿಜೆಪಿಯ ಮಾರ್ಕೆಟ್ ಮೋಹನ್, ಸಾವಿತ್ರಮ್ಮ, ಮಂಜುಳಮ್ಮ ಮತ್ತು ಗಿರೀಶ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಾಸಕರ ಬಣದ ಪಕ್ಷೇತರ ಅಭ್ಯರ್ಥಿ ಪರ ಮತಚಲಾಯಿಸಿದರು. ಶಾಸಕರ ಬಣದ 13 ಸದಸ್ಯ ಬಲದ ಜೊತೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ನ ತಲಾ ಎರಡು ಮತ ಹಾಗೂ ಶಾಸಕರ ಮತ ಸೇರಿ 17 ಮತಗಳೊಂದಿಗೆ ಜಯಸಾಧಿಸಿ ನಗರಸಭೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. ಅಧಿಕ ಮತ ಪಡೆದವರನ್ನು ಅಧ್ಯಕ್ಷ ಉಪಾಧ್ಯಕ್ಷರನ್ನಾಗಿ ಚುನಾವಣಾಧಿಕಾರಿ ಅಶ್ವಿನ್ ಘೋಷಿಸಿದರು.

ಗೆದ್ದವರ ಬೆಂಬಲಿಗರು ನಗರಸಭೆ ಮುಂಭಾಗ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ನಗರ ಸೇರಿದಂತೆ ಗ್ರಾಮೀಣ ಭಾಗದಿಂದ ನೂರಾರು ಸಂಖ್ಯೆಯಲ್ಲಿ ಶಾಸಕರ ಬಣದ ಕಾರ್ಯಕರ್ತರು ಜಮಾಯಿಸಿದ್ದರು. ಶಾಸಕರಿಗೆ ಜೈಕಾರ ಕೂಗಿದರು. ಚುನಾವಣೆ ಹಿನ್ನಲೆಯಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

About The Author

Leave a Reply

Your email address will not be published. Required fields are marked *