ದ್ರಾಕ್ಷಿ ತೊರೆದು ದಾಳಿಂಬೆಯತ್ತ ವಾಲಿದ ಚಿಕ್ಕಬಳ್ಳಾಪುರದ ರೈತರು…!
1 min readದ್ರಾಕ್ಷಿ ತೊರೆದು ದಾಳಿಂಬೆಯತ್ತ ವಾಲಿದ ಚಿಕ್ಕಬಳ್ಳಾಪುರದ ರೈತರು…!
ಸಾವಿರಾರು ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆದಿರುವ ಅನ್ನದಾತರು.
ದಿನೇ ದಿನೇ ಕುಸಿಯುತ್ತಿರುವ ದಾಳಿಂಬೆ ಬೆಲೆ,ಆತಂಕದಲ್ಲಿ ಅನ್ನದಾತರು.
ಕಳೆದ ತಿಂಗಳು ಕೆಜಿಗೆ 250 ರಿಂದ 280 ರೂಪಾಯಿಗೆ ಮಾರಾಟ.
ಈ ತಿಂಗಳು 80 ರಿಂದ 130 ರೂಪಾಯಿಗೆ ಕುಸಿದ ದಾಳಿಂಬೆ ಬೆಲೆ.
ಚಿಕ್ಕಬಳ್ಳಾಪುರದ ರೈತರು ಯಾವುದೇ ನದಿ ನಾಲೆಗಳು ನೀರಾವರಿ ಮೂಲಗಳು ಇಲ್ಲದಿದ್ದರೂ ಪಾತಾಳದಿಂದ ನೀರು ತೆಗೆದು ಹನಿ ಹನಿ ನೀರುಣಸಿ ಕೃಷಿಕಾಯಕ ಮಾಡ್ತಾರೆ…..ದ್ರಾಕ್ಷಿ, ತರಹೇವಾರಿ ತರಕಾರಿ-ಹೂ ಬೆಳೆದು ಸೈ ಅನಿಸಿಕೊಂಡಿರೋ ಜಿಲ್ಲೆಯ ರೈತರು ಈಗ ಯಥೇಚ್ಛವಾಗಿ ದಾಳಿಂಬೆ ಬೆಳೆದು ದೊಡ್ಡಮಟ್ಟದ ಸಂಚಲನವನ್ನೇ ಸೃಷ್ಟಿ ಮಾಡ್ತಿದ್ದಾರೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದ್ದು….ದಿನೇ ದಿನೇ ಕುಸಿಯುತ್ತಿರುವ ದಾಳಿಂಬೆ ಬೆಲೆ ದಾಳಿಂಬೆ ಬೆಳೆಗಾರರ ಆತಂಕಕ್ಕೀಡಾಗುವ0ತಾತೆ ಮಾಡಿದೆ… ಕುರಿತು ಒಂದು ವರದಿ ಇಲ್ಲಿದೆ..
ಚಿಕ್ಕಬಳ್ಳಾಪುರ, ರಾಜ್ಯ ರಾಜಧಾನಿ ಪಕ್ಕದಲ್ಲೇ ಇರುವ ಜಿಲ್ಲೆ, ಸಿಲಿಕಾನ್ ಸಿಟಿ ಬೆಂಗಳೂರಿಗೆ ಸರಬರಾಜು ಆಗೋ ಬಹುತೇಕ ಹಾಲು ಹಣ್ಣು ತರಕಾರಿಗಳು ಇದೇ ಜಿಲ್ಲೆಯ ರೈತರು ಬೆಳೆಯುವಂತಹದ್ದು..ಜಿಲ್ಲೆಯಲ್ಲಿ ಯಾವುದೇ ನದಿ, ನಾಲೆಗಳು,ಶಾಶ್ವತವಾದ ನೀರಾವರಿ ಮೂಲಗಳು, ಇಲ್ಲದಿದ್ದರೂ ಇಲ್ಲಿನ ರೈತರು ಮಾತ್ರ ಛಲಬಿಡದ ತ್ರಿವಿಕ್ರಮರಂತೆ ನೂರಾರು ಅಡಿ ಕೊಳವೆಬಾವಿಗಳನ್ನ ಕೊರೆಸಿ ಪಾತಾಳದಿಂದ ಗಂಗೆಯನ್ನ ಬಸಿದು ಹನಿ ಹನಿ ನೀರುಣಿಸುವ ಮೂಲಕ ಬೆಳಗಳನ್ನ ಬೆಳೆಯುತ್ತಾರೆ. ಮೊದ ಮೊದಲು ಚಿಕ್ಕಬಳ್ಳಾಪುರ ದ್ರಾಕ್ಷಿಯ ತವರೂರಾಗಿತ್ತು,..ಬರು ಬರುತ್ತಾ ತರಹೇವಾರಿ ಹೂಗಳನ್ನ ಬೆಳೆದು ಸೈ ಅನಿಸಿಕೊಂಡ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಈಗ ದಾಳಿಂಬೆ ಬೆಳೆಯತ್ತ ವಾಲಿದ್ದಾರೆ. ಬಹುತೇಕ ರೈತರು ದ್ರಾಕ್ಷಿ ಬೆಳೆಗೆ ಪರ್ಯಾಯವಾಗಿ ದಾಳಿಂಬೆಯತ್ತ ವಾಲಿದ್ದು ಜಿಲ್ಲೆಯಾದ್ಯಾಂತ ಯಥೇಚ್ಛವಾದ ದಾಳಿಂಬೆ ಬೆಳೆಯಲಾಗಿದೆ…ಆದ್ರೆ ಕೇವಲ ಒಂದು ತಿಂಗಳ ಹಿಂದೆ ಗೌರಿ ಗಣೇಶ ಹಬ್ಬ ಸೆಪ್ಟೆಂಬರ್ ತಿಂಗಳಿನಲ್ಲಿ ಬರೋಬ್ಬರಿ 1 ಕೆಜಿ ದಾಳಿಂಬೆ 250 ರೂಪಾಯಿಯಿಂದ 280 ರೂಪಾಯಿವರೆಗೂ ಮಾರಾಟವಾಗಿ ದಾಖಲೆ ಬರೆದಿತ್ತು…ಆದ್ರೆ ಈಗ ಆಕ್ಟೋಬರ್ ತಿಂಗಳು ಆರಂಭವಾಗಿದ್ದೇ ದಾಳಿಂಬೆ ಬೆಲೆ ದಿನೇ ದಿನೇ ಕುಸಿತ ಕಾಣುತ್ತಿದೆ. ಇದ್ರಿಂದ ದಾಳಿಂಬೆ ಬೆಳೆಗಾರರು ಆತಂಕಕ್ಕೀಡಾಗುವ0ತಾಗಿದೆ.
ಅ0ದಹಾಗೆ ದಾಳಿಂಬೆ ಬೆಳೆ ಅತ್ಯಂತ ಸೂಕ್ಷವಾದ ಬೆಳೆ, ರೋಗಭಾದೆಗಳಿಂದ ದಾಳಿಂಬೆ ಬೆಳೆ ಕಾಪಾಡೋದೆ ದೊಡ್ಡ ಸವಾಲಿನ ಕೆಲಸ, ಇನ್ನೂ ಎಕರೆ ದಾಳಿಂಬೆ ಬೆಳೆ ಬೆಳೆಯೋಕು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು…ಹೀಗಾಗಿ ಬರದನಾಡಿನ ರೈತರು ಬ್ಯಾಂಕ್ ಗಳಲ್ಲಿ ಹಾಗೂ ಕೈ ಸಾಲ, ಅದಲ್ಲದೇ ಕ್ರೀಮಿನಾಶಕಗಳ ಅಂಗಡಿಗಳಲ್ಲಿ ಸಾಲ ಪಡೆದು ಬೆಳೆ ಬೆಳೆದಿದ್ದಾರೆ…ಆದ್ರೆ ಈಗ ಕೇವಲ 1 ತಿಂಗಳ ಹಿಂದೆ ಕೆಜಿಗೆ 250 ರಿಂದ 280 ರೂಪಾಯಿ ಇದ್ದ ದಾಳಿಂಬೆ ಬೆಳೆ ಈಗ ದಿಢೀರ್ ಅಂತ ಕೇವಲ 80 ರಿಂದ 130 ರೂಪಾಯಿಗೆ ಕುಸಿದೆ. ಏಕಾಏಕಿ ಅರ್ಧಕ್ಕೆ ಅರ್ಧ ಬೆಲೆ ಕುಸಿತ ಆಗಿರೋದು ದಾಳಿಂಬೆ ಬೆಳೆಗಾರರು ಚಿಂತೆಗೀಡಾಗುವ0ತೆ ಮಾಡಿದೆ.
ಇನ್ನೂ ಉತ್ತಮ ಗುಣಮಟ್ಟದ ಎಕ್ಸ್ಫೋ,ರ್ಟ್ ಗುಣಮಟ್ಟದ ದಾಳಿಂಬೆ 100 ರೂಪಾಯಿ ಮೇಲೆಯೇ ಮಾರಾಟವಾಗುತ್ತಿದೆ. ಇದು ಸಾಮಾನ್ಯವಾದ ಸರಾಸರಿ ಬೆಲೆ ಆದರೂ 1 ತಿಂಗಳ ಹಿಂದೆ ಇದ್ದ 250 ರಿಂದ 280 ರೂಪಾಯಿ ಬೆಲೆ ಈಗ ಏಕಾಏಕಿ 80 ರಿಂದ 130 ರೂಪಾಯಿಗೆ ಕುಸಿದಿರೋದು ಅನ್ನದಾತನಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ…ಮುಂದೆ ಇದೇ ರೀತಿ ಬೆಲೆ ಕುಸಿತವಾದರೇ ನಮ್ಮ ಗತಿ ಏನಪ್ಪಾ ಅನ್ನೋ ಚಿಂತೆ ಕಾಡೋಕೆ ಶುರುವಾಗಿದೆ.