ಕೋಚಿಮುಲ್ ವಿರುದ್ದ ಉಪವಾಸ ಸತ್ಯಾಗ್ರಹ
1 min readಕೋಚಿಮುಲ್ ವಿರುದ್ದ ಉಪವಾಸ ಸತ್ಯಾಗ್ರಹ
ಹಾಲಿನ ಬೆಲೆ ಕಡಿತದ ವಿರುದ್ಧ ಸಂಸದರ ಆಕ್ರೋಶ
ಕೂಡಲೇ ಆದೇಶ ವಾಪಸ್ ಪಡೆಯಲು ಒತ್ತಾಯ
ಹಾಲಿನ ದರ ಕಡಿತಗೊಳಿಸಿರುವ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಧೋರಣೆ ಖಂಡಿಸಿ ಸಂಸದ ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂದೆ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಬಿಜೆಪಿ ಕಾರ್ಯಕರ್ತರು ನಡೆಸಿದರು.
ಹಾಲಿನ ದರ ಕಡಿತಗೊಳಿಸಿರುವ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಧೋರಣೆ ಖಂಡಿಸಿ ಸಂಸದ ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂದೆ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಬಿಜೆಪಿ ಕಾರ್ಯಕರ್ತರು ನಡೆಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ನೀಡುವ ಹಾಲು ದರ ಕಡಿಮೆ ಮಾಡಿ ಗ್ರಾಹಕರಿಗೆ ಏರಿಕೆ ಮಾಡಿರುವ ಕ್ರಮದ ವಿರುದ್ಧ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕಛೇರಿ ಮುಂದೆ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ಈ ವೇಳೆ ವಿಭಿನ್ನವಾಗಿ ಹಸುಗಳನ್ನು ಕರೆತಂದು ಅವುಗಳಿಗೆ ಬಾಳೆ ಹಣ್ಣು ತಿನ್ನಿಸುವ ಮೂಲಕ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಬೇಕೆ ಬೇಕು ಕೋಚಿಮುಲ್ ವಾಪಸ್ ಬೇಕು, ಎರಡು ರೂಪಾಯಿ ಲೂಟಿ ಕಾಂಗ್ರೆಸ್ ನ ಗ್ಯಾರಂಟಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ಹೊರ ಹಾಕಿದ್ರು..
ಈ ವೇಳೆ ಮಾತನಾಡಿದ ಸಂಸದ ಡಾ.ಕೆ. ಸುಧಾಕರ್, ಕೋಚಿಮುಲ್ ಕಡಿತಗೊಳಿಸಿರುವ ಹಾಲಿನ ದರ ಆದೇಶವನ್ನು ಹಿಂಪಡೆಯಬೇಕೆAದು ಆಗ್ರಹಿಸಿದರು. ಅಲ್ಲದೇ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕವಾಗಿದ್ದ ಹಾಲು ಒಕ್ಕೂಟವನ್ನು ಮತ್ತೆ ಜಿಲ್ಲೆಗೆ ವಾಪಸ್ಸು ನೀಡಬೇಕೆಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೀಡಿ ಕಾರಿದ್ರು.
ಹೈನುಗಾರಿಕೆ ಮಾಡುವ ರೈತರಿಗೆ ಬೆಲೆ ಕಡಿತದಿಂದ ತೊಂದರೆಯಾಗಿದೆ ಹಸುಗಳಿಗೆ ಬಳಸುವ ಪಶು ಆಹಾರದ ಬೆಲೆ ಏರಿಕೆಯಾಗಿದೆ. ಈಗ ಹಸು ಸಾಕಬೇಕಾದ್ರೆ ತಿಂಗಳಿಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತಿದೆ. ಇಂತಹ ಕಷ್ಟದ ಸಂದರ್ಭದಲ್ಲಿ ರೈತರು ಹಾಲು ನಾಡಿನ ಜನರಿಗೆ ನೀಡಿದರೆ, ಅದರ ಮಾರುಕಟ್ಟೆ ಮಾಡಲು ಒಕ್ಕೂಟಕ್ಕೆ ಯೋಗ್ಯತೆ ಇಲ್ಲ, ಇಂತಹವರು ಯಾಕೆ ಆಡಳಿ ಮಾಡುತ್ತಿದ್ದಿರಾ, ಕಾನೂನು ಪ್ರಕಾರ ಐದು ವರ್ಷಗಳ ನಿಮ್ಮ ಅವಧಿ ಮುಗಿದರು ನಾಚಿಕೆ ಇಲ್ಲದೆ ನಿಮ್ಮ ಆಡಳಿತ ವಿಸ್ತರಣೆ ಮಾಡುವುದಕ್ಕೆ ರಾಜಕೀಯ ಪ್ರಭಾವ ಬಳಸಿ ಆಡಳಿತ ಮಾಡುತ್ತಿದ್ದಿರಾ, ಇದು ಎಷ್ಟರ ಮಟ್ಟಿಗೆ ಸರಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.