ಮಾಜಿ ಸಚಿವ ಎನ್‌ಎಚ್ ಶಿವಶಂಕರರೆಡ್ಡಿ ಪ್ಲೆಕ್ಸ್ ತೆರವು
1 min readಮಾಜಿ ಸಚಿವ ಎನ್‌ಎಚ್ ಶಿವಶಂಕರರೆಡ್ಡಿ ಪ್ಲೆಕ್ಸ್ ತೆರವು
ಗೌರಿಬಿದನೂರಿನಲ್ಲಿ ಕಾಂಗ್ರೆಸ್ ಮುಖಂಡರ ಪ್ರತಿಭಟನೆ
ಮಾಜಿ ಸಚಿವರ ಪ್ಲೆಕ್ಸ್ ತೆರವುಗೊಳಿಸಿದ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಿ0ದ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ ಘಟನೆ ಇಂದು ಗೌರಿಬಿದನೂರಿನಲ್ಲಿ ನಡೆಯಿತು.
ಕನ್ನಡ ರಾಜ್ಯೋವತ್ಸವ ಪ್ರಯುಕ್ತ ಮಾಜಿ ಸಚಿವರಭಾವ ಚಿತ್ರ ಇರುವಕ್ಸ್ನ್ನು ನಗರದ ಹಲವು ಕಡೆ ಅಳವಡಿಸಿದ್ದು, ನಗರಸಭೆ ಅಧಿಕಾರಿಗಳು ಇಂದು ಬೆಳಗ್ಗೆ ಅವುಗಳನ್ನು ತೆರವುಗೊಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ನಗರಸಭೆ ಮುಂದೆ ಪ್ರತಿಭಟನೆ ಮಾಡಿದರು. ಕಾಂಗ್ರೆಸ್ ಮುಖಂಡ ಇಡಗೂರು ಸೋಮಯ್ಯ ಮಾತನಾಡಿ, ನಗರಸಭೆ ಅಧಿಕಾರಿ ಪೌರಾಯುಕ್ತೆ ಡಿಎಂ,ಗೀತಾ ಅವರು ಉದ್ದೇಶ ಪೂರ್ವಕವಾಗಿ ಪ್ಲೇಕ್ಸಗಳನ್ನು ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದರು.
ನಗರದ ಬಿಎಚ್ ರಸ್ತೆಗಳಲ್ಲಿ ಲೇಔಟ್‌ಗಳ ಪ್ರಚಾರ ಇರುವ ಹಲವು ಪ್ಲೆಕ್ಸ್ ಅಳವಡಿಸಿದ್ದಾರೆ, ಅದಕ್ಕೆ ಅಧಿಕಾರಿಗಳು ಮನ್ನಣೆ ನೀಡಿದ್ದಾರೆ, ಕಳೆದ 25 ವರ್ಷ ಶಾಸಕರಾಗಿ ಸಚಿವರಾಗಿ ತಾಲ್ಲೂಕಿನಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ಮಾಡಿರುವ, ಗಡಿಭಾಗದಲ್ಲಿ ಕನ್ನಡ ಕಂಪು ಹರಡಲು ಮಾಜಿ ಸಚಿವರ ಪ್ಲೆಕ್ಸ್ ಅಳವಡಿಸಿದ್ದರೆ ಅದನ್ನು ಉದ್ದೇಶಕ ಪೂರ್ವಕವಾಗಿ ತೆರವುಗೊಳಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಜಾಲಹಳ್ಳಿ ಗಂಗಾಧರ್ ಮತನಾಡಿ, ನಗರಸಭೆ ಅಧಿಕಾರಿಗಳು ಎಲ್ಲ ವಿಚಾರದಲ್ಲಿ ತಾರತಾಮ್ಯ ತೋರುತ್ತಿದ್ದಾರೆ, ಕಳೆದ ತಿಂಗಳು ಮಾಜಿ ಸಂಸದ ಬಿಎನ್ ಬಚ್ಚೇಗೌಡರ ಹುಟ್ಟುಹಬ್ಬದ ಶುಭಯ ಕೋರುವ ಪ್ಲೆಕ್ಸ್ ಹಾಕಲಾಗಿತ್ತು ಅಂದು ಇದೇ ಅಧಿಕಾರಿಗಳು ಏಕೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನೆ ಮಾಡಿದರು. ಬಿರಿಯಾನಿ ಪಾಯಿಂಟ್, ಹೊಟಲ್, ಜಿಮ್, ಲೇಔಟ್ ಚಿತ್ರಗಳು ಇರುವ ಪ್ಲೆಕ್ಸ್ ಅಳವಡಿಕೆ ಅನುಮತಿ ಯಾವರೀತಿ ಕೊಟ್ಟರು ಎಂದು ಪ್ರಶ್ನೆ ಮಾಡಿದರು.
ತಹಸೀಲ್ದಾರ್ ಮಹೇಶ್ ಪತ್ರಿ ಮಧ್ಯ ಪ್ರವೇಶಿಸಿ, ಮಾಜಿ ಸಚಿವರ ಪ್ಲೆಕ್ಸ್ ಅಳವಡಿಕೆ ಅನುಮತಿ ನೀಡಿದ ಮೇಲೆ ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ಕಲ್ಲೂಡಿ ಗಂಗಪ್ಪ, ಮುತ್ತುರಾಜ್, ಸುದರ್ಶನ್, ಶ್ರೀನಿವಾಸ್, ಬಂತ್ಲ ಶೀನ ಇದ್ದರು.