ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಆಡಳಿತದಲ್ಲಿದ್ದರೂ ಅಧಿಕಾರ ಪಡೆಯುವಲ್ಲಿ ವಿಫಲ

1 min read

ಆಡಳಿತದಲ್ಲಿದ್ದರೂ ಅಧಿಕಾರ ಪಡೆಯುವಲ್ಲಿ ವಿಫಲ

ಮೂರು ನಗರಸಭೆಗಳಲ್ಲಿಯೂ ಅಧಿಕಾರ ವಂಚಿತ ಕಾಂಗ್ರೆಸ್

ಬಹುಮತ ಇದ್ದರೂ ಗದ್ದುಗೆ ಹಿಡಿಯುವಲ್ಲಿ ವಿಫಲ

ಪಕ್ಷಾಂತರ ಸದಸ್ಯರಿಗೆ ಸದಸ್ಯತ್ವ ರದ್ದು ಆಗುತ್ತಾ?

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು ಆರು ನಗರ ಸ್ಥಳೀಯ ಸಂಸ್ಥೆಗಳಿವೆ. ಇದರಲ್ಲಿ ಮೂರು ಪ್ರಮುಖ ನಗರಸಭೆಗಳಲ್ಲಿ ಬಹುಮತ ಇದ್ದರೂ ಅಧಿಕಾರ ಹಿಡಿಯುವಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿಫಲವಾಗಿದೆ. ಇದಕ್ಕೆ ಕಾರಣ ಪಕ್ಷಾಂತರ. ಹೀಗೆ ಪಕ್ಷಾಂತರ ಮಾಡಿದ ಸದಸ್ಯರ ವಿರುದ್ಧ ವಿಚಾರಣೆ ನಡೆಯುತ್ತಿದ್ದು, ನವೆಂಬರ್ 30ಕ್ಕೆ ವಿಚಾರಣೆ ನಡೆಯಲಿದೆ.

ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 6 ನಗರ ಸ್ಥಳೀಯ ಸಂಸ್ಥೆಗಳಿವೆ. ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ ಮತ್ತು ಗೌರಿಬಿದನೂರಿನಲ್ಲಿ ನಗರಸಭೆಗಳಾಗಿದ್ದರೆ, ಬಾಗೇಪಲ್ಲಿ ಪುರಸಭೆ ಮತ್ತು ಗುಡಿಬಂಡೆ ಪಟ್ಟಣ ಪಂಚಾಯಿತಿಯಾಗಿದೆ. ಈ ಎಲ್ಲ ಆರೂ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಕಾಂಗ್ರೆಸ್ ಬಹುಮತ ಪಡೆದಿತ್ತು. ಆದರೆ ಪ್ರಮುಖ ನಗರಸಭೆಗಳಲ್ಲಿ ಅಧಿಕಾರ ಹಿಡಿಯುವಲ್ಲಿ ಆಡಳಿತ ಪಕ್ಷ ವಿಫಲವಾಗಿದ್ದು, ವಿರೋಧ ಪಕ್ಷಗಳು ಅಧಿಕಾರ ಹಿಡಿದಿರುವುದು ವಿಶೇಷವಾಗಿದೆ.

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಒಟ್ಟು 31 ಸದಸ್ಯರಿದ್ದು, ಇದರಲ್ಲಿ 16 ಮಂದಿ ಕಾಂಗ್ರೆಸ್ ಸದಸ್ಯರಿದ್ದಾರೆ. ಉಳಿದಂತೆ 2 ಜೆಡಿಎಸ್, 9 ಬಿಜೆಪಿ, 4 ಪಕ್ಷೇತರ ಸದಸ್ಯರಿದ್ದಾರೆ. ಆದರೆ 8 ಸದಸ್ಯರಿರುವ ಬಿಜೆಪಿ ಅಧಿಕಾರಕ್ಕೇರಿದೆ. ಇದಕ್ಕೆ ಕಾರಣ ಕಾಂಗ್ರೆಸ್‌ನ ಆರು ಮಂದಿ ಸದಸ್ಯರು ಬಿಜೆಪಿ ಬೆಂಬಲಿಸಿದ್ದಾರೆ. ಅದೇ ರೀತಿಯಲ್ಲಿ ಗೌರಿಬಿದನೂರು ನಗರಸಭೆಯಲ್ಲಿ ಒಟ್ಟು 31 ಸದಸ್ಯರಿದ್ದು, ಇವರಲ್ಲಿ ಕಾಂಗ್ರೆಸ್ 15, ಜೆಡಿಎಸ್ 7, ಬಿಜೆಪಿ ೩, ಪುಟ್ಟಸ್ವಾಮಿಗೌಡರ ಬಣ 6 ಮಂದಿ ಸದಸ್ಯರನ್ನು ಹೊಂದಿದೆ. ಆದರೆ ಇಲ್ಲಿಯೂ ಕಾಂಗ್ರೆಸ್ ಅಧಿಕಾರ ಹಿಡಿಯಲು ವಿಫಲವಾಗಿದ್ದು, ಶಾಸಕ ಪುಟ್ಟಸ್ವಾಮಿಗೌಡರ ಬಣ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಶಿಡ್ಲಘಟ್ಟ ನಗರಸಭೆಯಲ್ಲಿಯೂ ಒಟ್ಟು 31 ಸದಸ್ಯರಿದ್ದು, ಕಾಂಗ್ರೆಸ್ 13, ಜೆಡಿಎಸ್ 10, ಪಕ್ಷೇತ್ರ 4, ಬಿಎಸ್‌ಪಿ 2 ಮತ್ತು ಬಿಜೆಪಿ ಇಬ್ಬರು ಸದಸ್ಯರಿದ್ದಾರೆ. ಆದರೆ ಇಲ್ಲಿಯೂ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ವಿಲವಾಗಿದ್ದು, ಜೆಡಿಎಸ್ ಅಧಿಕಾರ ಹಿಡಿದಿದೆ. ಅಲ್ಲಿಗೆ ಪ್ರಮುಖ ಮೂರು ನಗರಸಭೆಗಳಲ್ಲಿ ಕಾಂಗ್ರೆಸ್ ಬಹುಮತ ಇದ್ದು, ರಾಜ್ಯದಲ್ಲಿ ಸರ್ಕಾರ ಇದ್ದರೂ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ.

ಚಿಕ್ಕಬಳ್ಳಾಪುರ ಕಾಂಗ್ರೆಸ್ ಸದಸ್ಯರಲ್ಲಿ ಆರು ಮಂದಿ ಮತ್ತು ಗೌರಿಬಿದನೂರು ನಗರಸಭೆಯಲ್ಲಿ ಕಾಂಗ್ರೆಸ್‌ನ ಆರು ಮಂದಿ ಸದಸ್ಯರು ವಿರೋಧ ಪಕ್ಷಗಳಿಗೆ ಬೆಂಬಲ ನೀಡಿದ್ದಾರೆ. ಇದು ಕಾಂಗ್ರೆಸ್‌ನ್ನು ಅಧಿಕಾರದಿಂದ ದೂರ ಉಳಿಸಲು ಕಾರಣವಾಗಿದೆ. ಹಾಗಾಗಿ ಪಕ್ಷಾಂತರ ವಿರೋಧಿ ಕಾಯ್ದೆಯಡಿ ಮೂರೂ ನಗರಸಭೆಗಳ ಅಡ್ಡ ಮತದಾನ ಮಾಡಿದ ಸದಸ್ಯರ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ಚುರುಕಿನಿಂದ ಸಾಗಿದ್ದು, ಅಡ್ಡ ಮತದಾನ ಮಾಡಿದ ಸದಸ್ಯರ ಸದಸ್ಯತ್ವ ರದ್ದಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ನಡುವೆ ರಾಜ್ಯದಲ್ಲಿಯೇ ವಿಚಿತ್ರ ಸನ್ನಿವೇಶವೊಂದು ಇಲ್ಲಿ ಸೃಷ್ಟಿಯಾಗಿದೆ. ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕಾಂಗ್ರೆಸ್ ಚಿಹ್ನೆಯಡಿ ಗೆದ್ದು, ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿರುವ ಆರು ಮಂದಿ ಸದಸ್ಯರ ವಿರುದ್ಧ ಪ್ರಸ್ತುತ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಆರು ಮಂದಿಯಲ್ಲಿ ಐದು ಮಂದಿ ಸದಸ್ಯರು ವಿಚಾರಣೆಗೆ ಹಾಜರಾಗಿ ಪ್ರಕರಣ ಎದುರಿಸುತ್ತಿದ್ದಾರೆ. ಆದರೆ 27ನೇ ವಾರ್ಡಿನ ನಗರಸಭಾ ಸದಸ್ಯೆ ನೇತ್ರಾವತಿ ಅವರು ಮಾತ್ರ ವಿಚಾರಣೆಗೆ ಹಾಜರಾಗಿಲ್ಲ.

ಅಡ್ಡ ಮತದಾನ ಮಾಡಿದ ಆರು ಮಂದಿ ಸದಸ್ಯರಲ್ಲಿ ಒಬ್ಬರು ಮಾತ್ರ ಯಾಕೆ ವಿಚಾರಣೆ ಎದುರಿಸಲು ಮುಂದಾಗಿಲ್ಲ ಎಂಬುದು ವಿಶೇಷವಾಗಿದ್ದು, ಹೀಗೆ ವಿಚಾರಣೆ ಎದುರಿಸದೆ ತೀರ್ಪಿಗೆ ತಲೆ ಬಾಗುವುದಾಗಿ ಹೇಳಿ ಅವರು ವಿಚಾರಣೆಯಿಂದ ಹೊರಗೆ ಉಳಿದಿರುವುದು ಬಹುಶ ರಾಜ್ಯದಲ್ಲಿಯೇ ಪ್ರಥಮ ಪ್ರಕರಣ ಎನ್ನಲಾಗುತ್ತಿದೆ. ಯಾವುದೇ ರಾಜಕಾರಣಿಯಾದರೂ ತಮಗೆ ಕಪ್ಪು ಚುಕ್ಕೆ ಬಾರದಂತೆ ವಿಚಾರಣೆ ಎದುರಿಸುತ್ತಾರೆ. ಆದರೆ ನೇತ್ರಾವತಿಯವರು ಮಾತ್ರ ತಾವು ಮಾಡಿರುವುದು ತಪ್ಪು, ನ್ಯಾಯಾಲಯದ ತೀರ್ಪಿಗೆ ಬದ್ಧವಾಗಿರುವುದಾಗಿ ವಿಚಾರಣೆ ಎದುರಿಸದಿರುವುದು ಮಾತ್ರ ವಿಚಿತ್ರವಾಗಿದೆ.

ಇನ್ನು ಗೌರಿಬಿದನೂರು ಪ್ರಕರಣವೂ ಮತ್ತಷ್ಟು ವಿಚಿತ್ರವಾಗಿದೆ. ಯಾಕೆಂದರೆ ಇಲ್ಲಿ ಸರ್ಕಾರ ದೊಂದಿಗೆ ಸರ್ಕಾರವೇ ಹೋರಾಟ ಮಾಡಬೇಕಾದ ಸ್ಥಿತಿ ಎದುರಾಗಿದೆ. ಪ್ರಸ್ತುತ ಗೌರಿಬಿದನೂರಿನಲ್ಲಿ ಪಕ್ಷೇತರ ಶಸಾಕ ಪುಟ್ಟಸ್ವಾಮಿಗೌಡ ಇದ್ದು, ಕಾಂಗ್ರೆಸ್ ಸದಸ್ಯರಾಗಿದ್ದವರು ಪುಟ್ಟಸ್ವಾಮಿಗೌಡರ ಬಣ ಬೆಂಬಲಿಸಿದ್ದಾರೆ. ಪುಟ್ಟಸ್ವಾಮಿಗೌಡರು ಕಾಂಗ್ರೆಸ್‌ನೊ0ದಿಗೆ ಗುರ್ತಿಸಿಕೊಂಡಿದ್ದು, ಇವರಿಗೆ ಬಂಬಲ ನೀಡಿದ ಕಾಂಗ್ರೆಸ್ ಸದಸ್ಯರ ವಿರುದ್ಧ ಕ್ರಮ ಜರುಗಿಸಲು ಅಲ್ಲಿನ ಶಾಸಕರು ಅಡ್ಡಿಯಾಗಿದ್ದಾರೆ.

ಆದರೆ ಗೌರಿಬಿದನೂರು ಮಾಜಿ ಶಸಾಕ ಎನ್.ಎಚ್. ಶಿವಶಂಕರರೆಡ್ಡಿ ಅವರಿಗೆ ಇದು ಪ್ರತಿಷ್ಠೆಯಾಗಿದ್ದು, ಶತಾಯ ಗತಾಯ ಅಡ್ಡ ಮತದಾನ ಮಾಡಿದ ಸದಸ್ಯರ ವಿರುದ್ಧ ಕ್ರಮ ಆಗಲೇಬೇಕು ಎಂಬ ಹಠ ಹಿಡಿದಿದ್ದಾರೆ. ಇದರಿಂದ ಕಾಂಗ್ರೆಸ್ ವರಿಷ್ಠರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಲ್ಲದೆ, ಒಂದು ವೇಳೆ ಗೌರಿಬಿದನೂರು ನಗರಸಭೆಯಲ್ಲಿ ಅಢ್ಡ ಮತದಾನ ಮಡಾಇದ ಸದಸ್ಯರನ್ನು ಉಳಿಸಲು ಸರ್ಕಾರ ಮುಂದಾದರೆ ಮೂರೂ ನಗರಸಭೆಗಳಲ್ಲಿ ಅಢ್ಡ ಮತದಾನ ಮಾಡಿದ ಸದಸ್ಯರಿಗೂ ಇದು ಸಹಕಾರಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮುಖ್ಯವಾಗಿ ಚಿಕ್ಕಬಳ್ಳಾಪುರದಲ್ಲಿ ಢಅ್ಡ ಮತದಾನ ಮಾಡಿದ ಸದಸ್ಯರ ವಿರುದ್ಧ ಕ್ರಮ ಜರುಗಿಸಲೇಬೇಕು ಎಂದು ಕಾಂಗ್ರೆಸ್ ವರಿಷ್ಠರು ಹರ ಸಾಹಸ ಪಡುತ್ತಿದ್ದು, ಗೌರಿಬಿದನೂರಿನಲ್ಲಿ ಢಅ್ಡ ಮತದಾನ ಮಾಡಿದವರನ್ನು ಪಾರು ಮಾಡಲು ಶ್ರಮಿಸಲಾಗುತ್ತಿದೆ. ಹಾಗಾಗಿ ಈ ಪ್ರಕರಣ ವಿಚಿತ್ರ ತಿರುವು ಪಡೆದಿದ್ದು, ನವೆಂಬರ್ 30ರಂದು ನಡೆಯಲಿರುವ ಪ್ರಕರಣದ ವಿಚಾರಣೆ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

About The Author

Leave a Reply

Your email address will not be published. Required fields are marked *