ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಹಣಕಾಸು ವ್ಯವಸ್ಥೆ ಮೇಲ್ವಿಚಾರಣೆಗೆ ವಿದೇಶಿ ಕನ್ಸಲ್ಟನ್ಸಿ: ಆಚ್ಚರಿ, ಆಘಾತಕಾರಿ ಎಂದ ವಿಜಯೇಂದ್ರ

1 min read

ರಾಜ್ಯದ ಹಣಕಾಸು ವ್ಯವಸ್ಥೆ ಮೇಲ್ವಿಚಾರಣೆಗೆ‌ ವಿದೇಶಿ ಕನ್ಸಲ್ಟನ್ಸಿಯನ್ನು ನೇಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆ, ಅಚ್ಚರಿ ಹಾಗೂ ಆಘಾತಕಾರಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಸಿಎಂ ಸುತ್ತಲೂ ತಜ್ಞರು, ನುರಿತ ಅಧಿಕಾರಿಗಳ ತಂಡವೇ ಇದೆ.

ಆದರೂ ವಿದೇಶಿ ಸಲಹಾ ಸಂಸ್ಥೆಗೆ ಒಪ್ಪಿಸಿರುವುದು ಸಮಂಜಸವಲ್ಲ. ನಮ್ಮ ರಾಜ್ಯದ ಸೂಕ್ತ ವ್ಯಕ್ತಿಯನ್ನು ಗುರುತಿಸಲಿಲ್ಲವೇಕೆ ? ಎನ್ನುವುದು ಅರ್ಥವಾಗುತ್ತಿಲ್ಲ.

ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ. ಹೂಡಿಕೆಗಳು ಬಂದಿಲ್ಲ, ಎಲ್ಲ ರಂಗದಲ್ಲೂ ಸರ್ಕಾರ ವಿಫಲವಾಗಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಸೊರಗಿದೆ. ಸಿದ್ದರಾಮಯ್ಯ ನಾಯಕತ್ವದಲ್ಲಿ ಕರ್ನಾಟಕ ಬಳಲಿದೆ ಎಂದು‌ ಬಿ.ವೈ.ವಿಜಯೇಂದ್ರ ಟೀಕಿಸಿದರು.

ಹಣಕಾಸು ವ್ಯವಸ್ಥೆ ಸುಧಾರಣೆ, ಬಲವರ್ಧನೆಗೆ ನಮ್ಮಲ್ಲೇ ಇರುವ ಅನುಭವಿ ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿತ್ತು. ಎಸ್.ಎಂ.ಕೃಷ್ಣ, ಬಿ.ಎಸ್.ಯಡಿಯೂರಪ್ಪ ಆಡಳಿತ ಕಾಲದಲ್ಲಿ ನಮ್ಮ ರಾಜ್ಯ ಎಲ್ಲ ಹಂತದಲ್ಲೂ ಮುಂದಿತ್ತು ಎಂದರು.

ಯಾವುದೇ ವಿದೇಶಿ ತಜ್ಞರು ಸಿದ್ದರಾಮಯ್ಯಗೆ ಸಹಕಾರ ನೀಡುತ್ತಾರೆ ಎಂದು ಅನಿಸುತ್ತಿಲ್ಲ. ಕರ್ನಾಟಕ ಅಭಿವೃದ್ಧಿಶೀಲ ರಾಜ್ಯವಾಗಿದೆ. ರಾಜ್ಯಕ್ಕೆ ಬಂಡವಾಳ ಹೂಡಿಕೆ, ಆರ್ಥಿಕ ಸಂಪನ್ಮೂಲ ಬರುವುದನ್ನು ಸಿದ್ದರಾಮಯ್ಯ ಬಯಸುತ್ತಾರೋ ? ಇಲ್ಲವೋ ? ಎಂಬುದನ್ನು ರಾಜ್ಯಕ್ಕೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ಯಡಿಯೂರಪ್ಪ,‌ ವಿಜಯೇಂದ್ರ ಕಾರಣವೆಂಬ ಶಾಸಕ ಬಿ.ಪಿ.ಹರೀಶ್ ಹೇಳಿಕೆಗೆ ವಿಜಯೇಂದ್ರ ಗರಂ ಆಗಿ ಪಕ್ಷದ ಚೌಕಟ್ಟು ಯಾರೊಬ್ಬರೂ ಮೀರಬಾರದು. ಈ ರೀತಿ ಬಹಿರಂಗ ಚರ್ಚೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಸಿಡಿಮಿಡಿಗೊಂಡರು.

ನಮ್ಮ ಶಾಸಕ ಮಿತ್ರ ಹರೀಶ್ ಆಗಲೀ ಅಥವಾ ಬೇರೆ ಯಾರೇ ಆಗಲೀ ಅವರಿಗೆ ಒಂದು ಮಾತು ಹೇಳುವೆ. ಹೀಗೆ ಬಹಿರಂಗವಾಗಿ ಹೇಳಿಕೆ ಕೊಡುವದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುವುದಾದರೆ ಹೇಳಲಿ, ನನ್ನದೇನೂ ತಕರಾರಿಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.

ಆದರೆ ನಾನು ರಾಜ್ಯಾಧ್ಯಕ್ಷನಾಗಿ ಮನವಿ ಮಾಡುವುದೇನೆಂದರೆ, ಏನೇ ಸಮಸ್ಯೆ ಇದ್ದರೂ ಪಕ್ಷದ ಕಚೇರಿಗೆ ಬಂದು ಚರ್ಚೆ ಮಾಡಿರಿ. ಈ ರೀತಿ ಹೇಳಿಕೆ ಕೊಡುವುದರಿಂದ ಪಕ್ಷ, ಸಂಘಟನೆಗೆ ಲಾಭವಾಗದು. ಪಕ್ಷದಲ್ಲಿ ಗುಂಪುಗಾರಿಕೆ ಜಾಸ್ತಿಯಾಗುತ್ತಿಲ್ಲ, ಎಲ್ಲವನ್ನೂ ಸರಿ ಮಾಡುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕೇಂದ್ರದ ನಾಲ್ವರು ಸಚಿವರಿಗೆ ಅಭಿನಂದನೆ ಸೇರಿ ಎನ್ ಡಿಎ 19 ಸಂಸದರಿಗೆ ಸನ್ಮಾನ ಸಮಾರಂಭವನ್ನು ಪಕ್ಷದಿಂದ ಏರ್ಪಡಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ಬೆಳಗ್ಗೆ 11ಕ್ಕೆ ನಡೆಯಲಿದೆ‌. ಮಾಜಿ ಸಿಎಂ ಯಡಿಯೂರಪ್ಪ ಸೇರಿ ರಾಜ್ಯದ ನಾಯಕರು ಭಾಗವಹಿಸಲಿದ್ದಾರೆ.

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪರ್ಧೆ ಚಿಂತನೆಯು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿದೆ. ಉಪ ಚುನಾವಣೆ ಕುರಿತು ಚರ್ಚೆಗೆ ಶೀಘ್ರವೇ ಬಿಜೆಪಿ, ಜೆಡಿಎಸ್ ನಾಯಕರ ಜಂಟಿ ಸಭೆ ನಡೆಯಲಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

About The Author

Leave a Reply

Your email address will not be published. Required fields are marked *