ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಗಾಂಧಿ ನಡೆ

1 min read

ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಗಾಂಧಿ ನಡೆ
ಶಿಡ್ಲಘಟ್ಟದಲ್ಲಿ ಶಾಸ್ತಿಜೀ ಗಾಂಧೀಜಿ ಜಯಂತಿ ಆಚರಣೆ

ರಾಜ್ಯದ ಬೆಳಗಾವಿಯಲ್ಲಿ ೧೯೨೪ ರಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟಿಯ ಕಾಂಗ್ರೆಸ್ ಅಧಿವೇಶನಕ್ಕೆ ಈಗ ಶತಮಾನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಗಾಂಧಿ ನಡೆ ಮೂಲಕ ಸಮಾನತೆ ಮತ್ತು ಶ್ರಮದಾನದ ಬಗ್ಗೆ ಜಾಗೃತಿ ಮೂಡಿಸಿದರು.

ಶಿಡ್ಲಘಟ್ಟ ನಗರದ ಕಾಂಗ್ರೆಸ್  ಭವನದಲ್ಲಿ ಗಾಂಧಿ ಜಯಂತಿ ಅಂಗವಾಗಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ, ಗಾಂಧಿ ನಡೆ ಗೆ ಚಾಲನೆ ನೀಡಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಉದಯಶಂಕರ್ ನಂತರ ಮಾತನಾಡಿ, ಗಾಂಧೀಜಿ ಅಹಿಂಸೆಯ ಮೂಲಕವೇ ಹೋರಾಟದ ನೇತೃತ್ವ ವಹಿಸಿ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟರು. ಅವರ ಬದುಕು ಮತ್ತು ಹೋರಾಟ ಮಾದರಿ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಹನಾ ರಾಜೀವ್ ಗೌಡ ಮಾತನಾಡಿ, ನನ್ನ ಜೀವನವೇ ನನ್ನ ಸಂದೇಶ ಎಂದಿದ್ದ ಮಹಾತ್ಮ ಗಾಂಧಿ ಒಂದು ಶಕ್ತಿ. ತಮ್ಮ ಜೀವನದುದ್ದಕ್ಕೂ ಸತ್ಯ, ಸಮಾನತೆ, ಶಾಂತಿ, ಅಹಿಂಸೆ, ಜಾತ್ಯಾತೀತತೆ, ಅಸ್ಪಶ್ಯತೆ ನಿವಾರಣೆ, ಶ್ರಮದಾನ, ಸ್ವಚ್ಛತೆಯ ಮಹತ್ವವನ್ನೇ ಉಸಿರಾಡಿದ್ದ ಮಹಾತ್ಮ ಸ್ವಾತಂತ್ರಕ್ಕಾಗಿ ಸವೆಸಿದ ಹಾದಿ ಇಂದಿನ ಪೀಳಿಗೆಗೆ ಆದರ್ಶ. ಅವರು ಭಾರತೀಯ ರಾಷ್ಟಿಯ ಕಾಂಗ್ರೆಸ್‌ಗೆ ದೂರದೃಷ್ಟಿತ್ವ ಮತ್ತು ಮಾರ್ಗದರ್ಶನ ನೀಡಿ ಸ್ವಾವಲಂಬಿ ರಾಷ್ಟçದ ಕನಸನ್ನು ಪ್ರತಿಪಾದಿಸಿದ್ದರು ಎಂದು ಹೇಳಿದರು.

ಕೆಪಿಸಿಸಿ ಕೋಆರ್ಡಿನೇಟರ್ ರಾಜೀವ್ ಗೌಡ, ಜಿಲ್ಲಾ ಕಾಂಗ್ರೆಸ್ ಘಟಕದ ಮಹಿಳಾ ಅಧ್ಯಕ್ಷ ಯಾಸ್ಮಿನ್ ತಾಜ್, ಕಾಂಗ್ರೆಸ್ ಮುಖಂಡ ಆಂಜಿನಪ್ಪ ಪುಟ್ಟು, ಟಿ.ಕೆ.ನಟರಾಜ್, ಭಕ್ತರಹಳ್ಳಿ ಮುನೇಗೌಡ, ಗುಡಿಯಪ್ಪ, ಎ.ನಾಗರಾಜ್, ಅಪ್ಸರ್ ಪಾಷಾ, ಮುನೀಂದ್ರ, ಗೋವಿಂದರಾಜು ಇದ್ದರು.

About The Author

Leave a Reply

Your email address will not be published. Required fields are marked *