ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಡಿ.20ರಿಂದ ಘಾಟಿಯಲ್ಲಿ ಸುಪ್ರಸಿದ್ಧ ದನಗಳ ಜಾತ್ರೆ

1 min read

ಡಿ.20ರಿಂದ ಘಾಟಿಯಲ್ಲಿ ಸುಪ್ರಸಿದ್ಧ ದನಗಳ ಜಾತ್ರೆ

ಜಾತ್ರೆಗೆ ಸಿದ್ಧತೆ ಮಾಡುತ್ತಿರುವ ಗೋಪಾಲಕರು

ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯ ನಾಗರಾಧನೆಗೆ ಪ್ರಸಿದ್ಧಿ ಪಡೆದಿರುವ ಧಾರ್ಮಿಕ ಕ್ಷೇತ್ರ, ಹಾಗೆಯೇ ರೈತರ ಜೀವನಾಡಿ ರಾಸುಗಳ ಜಾತ್ರೆಗೂ ಹೆಸರುವಾಸಿ, ಡಿಸೆಂಬರ್ 20ರಿಂದ ಘಾಟಿ ದನಗಳ ಜಾತ್ರೆ ಪ್ರಾರಂಭವಾಗಲಿದ್ದು, ಅದಕ್ಕಾಗಿ ಧರದಿಂದ ಸಿದ್ಧತೆ ಮಾಡಲಾಗುತ್ತಿದೆ.

ಘಾಟಿ ದನಗಳ ಜಾತ್ರೆಯಲ್ಲಿ ತಮ್ಮ ದನಗಳನ್ನ ಮಾರಲು ಮತ್ತು ಕೊಳ್ಳಲು ಸುತ್ತಮುತ್ತಲಿನ ತಾಲೂಕು ಸೇರಿದಂತೆ ಜಿಲ್ಲೆ, ರಾಜ್ಯಗಳಿಂದ ರೈತರು ಬರ್ತಾರೆ. ಹಾಗೆಯೇ ಪ್ರತಿವರ್ಷ ಜಾತ್ರೆ ದೇವನಹಳ್ಳಿಯ ತಾಲೂಕು ಅರದೇಶನಹಳ್ಳಿಯ ಮರಿಯಪ್ಪ ಮತ್ತು ಮಕ್ಕಳು. ಮರಿಯಪ್ಪನ ಮತ್ತು ಮೊಮ್ಮಕ್ಕಳು ಘಾಟಿ ಜಾತ್ರೆಗಾಗಿಯೇ ಪ್ರತಿವರ್ಷ ನಾಲ್ಕೆದು ಎತ್ತುಗಳ ಜೋಡಿ ತಯಾರಿ ಮಾಡುತ್ತಾರೆ, ಹಳ್ಳಿಕಾರ್ ತಳಿಗಳ ತವರಾದ ಮಂಡ್ಯ,ರಾಮನಗರ, ಮಾಗಡಿಯಿಂದ ಸಣ್ಣ ಕರುಗಳನ್ನ ತಂದು ಮೂರು ತಿಂಗಳು ಕರುಗಳಿಗೆ ಹಾಲು, ಮೋಸರು, ಹಿಂಡಿ. ಬುಸಾ ಕೊಟ್ಟು ಸದೃಢವಾದ ಎತ್ತುಗಳನ್ನಾಗಿ ಮಾಡುತ್ತಾರೆ, ಜಾತ್ರೆಯಲ್ಲಿ ಇದೇ ಎತ್ತುಗಳು 3 ರಿಂದ 4 ಲಕ್ಷಕ್ಕೆ ಮಾರಾಟವಾಗುತ್ತವೆ ಎನ್ನುತ್ತಾರೆ ಮರಿಯಪ್ಪನ ಮೊಮ್ಮಕ್ಕಳು.

ಘಾಟಿ ದನಗಳ ಜಾತ್ರೆ ಅಂಗವಾಗಿ ನವ ಕರ್ನಾಟಕ ಯುವ ಶಕ್ತಿ ವೇದಿಕೆಯಿಂದ ಹಳ್ಳಿಕಾರ್ ಫ್ಯಾಷನ್ ಶೋ ಅಯೋಜನೆ ಮಾಡಿದ್ದು, ಈ ಕುರಿತು ಮಾತನಾಡಿದ ಅಯೋಜಕ ಹಳ್ಳಿರೈತ ಅಂಬರೀಶ್, ಕಳೆದ ವರ್ಷದಂತೆ ಈ ಬಾರಿಯು ಹಳ್ಳಿಕಾರ್ ಫ್ಯಾಷನ್ ಶೋ ಅಯೋಜನೆ ಮಾಡಿದ್ದು, ಡಿಸೆಂಬರ್ 21 ರಿಂದ 24 ರವರೆಗೂ ನಡೆಯಲಿದೆ. ಉಸ್ತುವಾರಿ ಸಚಿವರು ಫ್ಯಾಷನ್ ಶೋಗೆ ಚಾಲನೆ ನೀಡುವರು, ಹಳ್ಳಿಕಾರ್ ತಳಿಯ ರಾಸುಗಳ ಸಂರಕ್ಷಣೆ ಮತ್ತು ಅದರ ಮಹತ್ವವನ್ನ ಜನರಿಗೆ ತಿಳಿಸುವ ಕಾರಣಕ್ಕೆ ಫ್ಯಾಷನ್ ಶೋ ಅಯೋಜನೆ ಮಾಡಲಾಗಿದೆ, ಹಾಗೆಯೇ ಜಾತ್ರೆಗೆ ಬರುವ ರೈತರಿಗೆ ಉಚಿತವಾಗಿ ಮೇವು ಮತ್ತು ನೀರು ಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

 

About The Author

Leave a Reply

Your email address will not be published. Required fields are marked *