ಹಾರೋಹಳ್ಳಿಯಲ್ಲಿ ಉಚಿತ ಪಶು ಚಿಕಿತ್ಸಾ ಶಿಬಿರ.
1 min readದೇವನಹಳ್ಳಿ ತಾ. ವಿಜಯಪುರ ಹೋಬಳಿ ಹಾರೋಹಳ್ಳಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಮತ್ತು ಪಶುಪಾಲನಾ ಇಲಾಖೆ ಇವರ ಸಹಭಾಗಿತ್ವದೊಂದಿಗೆ ಪಶುಗಳಿಗೆ ಹಮ್ಮಿಕೊಂಡಿದ್ದ ಉಚಿತ ಪಶು ಚಿಕಿತ್ಸಾ ಶಿಬಿರದಲ್ಲಿ ಜಿಕೆವಿಕೆಯ ಮುಖ್ಯ ಅಧಿಕ್ಷಕÀ ಪ್ರಕಾಶ್ ಮಾತನಾಡಿ ಈ ಶಿಬಿರದಲ್ಲಿ ರೈತರ ಜಾನುವಾರು ಗಳಿಗೆ ಜಂತುನಾಶಕ ಔಷಧಿ, ಕಾಲು-ಬಾಯಿ ಜ್ವರ ಲಸಿಕೆ, ಗಳಲುಬೇನೆ ರೋಗಲಸಿಕೆ, ಬರಡು ರಾಸು, ಚಿಕಿತ್ಸೆ ನೀಡಲಾಯಿತು. ಶಿಬಿರದ ವಿದ್ಯಾರ್ಥಿಗಳಿಂದ ರೈತರಿಂದ ಮಾಹಿತಿ ಹಾಗೂ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಂದ ರೈತರಿಗೆ ಆಧುನಿಕ ಪದ್ಧತಿಯ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಮೂರು ತಿಂಗಳ ಕಾಲ ಈ ಗ್ರಾಮದಲ್ಲಿ ವಿದ್ಯಾರ್ಥಿಗಳು ವಿವಿಧ ರೀತಿಯ ಕಾರ್ಯಗಳನ್ನು ಮಾಡುತ್ತಿದ್ದಾರೆ ಹಾಗೂ ಮನುಷ್ಯನಿಗೆ ಹೆಲ್ತ್ ಕಾರ್ಡ್ ಇದೆ ಮಣ್ಣಿಗೆ ಹೆಲ್ತ್ ಕಾರ್ಡ್ ಇದೆ ಆದರೆ ರಾಸುಗಳಿಗೆ ಹೆಲ್ತ್ ಕಾರ್ಡ್ ಇಲ್ಲ ಇದನ್ನು ರಾಸುಗಳಿಗೆ ಯಾವ ಯಾವ ಕಾಲದಲ್ಲಿ ಯಾವ ಯಾವ ಚಿಕಿತ್ಸೆ ನೀಡಲಾಗಿದೆ ಎಂಬ ಹೆಲ್ತ್ ಕಾರ್ಡ್ ಅನ್ನು ವಿದ್ಯಾರ್ಥಿಗಳು ತಯಾರಿಸಿ ನೀಡುತ್ತಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಉಪ ಪ್ರಧ್ಯಾಪಕ ಡಾ. ಸವಿತಾ ಮಾತನಾಡಿ, ಕೃಷಿ ವಿಶ್ವವಿದ್ಯಾನಿಲಯದಲ್ಲಿ ಮೂರು ವರ್ಷಗಳ ಕಾಲ ಕಲಿತ ವಿದ್ಯಾರ್ಥಿಗಳು ಈ ಮೂರು ತಿಂಗಳಲಿ,್ಲ ಈ ಗ್ರಾಮದಲ್ಲಿ ಅಲ್ಲಿ ಕಲಿತಂತಹ ಎಲ್ಲವನ್ನು ರೈತರ ಜೊತೆ ಸಮಾಲೋಚನೆ ನಡೆಸಿ ರೈತರ ಕಷ್ಟ ಮತ್ತು ತಿಳಿಯದ ಮಾಹಿತಿಯನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಹಾಗೂ ರೈತರ ಬೆಳೆದಂತ ಬೆಳೆಗಳಿಗೆ ಯಾವ ಯಾವ ಹಂತದಲ್ಲಿ ಯಾವ ಯಾವ ಔಷಧಿಯನ್ನು ಸಿಂಪಡಿಸಬೇಕು ಹಾಗೂ ಯಾವ ರೀತಿಯ ಕೃಷಿಯನ್ನು ಮಾಡಿದರೆ ಏನೇನ್ ಲಾಭ ಎನ್ನುವುದು, ವಿದ್ಯಾರ್ಥಿಗಳ ಮತ್ತು ರೈತರಲ್ಲೇ ನಡೆಯುವ ಸಮಾಲೋಚನಾ ಕಾರ್ಯಕ್ರಮ ಇದಾಗಿದೆ. ಈ ಶಿಬಿರದಲ್ಲಿ ೨೪ ವಿದ್ಯಾರ್ಥಿಗಳಿದ್ದು ಮೂರು ತಿಂಗಳ ಕಾಲ ಇದೇ ಗ್ರಾಮದಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡುತ್ತಾರೆ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮದೇವಿ, ಮುಖಂಡ ಶ್ರೀನಿವಾಸ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರಪ್ಪ , ಗ್ರಾಮದ ಮುಖಂಡರು ವೈದ್ಯ ಇಲಾಖೆಯ ವೈದ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು