ಈ ವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಇಂಡಿಯಾ ಬುಲಿಯನ್ ಆ್ಯಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್(ಐಬಿಜೆಎ) ವೆಬ್‌ಸೈಟ್ ಪ್ರಕಾರ, ಈ ವಾರದ ಆರಂಭದಲ್ಲಿಅಂದರೆ ಅಕ್ಟೋಬರ್ 16 ರಂದು, ಚಿನ್ನವು 10 ಗ್ರಾಮ್‌ಗೆ 59,037 ರೂ.ಗಳಷ್ಟಿತ್ತು. ಅದು ಈಗ ಅ.21ರಂದು 60,693 ರೂ.ಗೆ ಏರಿಕೆಯಾಗಿದೆ. ಈ ಒಂದೇ ವಾರದಲ್ಲಿ ಬೆಲೆ 1,656 ರೂ.ಗಳಷ್ಟು ಹೆಚ್ಚಾಗಿದೆ. ಮತ್ತೊಂದು ಕಡೆ, ಬೆಳ್ಳಿ ದರ ಕೂಡ ಕೆ.ಜಿಗೆ 1,419 ರೂ. ಹೆಚ್ಚಳವಾಗಿದೆ.
ಹಬ್ಬದ ಸೀಸನ್‌ನಲ್ಲಿಯೇ ಚಿನ್ನ ಬಲು ದುಬಾರಿಯಾಗಿದೆ. ಇನ್ನು ಮಾರುಕಟ್ಟೆ ವಿವರಣೆ ಪ್ರಕಾರ ದೀಪಾವಳಿ ಹಬ್ಬದ ವೇಳೆ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ. ಇದಕ್ಕೆಲ್ಲ ಕಾರಣ ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ, ಚಿನ್ನದ ಮೇಲಿನ ಹೂಡಿಕೆ ಹೆಚ್ಚಳ ಹಾಗೂ ಈ ಕೆಳಕಿನ ಕಾರಣಗಳಾಗಿವೆ. ಮದುವೆ ಶುಭ ಸಮಾರಂಭದ ಕಾರಣದಿಂದ ಈಗ ಚಿನ್ನ ಖರೀದಿಗೆ ಮುಂದಾಗುತ್ತಿರುವವರಿಗೆ ಚಿನ್ನದ ಬೆಲೆ ಏರಿಕೆ ಬಿಸಿ ತಟ್ಟೋದು ಗ್ಯಾರಂಟಿ.