ಚಿಕ್ಕಬಳ್ಳಾಪುರದ ಪ್ರಶಾಂತ ನಗರದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ
1 min readದಸರಾ ಗಣಪತಿ ವಿಸರ್ಜನೆ ಅದ್ಧೂರಿ
ಚಿಕ್ಕಬಳ್ಳಾಪುರದ ಪ್ರಶಾಂತ ನಗರದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ
ಅದ್ಧೂರಿಯಾಗಿ ವಿಸರ್ಜನೆ ಮಾಡಿದ ಓಂಕಾರ ಗಣಪತಿ ಯುವಕರ ಬಳಗ
ಮೈಸೂರಿನಲ್ಲಿ ನಾಡಹಬ್ಬ ದಸರಾಗೆ ತೆರೆ ಬಿದ್ದಿದೆ. ವಿಶ್ವ ವಿಖ್ಯಾತ ಜಂಬೂ ಸವಾರಿ ಮೂಲಕ ನವರಾತ್ರಿ ಸಂಭ್ರಮಕ್ಕೆ ತೆರೆ ಬಿದ್ದಿದ್ದರೆ, ಚಿಕ್ಕಬಳ್ಳಾಪುರದಲ್ಲಿ ದಸರಾ ಗಣಪತಿ ವಿಸರ್ಜನೆ ಮೂಲಕ ದಸರಾ ಮಹೋತ್ಸವಗಳಿಗೆ ತೆರೆ ಬಿದ್ದಂತಾಗಿದೆ.
ಹೌದು, ದಸರಾ ಸಂಭ್ರಮ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಗಿಲ್ಲ. ಚಿಕ್ಕಬಳ್ಳಾಪುರದಲ್ಲಿಯೂ ಈ ಸಂಭ್ರಮ ಮುಗಿಲು ಮುಟ್ಟಿದೆ.
ಓಂಕಾರ ಗಣಪತಿ ಗೆಳೆಯರ ಬಳಗದಿಂದ ಸತತವಾಗಿ ದಸರಾ ಹಬ್ಬದ ೯ನೇ ವಾರ್ಷಿಕೋತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಓಂಕಾರ ಗಣಪತಿ ಗೆಳೆಯರ ಬಳಗದಿಂದ ಹಮ್ಮಿಕೊಳ್ಳಲಾಗುತ್ತಿದ್ದು, ದಸರಾ ಪ್ರಯುಕ್ತ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನೆಯನ್ನು ಇಂದು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.
ದಸರಾ ಉತ್ಸವದಲ್ಲಿ ರಂಗೋಲಿ ಸ್ಪರ್ಧ, ನೃತ್ಯ ಕಾರ್ಯಕ್ರಮ, ಲೆಮನ್ ಅಂಡ್ ಸ್ಪೂನ್, ಮ್ಯಾಜಿಕಲ್ ಪೇ ಚೇರ್ ಸಧ್ಪೆ, ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಕ್ರೀಡೆಗಳನ್ನು ಕಳೆದ 10 ದಿನಗಳಿಂದ ಹಮ್ಮಿಕೊಂಡಿದ್ದ ಓಂಕಾರ ಗಣಪತಿ ಗೆಳೆಯರ ಬಳಗ ಚಿಕ್ಕಬಳ್ಳಾಪುರ ನಗರದ ಪ್ರಶಾಂತ್ ನಗರದಲ್ಲಿ ವಿಶೇಷವಾಗಿ ದಸರಾ ಆಚರಿಸಿತ್ತು. ಗಣೇಶ ಹಬ್ಬ, ನಾಡ ದೇವಿ ಚಾಮುಂಡಿ ಮತ್ತು ದುರ್ಗಾದೇವಿ ಪೂಜೆಯನ್ನು ಸತತವಾಗಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಮೂಲಕ ಹಮ್ಮಿಕೊಂಡಿದ್ದರು.
9 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ತಾಯಿ ಚಾಮುಂಡಿ ದೇವಿಗೆ ಪ್ರತಿದಿನ ಹೂವಿನ ಅಲಂಕಾರ, ಹೋಮ, ಮತ್ತು ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು, ದೇಶದ ಉದ್ದಗಲಕ್ಕೂ ಶಕ್ತಿ ದೇವತೆಗಳ ಆರಾಧನೆಗೆ ಜನತೆ ಮುಂದಾಗುವ0ತೆ ಪ್ರಶಾಂತ ನಗರದ ಓಂಕಾರ ಗಣಪತಿ ಗೆಳೆಯರ ಬಳಗ ದಸರಾ ಗಣಪತಿ ಪ್ರತಿಷ್ಠಾಪಿಸಿ ವಿಸರ್ಜನೆ ಮಡಾಉವುದನ್ನು ಆಚರಿಸುತ್ತಿದ್ದಾರೆ.
ವಿವಿಧ ವಾದ್ಯಗಳ ಮೂಲಕ ಅದ್ಧೂರಿಯಾಗಿ ಪ್ರಶಾಂತ ನಗರ, ಎಂಜಿ ರಸ್ತೆ ಮೂಲಕ ಗಣಪತಿಯನ್ನು ಅದ್ಧೂರಿ ಮೆರವಣಿಗೆ ನಡೆಸಿ ನಂತರ ನಗರ ಹೊರವಲಯದಲ್ಲಿರುವ ದ್ರೌಪದಮ್ಮ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಗಣಪತಿ ವಿಸರ್ಜನೆ ಮೂಲಕ ಈ ಬಾರಿಯ ದಸರಾ ಉತ್ಸವಗಳಿಗೆ ತೆರೆ ಬಿದ್ದಂತಾಗಿದೆ.