ಫಸ್ಟ್ ಸರ್ಕಲ್ ಚಿಕ್ಕಬಳ್ಳಾಪುರ ಜಿಲ್ಲಾ ಉದ್ಯಮಿ ಸಮಾವೇಶ
1 min readಫಸ್ಟ್ ಸರ್ಕಲ್ ಚಿಕ್ಕಬಳ್ಳಾಪುರ ಜಿಲ್ಲಾ ಉದ್ಯಮಿ ಸಮಾವೇಶ
ಡಿ.21ರಂದು ಬಿಜಿಎಸ್ ಆಡಿಟೋರಿಯಂನಲ್ಲಿ ಪ್ರಥಮ ಸಮಾವೇಶ
ಚಿಕ್ಕಬಳ್ಳಾಪುರ ಹೊರವಲಯದ ಎಸ್‌ಜೆ ಸಿಐಟಿ ಕ್ಯಾಂಪಸ್ ಬಿಜಿಎಸ್ ಆಡಿಟೋರಿಯಂ ನಲ್ಲಿ ಡಿಸೆಂಬರ್ 21ರಂದು ಜಿಲ್ಲಾ ಮಟ್ಟದ ಪ್ರಥಮ ಉದ್ಯಮಿ ಒಕ್ಕಲಿಗ ಫಸ್ಟ್ ಸರ್ಕಲ್ 2025 ನಡೆಯಲಿದೆ ಎಂದು ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಸಂಸ್ಥೆಯ ರಾಜ್ಯ ಅಧ್ಯಕ್ಷ ನಾಗರಾಜ್ ಗೌಡ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಸಂಸ್ಥೆಯ ರಾಜ್ಯ ಅಧ್ಯಕ್ಷ ನಾಗರಾಜ್ ಗೌಡ, ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಂಬ ಸಂಸ್ಥೆ 2022ಕ್ಕೆ ಬಂದಿದ್ದು, ರಾಜ್ಯದಲ್ಲಿರುವ ಒಕ್ಕಲಿಗ ಸಮುದಾಯವನ್ನು ಉದ್ಯೋಗಿಗಳನ್ನಾಗಿಸದೆ ಉದ್ಯಮಿಗಳನಾಗಿಸುವುದೇ ಈ ಸಂಸ್ಥೆಯ ಉದ್ದೇಶವಾಗಿದೆ. ಇದರ ಅಂಗವಾಗಿ ರಾಜ್ಯದಲ್ಲಿ ಎಲ್ಲೆಲ್ಲಿ ಒಕ್ಕಲಿಗ ಸಮುದಾಯ ಬಲಿಷ್ಠವಾಗಿದೆ ಅಂತಹ ಜಿಲ್ಲೆಗಳಲ್ಲಿ ಫಸ್ಟ್ ಸರ್ಕಲ್ ಉದ್ಯಮಿ ವಕ್ಕಲಿಗ ಸಮಾವೇಶ ಮಾಡುತ್ತಿರುವುದಾಗಿ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ನಿರ್ಮಲಾನಂದ ನಾಥ ಸ್ವಾಮೀಜಿಯವರ ಕೃಪಾಕಟಾಕ್ಷ, ಮಂಗಳನಾಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಚಿಕ್ಕಬಳ್ಳಾಪುರದಲ್ಲಿ ಮೊದಲ ಸಮಾವೇಶ ನಡೆಯುತ್ತಿದೆ. ಈ ಸಮಾವೇಶದಲ್ಲಿ ಸಾನ್ನಿಭ್ಯವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾಂದನಾಥ ಸ್ವಾಮೀಜಿ ವಹಿಸಲಿದ್ದಾರೆ ಎಂದರು.
ಇವರೊ0ದಿಗೆ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಭೂತ ಸ್ವಾಮೀಜಿ, ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಮಂಗಳಾ ನಾಥ ಸ್ವಾಮೀಜಿ, ಫಸ್ಟ್ ಸರ್ಕಲ್ ಮಾರ್ಗದರ್ಶಿ ಜಯರಾಮ್ ರಾಯಪುರ ಇರುವರು. ಮುಖ್ಯ ಅತಿಥಿಗಳಾಗಿ ಸಂಸದ ಡಾ.ಕೆ. ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂಸಿ ಸುಧಾಕರ್, ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ, ಬಾಗೇಪಲ್ಲಿ ಶಾಸಕ ಎಸ್‌ಎನ್ ಸುಬ್ಬಾರೆಡ್ಡಿ, ಶಿಡ್ಲಘಟ್ಟ ಶಾಸಕ ರವಿಕುಮಾರ್ ಭಾಗವಹಿಸುವರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿರುವ ಉದ್ಯಮಿಗಳು ನೂತನವಾಗಿ ಉದ್ಯಮ ಆರಂಭಿಸಲಿರುವವರು ಉದ್ಯಮ ಪತಿಗಳಾಗಲು ಆಸಕ್ತಿ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಫಸ್ಟ್ ಸರ್ಕಲ್ ಉದ್ಯಮಿ ವಕ್ಕಲಿಗ ೨೦೨೫ರ ಆಯೋಜಕರು ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಯೋಜಕ ನಟರಾಜ ಗೌಡ, ರಾಜ್ಯ ಮಹಿಳಾ ಕಾರ್ಯದರ್ಶಿ ಮಂಜುಳಾ ಪ್ರಕಾಶ್, ರಾಜ್ಯ ಸಂಯೋಜಕ ನಾಗರಾಜ್ ಗೌಡ ಇದ್ದರು.