ಸ್ವಾಮಿ ಜಪಾನಂದ ಐ ನೇತ್ರತ್ವದಲ್ಲಿ ಆಹಾರ ಕಿಟ್
1 min readಪ್ರವಾಹ ಸಂತ್ರಸ್ಥರಿಗೆ ಆಹಾರ ಕಿಟ್ ವಿತರಣೆ
ಸ್ವಾಮಿ ಜಪಾನಂದ ಐ ನೇತ್ರತ್ವದಲ್ಲಿ ಆಹಾರ ಕಿಟ್
ರಾಜ್ಯದಲ್ಲಿ ನೆರೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಪಾವಗಡದ ರಾಮಕೃಷ್ಣ ಸೇವಾಶ್ರಮ ಭಾವಿಸಿದೆ. ಈ ಬಾರಿ ಪರಿಹಾರ ಸಾಮಗ್ರಿಗಳನ್ನು, ಟಾರ್ಪಾಲು, ಅಕ್ಕಿ, ಬೇಳೆ, ಸಕ್ಕರೆ, ರವೆ, ಗೋಧಿ ಹಿಟ್ಟು, ಸಾಂಬಾರ್ ಪದಾರ್ಥಗಳು ಮತ್ತು ಸೀರೆ, ಹೊದಿಕೆ, ಪಂಚೆ, ಟವೆಲ್ ಗಳನ್ನು ಒಳಗೊಂಡ ಚೀಲಗಳನ್ನು ಇಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಭಕ್ತರು, ಸ್ವಯಂಸೇವಕರು ಸಿದ್ದಪಡಿಸಿದರು.
ರಾಜ್ಯದಲ್ಲಿ ನೆರೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಪಾವಗಡದ ರಾಮಕೃಷ್ಣ ಸೇವಾಶ್ರಮ ಭಾವಿಸಿದೆ. ಈ ಬಾರಿ ಪರಿಹಾರ ಸಾಮಗ್ರಿಗಳ ಚೀಲಗಳನ್ನು ಇಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಭಕ್ತರು, ಸ್ವಯಂಸೇವಕರು ಸಿದ್ದಪಡಿಸಿದರು. ರಾಜ್ಯದಲ್ಲಿ ಎದುರಾಗಿರುವ ನೆರೆ ಸಂತ್ರಸ್ಥರ ನೆರವಿಗೆ ಮೊದಲ ಹಂತದಲ್ಲಿ ಒಂದು ಸಾವಿರ ಚೀಲಗಳನ್ನು ಸಿದ್ದಪಡಿಸಲಾಗಿದೆ. ಉತ್ತರ ಕರ್ನಾಟಕ ಪ್ರವಾಹ ಸಂಸ್ತಸ್ಥರಿಗೆ ಆಹಾರ ಕಿಟ್ ಶ್ರೀ ರಾಮಕೃಷ್ಣ ಸೇವಾಶ್ರಮ, ಟೀಂ ವಿವೇಕಾನಂದ ಕರ್ನಾಟಕ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ವಿತರಿಸಲಾಗುವುದು ಎಂದು ಸ್ವಾಮಿ ಜಪಾನಂದ ಜೀ ತಿಳಿಸಿದ್ದಾರೆ.
ಸ್ವಾಮಿ ಜಪಾನಂದಜೀ ಮಹಾರಾಜ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ದಿನಸಿ ಮತ್ತಿತರ ಸಾಮಗ್ರಿಗಳು ಬೆಂಗಳೂರು, ಹುಬ್ಬಳ್ಳಿ, ಪಾವಗಡದ ಸಗಟು ವ್ಯಾಪಾರಿಗಳಿಂದ ಖರೀದಿ ಮಾಡಲಾಗಿದೆ. ಶುದ್ಧವಾದ, ಶುಚಿಯಾದ ಹಾಗೂ ಉತ್ಕೃಷ್ಟವಾದ ಪದಾರ್ಥಗಳನ್ನು ವಿತರಿಸುವುದು ಶ್ರೀ ರಾಮಕೃಷ್ಣ ಸೇವಾಶ್ರಮದ ಮೂರು ದಶಕಗಳಿಂದ ಬಂದಿರುವ ಸಂಪ್ರದಾಯ. ಹಾಗಾಗಿ ಭಗವಂತನ ಸೇವೆಯಂತೆ ಭಾವಿಸಿ ಈ ಕಾರ್ಯ ನೆರವೇರಿತು.
ಪೂಜ್ಯ ಸ್ವಾಮಿ ಜಪಾನಂದಜೀ ಅವರು ಹೇಳುವಂತೆ ಉತ್ತರ ಕರ್ನಾಟಕದ 5 ಸಾವಿರ ಸಂತ್ರಸ್ತ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಗುವುದು, ಕೇರಳ ರಾಜ್ಯದ ವಯನಾಡು ಭಾಗದಿಂದ ಅನೇಕ ರೀತಿಯ ಮನವಿಗಳು ಬರುತ್ತಿವೆ. ಆ ಪ್ರದೇಶಕ್ಕೂ ಸುಮಾರು ೫ ಸಾವಿರ ಕುಟುಂಬಗಳಿಗೆ ಪರಿಹಾರ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಸುಮಾರು 65ಕ್ಕು ಹೆಚ್ಚು ಸಂತ್ರಸ್ತರಿಗೆ ಆಶ್ರಯ ನೀಡಿದ ಶಾಲೆ ಸಂಪೂರ್ಣ ಭೂಗತವಾಗಿದ್ದು ಸಂತ್ರಸ್ತರೂ ತಮ್ಮ ಪ್ರಾಣ ಕಳೆದುಕೊಂಡಿರುವುದು ದುಃಖಕರ ಸಂಗತಿ ಎಂದರು.