ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಭೂಮಿ ನೀಡಲು ನಿರೀಕರಿಸಿ ರೈತರ ಹೋರಾಟ

1 min read

ರಾಜಧಾನಿಗೆ ತೆರಳುತ್ತಿದ್ದ ರೈತರನ್ನು ತಡೆದ ಪೊಲೀಸರು
ಭೂಮಿ ನೀಡಲು ನಿರೀಕರಿಸಿ ರೈತರ ಹೋರಾಟ
ಸರ್ಕಾರದ ಕ್ರಮಕ್ಕೆ ಶಿಡ್ಲಘಟ್ಟ ರೈತರ ಆಕ್ರೋಶ

ಕೆಐಎಡಿಬಿ ಭೂ ಸ್ವಾದೀನ ಪ್ರಕ್ರಿಯೆ ವಿರೋಧಿಸಿ ಶಿಡ್ಲಘಟ್ಟದಲ್ಲಿ ಇಂದು ರೈತರು ಬೀದಿಗಿಳಿದಿದ್ದರು. ಭೂ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಮನವಿ ನೀಡಲು ಬೆಂಗಳೂರಿಗೆ ತೆರಳುತ್ತಿದ್ದ ರೈತರನ್ನು ಪೊಲೀಸರು ತಡೆದ ಪರಿಣಾಮ ಆಕ್ರೋಶ ವ್ಯಕ್ತಪಡಿಸಿದ ರೈತರು, ಶಿಡ್ಲಘಟ್ಟದಲ್ಲಿಯೇ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಒಟ್ಟು 2,800 ಎಕರೆ ಭೂ ಪ್ರದೇಶವನ್ನು ಸ್ವಾದೀನ ಮಾಡಿಕೊಳ್ಳಲು ರಾಜ್ಯ ಸರ್ಕಾರ ಈಗಾಗಲೇ ಮುಂದಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಬಂಜರು ಭೂಮಿ, ಕೃಷಿಗೆ ಯೋಗ್ಯವಲ್ಲದ ಭೂಮಿ ಎಂಬ ಕಾರಣ ನೀಡಿದ್ದು, ಸರ್ಕಾರದ ಕ್ರಮವನ್ನು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಅವರೂ ಒಪ್ಪಿ, ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಮುಂದಾಗಿದ್ದು, ಇದರ ವಿರುದ್ಧ ರೈತರು ತಿರುಗಿ ಬಿದ್ದಿದ್ದಾರೆ.

ಶಿಡ್ಲಘಟ್ಟ ಎಂದರೆ ರೇಷ್ಮೇ ನಗರಿ. ಈ ತಾಲೂಕಿನಲ್ಲಿ ಅತಿ ಹೆಚ್ಚು ರೇಷ್ಮೇ ಬೆಳೆದು ವಿಶ್ವದಾದ್ಯಂತ ಬಳಸಲಾಗುತ್ತಿದೆ. ಅಲ್ಲದೆ ತರಕಾರಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆದುಕೊಂಡು ರೈತರು ಜೀವನ ನಡೆಸುತ್ತಿದ್ದಾರೆ. ಪಿರಮಿಡ್ ಆಕಾರದ ಬಾವಿವಿಗಳು ನೂರು ಅಢಿಗೂ ಹೆಚ್ಚು ಆಳ ತೋಡಿ ಅದರಲ್ಲಿ ಸಿಗುವ ನೀರಿನಿಂದ ಬೆಳೆ ಬೆಳೆದು ಜೀವನ ಕಟ್ಟಿಕೊಂಡಿದ್ದು, ಸರ್ಕಾರಿ ರೈತರ ಅನ್ನ ಕಸಿದುಕೊಳ್ಳಲು ಮುಂದಾಗಿದೆ ಎಂದು ರೈತಸಂಘದ ಮುಖಂಡ ಭಕ್ತರಹಳ್ಳಿ ಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಮೇಲೆ ಅವಲಂಭಿಸದೆ, ರೈತರು ದುಡಿದು ಜೀವನ ಸಾಗಿಸುತತಿದ್ದರೆ, ರೈತರ ತಟ್ಟೆಯಲ್ಲಿನ ಅನ್ನ ಕಸಿಯಲು ಸರ್ಕಾರ ಮುಂದಾಗಿರೋದು ವಿಪರ್ಯಾಸ. ಇದು ಫಲವತ್ತಾದ ಕೃಷಿ ಭೂಮಿಯಾಗಿದ್ದು, ಇಂತಹ ಜಮೀನು ಕಳೆದುಕೊಂಡು ನೂರಾರು ಕುಟುಂಬಗಳು ಬೀದಿಗೆ ಬೀಳುವುದು ಖಚಿತ. ಸರ್ಕಾರ ತನ್ನ ಸ್ವಾರ್ಥಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದ್ದು, ಸರ್ಕಾರದ ಈ ಕ್ರಮ ಖಂಡಿಸಿ, ಮನವಿ ಸಲ್ಲಿಸಲು ಬೆಂಗಳೂರಿಗೆ ಹೊರಟಿದ್ದ ರೈತರನ್ನು ಪೊಲೀಸರು ತಡೆದಿರುವುದು ಅಮಾನವೀಯ ಎಂದರು.

ಶಿಡ್ಲಘಟ್ಟ ತಾಲೂಕಿನ ಹೆಣ್ಣೆಂಗೂರು, ಕೊಲಿಮಿ ಹೊಸೂರು, ಅರೀಕೆರೆ, ಅತ್ತಿಗಾನಹಳ್ಳಿ, ಸೇರಿದಂತೆ 15 ಹಳ್ಳಿಗಳ ಜಮೀನು ಸ್ವಾಧೀನ ಮಾಡಿಕೊಳ್ಳಲು ಸರ್ಕಾರ ಮುಂದಾಗಿದ್ದು, ಸರ್ಕಾರದ ಭೂ ಸ್ವಾದೀನ ಪ್ರಕ್ರಿಯೆ ವಿರೋಧಿಸಿ ಬೆಂಗಳೂರಿನ ಖನಿಜ ಭವನದ ಮುಂದೆ ಇಂದು ಪ್ರತಿಭಟನೆ ಮಾಡಲು ರೈತರು ಮುಂದಾಗಿದ್ದರು. ಖನಿಜ ಭವನದ ಮುಂದೆ ಪ್ರತಿಭಟನೆ ನಡೆಸಲು ರೈತರು ಬಸ್‌ಗಳಲ್ಲಿ ಬೆಂಗಳೂರಿಗೆ ಹೊರಟಿದ್ದು, ಅವರನ್ನು ಪೊಲೀಸರು ತಡೆದಿದ್ದಾರೆ.

ಶಿಡ್ಲಘಟ್ಟ ತಾಲೂಕಿನ ಜಂಗಮ ಕೋಟೆ ಕ್ರಾಸ್‌ನಲ್ಲಿಯೇ ರೈತರನ್ನು ತಡೆಯಲಾಗಿದ್ದು, ರೈತರಿಂದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕೆಐಎಡಿಬಿ ಅಧಿಕಾರಿಗಳು ಸ್ಥಳಕ್ಕೆ ಬಂದು ಭೂ ಸ್ವಾಧೀನ ಪ್ರಕ್ರಿಯೆ ಕೈಬಿಟ್ಟಿರುವುದಾಗಿ ಹೇಳೋವರೆಗೂ ಇಲ್ಲಿಂದ ಕದಲೋದಿಲ್ಲ ಎಂದು ರೈತರು ಪಟ್ಟು ಹಿಡಿದು ಸುಡೋ ಬಿಸಿಲಿನಲ್ಲಿಯೇ ಪ್ರತಿಭಟನೆ ನಡೆಸಿದರು.

 

About The Author

Leave a Reply

Your email address will not be published. Required fields are marked *