ರಾಜ್ಯದಲ್ಲಿ ರೆಡ್ ಹ್ಯಾಂಡ್ ಆಗಿ ಆಸ್ಪತ್ರೆಯಲ್ಲಿ ಭ್ರೂಣ ಪತ್ತೆ..!!
1 min readರಾಜ್ಯದಲ್ಲಿ ರೆಡ್ ಹ್ಯಾಂಡ್ ಆಗಿ ಆಸ್ಪತ್ರೆಯಲ್ಲಿ ಭ್ರೂಣ ಪತ್ತೆ..!! 14ರಿಂದ 16ವಾರಗಳ ಭ್ರೂಣ ಪತ್ತೆ..!! ಆಸ್ಪತ್ರೆ ಸೀಚ್ ಮಾಡುವುದಾಗಿ ಡಿಹೆಚ್‌ಓ ಹೇಳಿಕೆ..!!
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿರುಮಲಶಟ್ಟಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಸಂದ್ರ ಬಳಿ ಆಸ್ಪತ್ರೆಯೊಂದರಲ್ಲಿ ಮೊಟ್ಟ ಮೊದಲ ಭ್ರೂಣ ಹತ್ಯೆ ಕೇಸ್ ಪತ್ತೆಯಾಗಿದೆ.. ಚನ್ನಸಂದ್ರ ಮುಖ್ಯ ರಸ್ತೆಯ ಎಸ್‌ಪಿಜಿ ಆಸ್ಪತ್ರೆ ಮೇಲೆ ಬುಧವಾರ ರಾತ್ರಿ ದಾಳಿ ಮಾಡಿದ್ದಾರೆ.. ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ಆಸ್ಪತ್ರೆಯಲ್ಲಿ ರೆಡ್ ಹ್ಯಾಂಡ್ ಆಗಿ ಭ್ರೂಣ ಪತ್ತೆ ಹೆಚ್ಚಿ ವಶಪಡಿಸಿಕೊಂಡಿದ್ದಾರೆ..
ಆಸ್ಪತ್ರೆಯಲ್ಲಿ ಭ್ರೂಣ ಸಿಕ್ಕಿರುವುದು ರಾಜ್ಯದಲ್ಲಿಯೇ ಪ್ರಥಮ ಎಂದು ಅಧಿಕಾರಿಗಳು ತಿಳಿಸಿದ್ದಾರೆ.. ಈ ನಡುವೆ ಅಧಿಕಾರಿಗಳ ದಾಳಿಯಾಗ್ತಿದ್ದಂತೆ ಆಸ್ಪತ್ರೆ ಮಾಲೀಕ ಶ್ರೀನಿವಾಸ್ ಪರಾರಿಯಾಗಿದ್ದಾರೆ.. ಆಸ್ಪತ್ರೆನ ಸೀಜ್ ಮಾಡುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಇನ್ನು ಹೊಸಕೋಟೆ, ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ ಸೇರಿದಂತೆ ಹಲವು ಆಸ್ಪತ್ರೆಗಳ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದರು.. ಎಲ್ಲೂ ಭ್ರೂಣ ಪತ್ತೆ ಆಗಿರಲಿಲ್ಲ.. ಹೊಸಕೋಟೆಯ ತಿರುಮಲಶಟ್ಟಿಹಳ್ಳಿ, ಚನ್ನಸಂದ್ರ ಮುಖ್ಯ ರಸ್ತೆಯ ಎಸ್ ಪಿಜಿ ಆಸ್ಪತ್ರೆಯ ಮೇಲೆ ದಾಳಿ ಮಾಡಿ ಶೋಧಕಾರ್ಯ ಮಾಡಿದ್ದಾರೆ..
ಈ ವೇಳೆ ಡಸ್ಟ್ ಬಿನ್‌ನಲ್ಲಿ ಸುಮಾರು 14ರಿಂದ ರಿಂದ 16ವಾರಗಳ ಹೆಣ್ಣು ಭ್ರೂಣ ಪತ್ತೆಯಾಗಿದೆ..
ಒಂದೇ ದಿನ ಎರಡು ಭ್ರೂಣ ಹತ್ಯೆಯಾಗಿರೊ ಬಗ್ಗೆ ಸ್ಥಳೀಯರಿಂದ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ.. ಸದ್ಯ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಒಂದು ಭ್ರೂಣ ಸಿಕ್ಕಿದೆ.. ಭ್ರೂಣವನ್ನು ಪ್ಯಾಕ್ ಮಾಡಿ ಹೆಚ್ಚಿನ ತನಿಖೆಗಾಗಿ ಲ್ಯಾಬ್ಗೆ ರವಾನೆ ಮಾಡಲಾಗಿದೆ.. ಈ ಬಗ್ಗೆ ಸ್ಥಳೀಯ ತಿರುಮಲಶೆಟ್ಟಹಳ್ಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು.. ಭ್ರೂಣ ಹತ್ಯೆಗೆ ಸಂಬಂಧಪಟ್ಟ ಪೋಷಕರ ವಿರುದ್ದವೂ ಕ್ರಮ ಕೈಗೊಳ್ಳಲಾಗುವುದು.. ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.. ಆಸ್ಪತ್ರೆಯಲ್ಲಿ ಸಿಕ್ಕಿರುವ ಭ್ರೂಣ ಹೆಣ್ಣು ಮಗುವಿನದ್ದು ಎಂಬ ಅಂಶ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.. ಸದ್ಯ ಆಸ್ಪತ್ರೆಯ ರೋಗಿಗಳನ್ನು ಬೇರೆಡೆ ಸ್ಥಳಾಂತರಿಸಿ ಲ್ಯಾಬ್ ಹಾಗೂ ಆಸ್ಪತ್ರೆನ ಸೀಜ್ ಮಾಡೋದಾಗಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ..
ಇತ್ತಿಚ್ಚಿಗೆ ರಾಜ್ಯದ ಒಂದು ಕಡೆ ಭ್ರೂಣ ಹತ್ಯೆ ಪ್ರಕರಣಗಳು ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಭ್ರೂಣ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವುದು ತೀವ್ರ ಕುತೂಹಲ ಕೆರಳಿಸಿದೆ..