ಬಾಗೇಪಲ್ಲಿಗೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ನಂಟು ಅಪಾರ
1 min readಬಾಗೇಪಲ್ಲಿಗೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ನಂಟು ಅಪಾರ
ಆಂಧ್ರಕ್ಕೆ ಸೆಡ್ಡು ಹೊಡೆದು ಚಿತ್ರಾವತಿ ಬ್ಯಾರೇಜ್ ನಿರ್ಮಿಸಿದ ನಾಯಕ
ಎಸ್.ಎಂ. ಕೃಷ್ಣ ನಿರ್ಧಾರದಿಂದ ಬಾಗೇಪಲ್ಲಿಗೆ ಕುಡಿಯುವ ನೀರು
ಹಿರಿಯ ಮುತ್ಸದಿ, ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವರು, ಮಾಜಿ ರಾಜ್ಯಪಾಲರು ಹೀಗೆ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಎಸ್.ಎಂ. ಕೃಷ್ಣ ಅವರಿಗೂ ಬಾಗೇಪಲ್ಲಿಗೂ ಅಪಾರವಾದ ನಂಟಿದೆ. ಅವರು ಅಂದು ತಾಳಿದ ದೃಢ ನಿರ್ಧಾರದ ಫಲ ಇಂದು ಬಾಗೇಪಲ್ಲಿಗೆ ಜೀವ ಜಲ ಸಿಗುತ್ತಿದೆ. ಅಗಲಿದ ನಾಯಕ ಎಸ್.ಎಂ. ಕೃಷ್ಣ ಅವರ ಬಾಗೇಪಲ್ಲಿಯ ನೆನಪುಗಳು ಮೆಲಕು ಹಾಕುವುದಾದರೆ.
ಹೌದು, ಎಸ್.ಎಂ. ಕೃಷ್ಣ ಎಂಬಹ ನಾಯಕ ಅಂದು ದೃಢ ನಿರ್ಧಾರ ಮಾಡದೇ ಇದ್ದರೆ ಇಂದು ಬಾಗೇಪಲ್ಲಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಪ್ಪಿದ್ದಲ್ಲ. ಅವರ ತೀರ್ಮಾನದ ಫಲವಾಗಿ ಇಂದು ಇಡೀ ಬಾಗೇಪಲ್ಲಿ ಪಟ್ಟಣ ನೆಮ್ಮದಿಯಾಗಿ ನೀರು ಸಿಗುತ್ತಿದೆ. ಇದಕ್ಕೆ ಕಾರಣರಾದವರು ಮಾಜಿ ಸಿಎಂ ಎಸ್‌ಎಂ ಕೃಷ್ಣ. ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳ ನಡುವೆ ಏರ್ಪಟ್ಟಿದ್ದ ಜಲವಿವಾದ ರಾಷ್ಟçಮಟ್ಟದಲ್ಲಿ ಚರ್ಚೆಯ ವಿಷಯವಾಗಿತ್ತು.
ಅದನ್ನು ತಮ್ಮ ಚಾಣಾಕ್ಷತೆ ಹಾಗು ದಿಟ್ಟತನದಿಂದ ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್. ಎಂ.ಕೃಷ್ಣರವರು ನಿಯಿಸಿ ಬಾಗೇಪಲ್ಲಿ ಮತ್ತು ಗುಡಿಬಂಡೆ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಚಿತ್ರಾವತಿ ಜಲಾಶಯನ್ನು ಸಮರೋಪಾದಿಯಲ್ಲಿ ನಿರ್ಮಿಸಿ, ಇಲ್ಲಿನ ಜನರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಬರದ ತವರೂರು ಆಗಿರುವ ಬಾಗೇಪಲ್ಲಿ ಮತ್ತುಗುಡಿಬಂಡೆ ತಾಲ್ಲೂಕುಗಳಲ್ಲಿ ಹನಿ ನೀರಿಗೂ ಹಾಹಾಕಾರವಿದ್ದ ಸಂದರ್ಭವದು. ಮಳೆಗಾಲದಲ್ಲಿ ಅಪರೂಪವಾಗಿ ಹರಿದು ಆಂಧ್ರಪ್ರದೇಶಕ್ಕೆ ಹೋಗುತ್ತಿದ್ದ ಚಿತ್ರಾವತಿ ನಜದಿಯ ನೀರು ಕುಡಿಯಲು ಬಳಸಬೇಕೆಂಬ ಆಲೋಚನೆ ಅಂದಿನ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರಿಗೆ ಬಂತು, ಸರ್ಕಾರದ ಮೇಲೆ ಒತ್ತಡ ಹೇರಿ ಚಿತ್ರಾವತಿ ಜಲಾಶಯಕ್ಕೆ ಅನುಮೋದನೆ ಕೊಡಿಸಿದ್ದರು.
ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಿ.ವಿ.ಶ್ರೀರಾಮರೆಡ್ಡಿ ಸೋತು ಎನ್. ಸಂಪAಗಿ ಶಾಸಕರಾಗಿ ಆಯ್ಕೆಯಾಗಿದ್ದರು. ಚಿತ್ರಾವತಿ ಜಲಾಶಯ ನಿರ್ಮಾಣಕ್ಕೆ ಸಂಪ0ಗಿಯವರು ತಮ್ಮ ಅವಿರತ ಶ್ರಮ ಹಾಕಿ, ಜಲಾಶಯ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಎಸ್. ಎಂ.ಕೃಷ್ಣರವರ ಮೂಲಕ ಒತ್ತಡ ಹಾಕಿ ಚಿತ್ರಾವತಿ ಜಲಾಶಯ ನಿರ್ಮಾಣ ಕಾಮಗಾರಿಗೆ ವೇದಿಕೆ ಸಿದ್ದಪಡಿಸಿದ್ದರು.
ಈ ನಡುವೆ ಅಂದಿನ ಸಿಎಂ ಎಸ್.ಎಂ.ಕೃಷ್ಣ ಸರ್ಕಾರ ಚಿತ್ರಾವತಿ ಜಲಾಶಯ ನಿರ್ಮಾಣ ವಿಚಾರವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ತುರ್ತು ಕ್ರಮಗಳನ್ನು ತೆಗೆದುಕೊಂಡಿತ್ತು. ಈ ನಡುವೆ ಕೇಂದ್ರ ಜಲ ಆಯೋಗ ಮಧ್ಯಪ್ರವೇಶಿಸಿ ಚಿತ್ರಾವತಿ ಜಲಾಶಯ ನಿರ್ಮಾಣ ಸ್ಥಳಕ್ಕೆ ಬಂದು ಪರಿಶೀಲಿಸಿದರಲ್ಲದೆ, ಕೃಷಿ ಹಾಗು ನೀರಾವರಿಗಾಗಿ ರೂಪಿಸಿದ್ದ ಚಿತ್ರಾವತಿ ಜಲಾಶಯವನ್ನು ಕೇವಲ ಕುಡಿಯುವ ನೀರಿನ ಯೋಜನೆಯನ್ನಾಗಿ ಬದಲಾಯಿಸಿ ಕಾಮಗಾರಿ ಪ್ರಾರಂಭಿಸಲು ಹಸಿರು ನಿಶಾನೆ ತೋರಿತ್ತು.
ಕಾಮಗಾರಿ ಪ್ರಾರಂಭವಾದ ಒಂದೇ ವರ್ಷದಲ್ಲಿ ಚಿತ್ರಾವತಿ ಜಲಾಶಯ ಕಾಮಗಾರಿಯನ್ನು ಸಮರೋಪಾದಿಯಲ್ಲಿ ನಡೆಸಿ ಪೂರ್ಣಗೊಳಿಸಿದ ಕೀರ್ತಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರದ್ದಾಗಿತ್ತು. ಇದರ ಪರಿಣಾಮ ಬಾಗೇಪಲ್ಲಿ ಮತ್ತು ಗುಡಿಬಂಡೆ ಪಟ್ಟಣಗಳಿಗೆ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಿದ್ದು ಈಗ ಇತಿಹಾಸ. ಈ ಭಾಗದ ಜನರ ಮನಸ್ಸಿನಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಸಂಸದ ಆರ್.ಎಲ್. ಜಾಲಪ್ಪ, ಬಾಗೇಪಲ್ಲಿ ಶಾಸಕರಾಗಿದ್ದ ಜಿ.ವಿ.ಶ್ರೀರಾಮರೆಡ್ಡಿ, ಎನ್.ಸಂಪ0ಗಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆ ಎಂದರೆ ತಪ್ಪಾಗಲಾರದು.