ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ಗಂಗಮ್ಮನಗುಡಿ ರಸ್ತೆ ಅಗಲೀಕರಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ

1 min read

ಗಂಗಮ್ಮನಗುಡಿ ರಸ್ತೆ ಅಗಲೀಕರಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ

ಸಂಸದ ಡಾ. ಕೆ ಸುಧಾಕರ್ ಸ್ಪಷ್ಟನೆ

ಚಿಕ್ಕಬಳ್ಳಾಪುರ ನಗರಕ್ಕೆ ಸಂಪರ್ಕಕಲ್ಪಿಸುವ ಪ್ರಮುಖ ರಸ್ತೆಗಳಾದ ಎಂಜಿ ರಸ್ತೆ, ಬಿ.ಬಿರಸ್ತೆಗಳ ನಡುವೆ ರಾಷ್ಟಿಯ ಹೆದ್ದಾರಿಗಳು ಹಾದುಹೋಗುವುದರಿಂದ ನಗರದ ಸಂಚಾರಕ್ಕೆ ಎದುರಾಗಿರುವ ಕಂಟಕ ನಿವಾರಣೆ ಆಗಲಿದೆ. ಚಿಕ್ಕಬಳ್ಳಾಪುರಕ್ಕೆ ಕೀರ್ತಿ ತಂದಿರುವ ಬಜಾರ್‌ರಸ್ತೆ, ಎಂಜಿ ರಸ್ತೆಗಳ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳುವ ಏಕೈಕ ಕಾರಣಕ್ಕೆ ವಿಸ್ತರಣೆಗೆ ಮುಂದಾಗಿರುವುದು ಖಂಡನೀಯ. ನಾನು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಂಸದ ಸುಧಾಕರ್ ಕಿಡಿ ಕಾರಿದರು.

ಚಿಕ್ಕಬಳ್ಳಾಪುರ ನಗರದ ಜಿಲ್ಲಾಡಳಿತ ಭವನದ ಸಂಸದರ ಕಛೇರಿಯಲ್ಲಿ ಸಂಸದ ಡಾ. ಕೆ ಸುಧಾಕರ್ ರವರು ಸಾರ್ವಜನಿಕರ ಭೇಟಿ ಮತ್ತು ಕುಂದು ಕೊರತೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು.
ಚಿಕ್ಕಬಳ್ಳಾಪುರ ನಗರ ಪ್ರದೇಶದಲ್ಲಿ ಜನರು ಮನೆ ಮಳಿಗೆಗಳನ್ನು ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಬೆಂಗಳೂರು ಮಹಾನಗರದಲ್ಲಿ ಕೂಡ ಚಿಕ್ಕಪೇಟೆ, ಅಕ್ಕಿಪೇಟೆ,ಅವೆನ್ಯು ರಸ್ತೆ ಕೂಡ 20 ಅಡಿ ರಸ್ತೆಗಳೇ ಆಗಿವೆ. ಅಲ್ಲಿ ಎಂದೂ ಕೂಡ ಒಡೆದು ಹಾಕುವ ಕೆಲಸ ಮಾಡಿಲ್ಲ. ಹೊಡೆದು ಹಾಕಿದರೆ ಅವರ ಬದುಕಿನ ಪರಿಸ್ಥಿತಿ ಏನು?
ನಾನು ಈಗಾಗಲೇ 300 ಕೋಟಿ ರೂಪಾಯಿಗಳಲ್ಲಿ ರಾಷ್ಟಿಯ ಹೆದ್ದಾರಿಯನ್ನು ಎಂಜಿ ರಸ್ತೆಯಲ್ಲಿ ಮಾಡಿಸಿದ್ದೇನೆ. ಎನ್‌ಹೆಚ್ ಚದಲಪುರದಿಂದ ಹಿಡಿದು ಚಿಕ್ಕಬಳ್ಳಾಪುರ ನಗರ ಹಾದುಹೋಗುವಂತೆ 58ಕೋಟಿ ರೂಪಾಯಿಗಳಲ್ಲಿ ರಸ್ತೆ ಮಾಡಿಸಿದ್ದೇನೆ. ಈಗ ಹೊಸದಾಗಿ ಚಿಕ್ಕಬಳ್ಳಪುರದಿಂದ ಡಿಸಿ ಕಚೇರಿವರೆಗೆ ಕೂಡ ಬೈಪಾಸ್ ರಸ್ತೆ ಮಾಡಿಸುತ್ತಿದ್ದೇನೆ. ಇವೆಲ್ಲಾ ಕೇಂದ್ರ ಸರಕಾರದ ಯೋಜನೆಗಳೇ ಆಗಿವೆ. ಇಷ್ಟೆಲ್ಲಾ ರಸ್ತೆಗಳು ಇರುವಾಗ, ಸುಗಮವಾಗಿ ಸಂಚಾರ ನಿರ್ವಹಣೆ ಆಗಲಿದೆ. ಯಾವುದೂ ಕೂಡ ಸಮಸ್ಯೆ ಆಗಲ್ಲ. ಗಂಗಮ್ಮನಗುಡಿ ರಸ್ತೆ ಅಗಲೀಕರಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು,ಅವರು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ, ಜನರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಗಂಗಮ್ಮ ಗುಡಿ ರಸ್ತೆಯಲ್ಲಿರುವ ಅಂಗಡಿಗಳನ್ನು ಒಡೆಯುವ ಅವಶ್ಯಕತೆಯೇನೂ ಇಲ್ಲ. ಇದು ನಗರದ ಹೃದಯ ಭಾಗದಲ್ಲಿರತಕ್ಕಂತ ರಸ್ತೆ.ಇಲ್ಲಿ ಅಗಲೀಕರಣ ಮಾಡುವುದನ್ನು ಕೈಬಿಡಬೇಕು ಇಲ್ಲವಾದಲ್ಲಿ ಬಜಾರ್‌ರಸ್ತೆ , ಗಂಗಮ್ಮ ಗುಡಿರಸ್ತೆ ಅಂಗಡಿ ಮುಂಗಟ್ಟೆ ವ್ಯಾಪಾರಿಗಳ ಜತೆ ಸಭೆ ನಡೆಸಿ ಕಾನೂನು ರೀತಿ ಏನು ಕ್ರಮಕಥಗೊಳ್ಳಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು.

About The Author

Leave a Reply

Your email address will not be published. Required fields are marked *