ಸಾಗುವಳಿ ಭೂಮಿ ಪಹಣಿಗಾಗಿ ರೈತರ ಪರದಾಟ
1 min readಸಾಗುವಳಿ ಭೂಮಿ ಪಹಣಿಗಾಗಿ ರೈತರ ಪರದಾಟ
ಅರಣ್ಯ ಇಲಾಖೆ ಅಧಿಕಾರಿಗಳಿಂದ ನಿರಂತರ ಕಿರುಕುಳ
ತಹಸೀಲ್ದಾರ್ ದೀಪ್ತಿ ಅವರಿಗೆ ರೈತರಿಂದ ಮನವಿ
ಮಂಚೇನಹಳ್ಳಿ ತಾಲೂಕಿನ ಬಗರ್ ಹುಕ್ಕುಂ ಭೂ ಸಾಗುವಳಿದಾರ ರೈತರು ಕಳೆದ 40 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದು ಭೂ ಹಕ್ಕು ಮಂಜೂರಾತಿ ಪಡೆಯುವುದಕ್ಕಾಗಿ ನಮೂನೆ 53,57 ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಅರ್ಜಿಗಳ ಸ್ಥಿತಿ ಗತಿ ಕೇಳುವವರೇ ಇಲ್ಲವಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಮಂಚೇನಹಳ್ಳಿ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಬಗರ್‌ಹುಕ್ಕುಂ ರೈತರು, 40 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದು ಭೂ ಹಕ್ಕು ಮಂಜೂರಾತಿ ಪಡೆಯುವುದಕ್ಕಾಗಿ ನಮೂನೆ 53, 57 ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೆಲ ರೈತರ ಅರ್ಜಿಗಳ ಸ್ಥಿತಿ ತಿಳಿಯದಾಗಿದ್ದರೆ, ಇನ್ನು ಕೈಲ ರೈತರಿಗೆ ಸಾಗುವಳಿ ಚೀಟಿ ನೀಡಿದ್ದರೂ, ಜಮೀನಿನ ವಿಸ್ತೀರ್ಣ ಪಹಣಿಯಲ್ಲಿ ತೋರುಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಬ0ಧಪಟ್ಟ ಅಧಿಕಾರಿಗಳು ಕೂಡಲೇ ದಾಖಲೆಗಳನ್ನು ಪರಿಶೀಲಿಸಿ, ರೈತರ ಸಮಸ್ಯೆ ಬಗೆಹರಿಸಿಕೊಡಬೇಕೆಂದು ಆಗ್ರಹಿಸಿ ತಾಲೂಕು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸಿಲ್ದಾರ್ ದೀಪ್ತಿ, ಆದಷ್ಟು ಶೀಘ್ರದಲ್ಲಿ ರೈತರ ಸಮಸ್ಯೆ ಮೇಲಾಧಿಕಾರಿಗಳಿಗೆ ಸ್ಥಳೀಯ ಶಾಸಕರು ಮತ್ತು ಸಚಿವರಿಗೆ ತಿಳಿಸಿ ಸಮಸ್ಯೆ ಬಗೆಹರಿಸಿಕೊಡುವುದಾಗಿ ರೈತರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಭೂ ಹಕ್ಕುದಾರರು ಮತ್ತು ಎಲ್ಲ ರೈತ ಪರ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.