ರಾಜ್ಯದ ಎಲ್ಲಾ ‘ರೈತ’ರಿಗೆ ಸಿಹಿಸುದ್ದಿ: ಮತ್ತೆ ‘ಕೃಷಿ ಭಾಗ್ಯ’ ಜಾರಿ, ಇನ್ಮುಂದೆ ಈ ಸೌಲಭ್ಯ ‘ಉಚಿತ’
1 min readರಾಜ್ಯ ಸರ್ಕಾರದಿಂದ ಕೃಷಿ ಭಾಗ್ಯ ಯೋಜನೆಯನ್ನು ಪುನರಾರಂಭಿಸೋದಕ್ಕೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಉಚಿತವಾಗಿ ಕೃಷಿ ಹೊಂಡ ನಿರ್ಮಾಣ ಸೌಲಭ್ಯ ರೈತರಿಗೆ ದೊರೆಯಲಿದೆ.
ಈ ಮೂಲಕ ರಾಜ್ಯದ ಎಲ್ಲಾ ರೈತರಿಗೆ ಸಿಹಿಸುದ್ದಿ ದೊರೆತಂತೆ ಆಗಿದೆ.
ಹೌದು ನಿನ್ನೆ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಕೃಷಿ ಭಾಗ್ಯ ಯೋಜನೆಯನ್ನು 2023-24ನೇ ಸಾಲಿನಲ್ಲಿ ರೂ.100 ಕೋಟಿಗಳ ಅನುದಾನದಲ್ಲಿ 24 ಜಿಲ್ಲೆಗಳ 106 ತಾಲ್ಲೂಕುಗಳಿಗೆ ಮಳೆಯಾಶ್ರಿತ ಕೃಷಿ ನೀತಿ-2014ರನ್ವಯ ಅನುಷ್ಠಾನಗೊಳಿಸುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಮಳೆಯಾಶ್ರಿತ ಕೃಷಿ ನೀತಿ-2014ರನವ್ಯ ರಾಜ್ಯದ 24 ಜಿಲ್ಲೆಯ 106 ತಾಲ್ಲೂಕುಗಳಲ್ಲಿ 2023-24ನೇ ಸಾಲಿನಲ್ಲಿ ಕೃಷಿ ಹೊಂಡ ಹಾಗೂ ಇತರೆ ಘಟಕಗಳನ್ನು ಒಳಗೊಂಡ ಕೃಷಿ ಭಾಗ್ಯ ಯೋಜನೆಯನ್ನು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಅನುಮೋದಿಸಿದೆ.
ಕೃಷಿ ಭಾಗ್ಯದ ಉದ್ದೇಶಗಳು
-ಮಳೆ ಆಧಾರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ಮಾರ್ಪಡಿಸುವುದು.
-ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಮೂಲಕ ಉತ್ಪಾದಕತೆಯನ್ನು ವೃದ್ಧಿಸುವುದು.
-ಕೃಷಿ ಆದಾಯವನ್ನು ಹೆಚ್ಚಿಸುವುದು.
-ಮಳೆ ನೀರು ವ್ಯರ್ಥವಾಗದಂತೆ ಆಯ್ದ ಸ್ಥಳಗಳಲ್ಲಿ ಕೃಷಿ ಹೊಂಡ ನಿರ್ಮಿಸಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು.
ಕೃಷಿ ಹೊಂಡ ನಿರ್ಮಾಣಕ್ಕೆ ಸಬ್ಸಿಡಿ ಸಾಲಸೌಲಭ್ಯ
ಇನ್ನೂ ಕೃಷಿ ಭಾಗ್ಯ ಪುನರಾರಂಭದಿಂದಾಗಿ ಕೃಷಿ ಹೊಂಡದ ನಿರ್ಮಾಣ ಸೌಲಭ್ಯ ರೈತರಿಗೆ ಸಿಗಲಿದೆ. ಸಾಮಾನ್ಯ ವರ್ಗದವರಿಗೆ ಕೃಷಿ ಹೊಂಡ ನಿರ್ಮಾಣ ಮಾಡೋದಕ್ಕಾಗಿ ಶೇ.80ರಷ್ಟು ಸಬ್ಸಿಡಿಯೊಂದಿಗೆ ಸಾಲಸೌಲಭ್ಯ ದೊರೆತರೇ, ಎಸ್ಸಿ, ಎಸ್ಟಿ ಸಮುದಾಯದವರಿಗೆ ಶೇ.90ರಷ್ಟು ಸಬ್ಸಿಡಿ ನೀಡಲಾಗುತ್ತದೆ.