ಬಿಜೆಪಿ ರಾಜ್ಯಾಧ್ಯಕ್ಷರ ಪರ ಮಾಜಿ ಶಸಾಕರ ಪ್ರವಾಸ
1 min readಬಿಜೆಪಿ ರಾಜ್ಯಾಧ್ಯಕ್ಷರ ಪರ ಮಾಜಿ ಶಸಾಕರ ಪ್ರವಾಸ
ಕುರುಡಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದ ಮಾಜಿಗಳು
ಯತ್ನಾಳ್ ವಿರುದ್ಧ ಮಾಜಿ ಶಸಾಕರ ಕಡಿ, ವಿಜೇಂದ್ರ ಪರ ಬ್ಯಾಟಿಂಗ್
ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ತಾರಕಕ್ಕೇರಿದೆ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರೋಧಿ ಬಣದ ಬಸವನಗೌಡ ಪಾಟೀಲ್ ಯತ್ನಾಳ್ ರಾಜ್ಯ ಬಿಜೆಪಿ ಮುಖಂಡರ ವಿರುದ್ದವೇ ವಾಗ್ದಾಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ಅದಕ್ಕೆ ಪ್ರತಿಯಾಗಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪರ ಮಾಜಿ ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ.
ರಾಜ್ಯದ ಮುಳಬಾಗಿಲಿನ ಕುರುಡುಮಲೆ ವಿನಾಯಕ ಸನ್ನಿದ್ದಾನಕ್ಕೆ ಆಗಮಿಸಿದ ಮಾಜಿ ಶಾಸಕರ ದಂಡು, ಮತ್ತೊಂದೆಡೆ ಮಾಜಿಗಳಿಗೆ ಅದ್ದೂರಿ ಸ್ವಾಗತ ಕೋರಿದ ಕೋಲಾರದ ಮಾಜಿ ಶಾಸಕರು, ಮಗದೊಂದೆಡೆ ಕುರುಡುಮಲೆ ವಿನಾಯಕನ ಎದುರಲ್ಲಿ ಮಾಜಿಗಳಿಂದ ವಿಶೇಷಪೂಜೆ, ಈ ದೃಶ್ಯಗಳು ಕಂಡು ಬಂದಿದ್ದು ಕೋಲಾರದಲ್ಲಿ. ಹೌದು ಇಂದು ಸುಮಾರು ೩೦ಕ್ಕೂ ಹೆಚ್ಚು ಮಾಜಿ ಶಾಸಕರ ದಂಡು ರಾಜ್ಯದ ಕೋಲಾರ ಜಿಲ್ಲಾ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ವಿನಾಯನಿಗೆ ವಿಶೇಷ ಪೂಜೆ ಸಲ್ಲಿಸಲು ಆಗಮಿಸಿದ್ದರು.
ಈ ವೇಳೆ ಕೆಜಿಎಪ್ ಮಾಜಿ ಶಾಸಕ ವೈ. ಸಂಪ0ಗಿ, ಬಿ.ಪಿ. ವೆಂಕಟಮುನಿಯಪ್ಪ ಹಾಗೂ ನೂರಾರು ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ರಾಜ್ಯ ಬಿಜೆಪಿಯಲ್ಲಿ ಬಣರಾಜಕೀಯ ತಾರಕಕ್ಕೇರಿದ್ದು, ಒಂದೆಡೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ಬಿಜೆಪಿ ಮುಖಂಡರ ವಿರುದ್ದ ಸರಣಿ ವಾಗ್ದಾಳಿ ನಡೆಸುತ್ತಿದ್ದರೆ, ಮತ್ತೊಂತೆಡೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪರ ಯತ್ನಾಳ್ ಅವರಿಗೆ ಟಾಂಗ್ ಕೊಡಲು ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಮಾಜಿ ಶಾಸಕರ ತಂಡ ರಾಜ್ಯದಲ್ಲಿ ವಿಜಯೇಂದ್ರ ಪರ ಧ್ವನಿ ಎತ್ತಲು ಸಿದ್ದವಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ರೇಣುಕಾಚಾರ್ಯ, ಕಟ್ಟಾಸಭ್ರಮಣ್ಯ ನಾಯ್ಡು, ಬಿ.ಸಿ.ಪಾಟೀಲ್, ಸೇರಿದಂತೆ ೩೦ಕ್ಕೂ ಹೆಚ್ಚು ಮಾಜಿ ಶಾಸಕರು ಕುರುಡುಮಲೆಯಲ್ಲಿ ಪೂಜೆ ಸಲ್ಲಿಸಿ ರಾಜ್ಯದಲ್ಲಿ ವಿಜಯೇಂದ್ರ ಪರ ಸಮಾವೇಶಗಳನ್ನು ಮಾಡಲು ಮುಂದಾಗಿದ್ದಾರೆ. ಈ ವೇಳೆ ಮಾತನಾಡಿದ ರೇಣುಕಾಚಾರ್ಯ, ರಾಜ್ಯದಲ್ಲಿ ಸೈಕಲ್ ತುಳಿದು ಬಿಜೆಪಿ ಕಟ್ಟಿದ್ದು ಯಡಿಯೂರಪ್ಪ, ದಿವಂಗತ ಅನಂತ್ ಕುಮಾರ್ ಭಾರತೀಯ ಜನತಾ ಪಾರ್ಟಿ ಕಟ್ಟಿದವ್ರ ವಿರುದ್ದ ಯತ್ನಾಳ್ ಹಗುರವಾಗಿ ಮಾತನಾಡುತ್ತಿದ್ದಾರೆ. ಯತ್ನಾಳ್ ಸ್ವಯಂ ಘೋಷಿತ ಹಿಂದೂ ಹುಲಿ, ಅವರಿಗೆ ಯಾವುದೇ ರಾಷ್ಟಿಯ ನಾಯಕರ ಬೆಂಬಲವೂ , ವಕ್ಪ್ ವಿರುದ್ದ ಹೋರಾಟ ಮಾಡು ಅಂತ ಯಾವ ರಾಷ್ಟಿಯ ನಾಯಕರು ಹೇಳಿಲ್ಲ, ಅವರು ಸೋನಿಯಾ ಗಾಂಧಿ ರಾಹುಲ್ ಗಾಂಧಿ ಅವರಿಂದ ಸುಪಾರಿ ಪಡೆದು ಬಿಜೆಪಿ ವಿರುದ್ದ ಕೆಲಸ ಮಾಡುತ್ತಿದ್ದಾರೆ ಅವರು ಹಿಂದೂ ಹುಲಿಯಲ್ಲ ಇಲಿ ಎಂದು ಲೇವಡಿ ಮಾಡಿದ್ರು.
ಬಿ.ವೈ. ವಿಜಯೇಂದ್ರ ಬಿಜೆಪಿ ನೇತೃತ್ವವಹಿಸಿಕೊಂಡಿರುವವರು ಮುಂದೆ ರಾಜ್ಯದ ಸಿಎಂ ಆಗುವವರು,ಯತ್ನಾಳ್ ಈ ಹಿಂದೆ ಪಕ್ಷದಿಂದ ಸಸ್ಪೆಂಡ್ ಆದಾಗ ಇಪ್ತಿಯಾರ್ ಕೂಟ ಮಾಡಿ ಟಿಪ್ಪು ಖಡ್ಗ ಇಟ್ಟುಕೊಂಡು ಒಡಾಡಿದ್ದವರು. ಅವರೊಬ್ಬ ಗೋಮುಖ ವ್ಯಾಘ್ರ, ಬಾಯಿ ಬಿಚ್ಚಿದ್ರೆ ನಾವು ಬಾಯಿ ಬಿಚ್ಚುತ್ತೇವೆ, ಬಿಜೆಪಿಗೆ ಹೊರಗಿನ ದುಷ್ಟಶಕ್ತಿ ಕಾಂಗ್ರೆಸ್, ಒಳಗಿನ ದುಷ್ಟಶಕ್ತಿ ಪಕ್ಷವಿರೋಧಿಗಳು, ಯತ್ನಾಳ್ ಕೂಡಾ ಕಾಂಗ್ರೆಸ್ ಮುಖವಾಣಿಯಂತೆ ಕೆಲಸ ಮಾಡ್ತಿದ್ದಾರೆ ಎಂದರು. ಮತ್ತೊಬ್ಬ ಮುಖಂಡ ಬಿಸಿ ಪಾಟೀಲ್ ಮಾತನಾಡಿ, ಇದ್ದು ಒಳಗೆ ಚೂರಿ ಹಾಕೋರು ಇದ್ದಾರೆ. ಬಿಜೆಪಿ ಶಾಲೂ ಹಾಕ್ಕೊಂಡು ಅದ್ಯಕ್ಷ ವಿರುದ್ದ ಮಾತನಾಡ್ತಾರೆ. ಯಾರು ಮಾತನಾಡಿದ್ರೆ, ಅವ್ರದ್ದು ಹೊರಗೆ ತೆಗೀತೀನಿ ಅಂತಾರೆ, ಅದೇನ್ ಗೊತ್ತೊ ತಾಕತ್ ಇದ್ದರೆ ತೆಗೀರಿ ಎಂದು ಬಿಸಿ ಪಾಟೀಲ್ ಸವಾಲು ಹಾಕಿದ್ರು.
ಕಟ್ಟಾ ಸಬ್ರಮಣ್ಯನಾಯ್ಡು ಮಾತನಾಡಿ, ಯತ್ನಾಳ್ ಅವರ ಈ ನಡವಳಿಕೆ ಇಷ್ಟು ಜನ ಮಾಜಿಗಳು ವಿರೋಧ ಮಾಡುತ್ತಿದ್ದೇವೆ, ಇದು ತಮಾಷೆಯಲ್ಲ, ನಾವೆಲ್ಲಾ ಒಗ್ಗಟ್ಟಾಗಿದ್ದೇವೆ, ಪಕ್ಷ ಸಂಘಟನೆ ಮಾಡುತ್ತೇವೆ. ರಾಜ್ಯದಲ್ಲಿ ಎನ್.ಡಿ.ಎ ಸರ್ಕಾರ ಬರಬೇಕು ಅನ್ನೋದು ನಮ್ಮ ಉದ್ದೇಶ. ಅದಕ್ಕಾಗಿ ನಾವೆಲ್ಲಾ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ ಎಂದರು. ಯತ್ನಾಳ್ ಕೀಳು ಮಟ್ಟಕ್ಕಿಳಿದು ಸದಾನಂದಗೌಡರ ವಿರುದ್ದ ಮಾತನಾಡುತ್ತಿದ್ದೆರೆ ನಾವು ಕೀಳುಮಟ್ಟಕ್ಕಿಳಿದು ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ರು.
ಒಟ್ಟಾರೆ ಚಳಿಗಾಲದ ಅಧಿವೇಶನ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮುಡಾ, ವಕ್ಫ್, ವಾಲ್ಮೀಕಿ ಹಗರಣಗಳ ವಿರುದ್ದ ಹೋರಾಟ ಮಾಡಬೇಕಿದ್ದ ಬಿಜೆಪಿಗೆ ತಮ್ಮ ಪಕ್ಷದಲ್ಲೆ ಭೂಗಿಲೆದ್ದಿರುವ ಬಣ ರಾಜಕೀಯದ ಬೆಂಕಿಯನ್ನು ಆರಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದ್ದು ಬಿಜೆಪಿ ಹೈಕಮಾಂಡ್ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತದೆ ಅನ್ನೋದು ಸದ್ಯ ಪ್ರಶ್ನೆಯಾಗಿದೆ..