ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಮಾಜಿ ಸಚಿವ ಶಿವಶಂಕರರೆಡ್ಡಿ ಜನ್ಮದಿನ ಮಾದರಿ ಆಚರಣೆ

1 min read

ಆಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ಹುಟ್ಟುಹಬ್ಬ
ಮಾಜಿ ಸಚಿವ ಶಿವಶಂಕರರೆಡ್ಡಿ ಜನ್ಮದಿನ ಮಾದರಿ ಆಚರಣೆ

ಪೌರಕಾರ್ಮಿಕರಿಗೆ ಬಟ್ಟೆ ಹಾಗೂ ಸರಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ಮಾಜಿ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಜನ್ಮದಿನಾಚರಣೆಯನ್ನು ಅಭಿಮಾನಿಗಳು ಆಚರಿಸಿದರು.

ಗೌರಿಬಿದನೂರು ನಗರದ ಹಳೆ ನಗರಸಭೆ ಆವರಣದಲ್ಲಿ ಮಾಜಿ ಸಚಿವ ಶಿವಶಂಕರ ರೆಡ್ಡಿ ಮಾತನಾಡಿ, ದಶಕಗಳಿಂದ ಕ್ಷೇತ್ರದ ಜನರ ಸೇವೆ ಮಾಡಿಕೊಂಡು ಬರುತ್ತಿದ್ದಾನೆ. ಕ್ಷೇತ್ರವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯಲು ಶ್ರಮಿಸಿದ್ದೇನೆ. ಅವರು ತೋರುತ್ತಿರವ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ. ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ನಮ್ಮ ಪಕ್ಷದ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಸರಕಾರದ ಮಟ್ಟದಲ್ಲಿ ಹೋರಾಟ ನಡೆಸುವ ಮೂಲಕ ಕ್ಷೇತ್ರದ ಸೇವೆ ಸಲ್ಲಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

ಮುಖ0ಡ ಜಾಲಹಳ್ಳಿ ಗಂಗಾಧರ ಮಾತನಾಡಿ, ಮಾಜಿ ಸಚಿವ ಶಿವಶಂಕರ ರೆಡ್ಡಿ ಅವರು ಅಭಿವೃದ್ಧಿ ಹಾಗೂ ಆಡಳಿತ ವಿಚಾರದಲ್ಲಿ ಎಂದಿಗೂ ರಾಜಕೀಯ ಬೇರೆಸಿದವರಲ್ಲ. ಚುನಾವಣೆಗೆ ಮಾತ್ರ ರಾಜಕೀಯವನ್ನು ಸೀಮಿತಗೊಳಿಸುತ್ತಿದ್ದರು. ಬಳಿಕ ಎಲ್ಲ ಪಕ್ಷಗಳ ನಾಯಕರೊಂದಿಗೆ ವಿಶ್ವಾಸ ಸಂಪಾದಿಸಿ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನಹರಿಸುತ್ತಿದ್ದರು. ಇದೇ ಕಾರಣಕ್ಕೆ ಇಂದಿಗೂ ಎಲ್ಲ ಪಕ್ಷಗಳಲ್ಲಿ ಮಿತ್ರರನ್ನು ಹೊಂದಿದ್ದಾರೆ ಎಂದರು.

ಯುವ ಮುಖಂಡ ದೀಪು ಜೈನ್ ಮಾತನಾಡಿ, ಹಿರಿಯ ನಾಯಕರಾದ ಶಿವಶಂಕರ ರೆಡ್ಡಿ ಸರಳ ಸಜ್ಜನಿಕೆ ಹಾಗೂ ಆಡಳಿತದ ಅನುಭವ ಯುವಕರಿಗೆ ಸ್ಪೂರ್ತಿಯಾಗಿದೆ ಎಂದರು. ನಗರಸಭಾ ಸದಸ್ಯ ಡಿ ಎನ್ ವೆಂಕಟರೆಡ್ಡಿ ಮಾತನಾಡಿ, ಸಮುದಾಯ ಪೌರಕಾರ್ಮಿಕರ ಜೊತೆ ಸ್ಪಂದಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿನಗರಸಭೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ, ಪ್ರತಿದಿನ ಪೌರಕಾರ್ಮಿಕರು ಕಸ ವಿಲೇವೇರಿ ಮಾಡುವ ಜೊತೆಗೆ ಮನಮನೆಗೆ ತೆರಳಿ ಕಸ ಸಂಗ್ರಹಿಸುತ್ತಿದ್ದಾರೆ, ನಗರ ಸ್ವಚ್ಛಗೊಂಡರೆ ಅದು ಪೌರಕಾರ್ಮಿಕರ ಶ್ರಮದಿಂದ ಎಂಬುದನ್ನು ಮರೆಯಬಾರದು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಎನ್ ಕೇಶವ ರೆಡ್ಡಿ, ಎಚ್‌ಎನ್ ಪ್ರಕಾಶ್ ರೆಡ್ಡಿ, ನಗರಸಭಾ ಸದಸ್ಯ ಆರ್ ಪಿ ಗೋಪಿನಾಥ್, ಅಮರ್ ಶೆಟ್ಟಿ, ಸುಬ್ಬಣ್ಣ, ವಿ. ರಮೇಶ್, ರಂಗಮ್ಮ, ಭಾಗ್ಯಮ್ಮ, ಬೆಸ್ಕಾಂ ಗಂಗಾಧರಪ್ಪ, ಗಿರೀಶ್ ರೆಡ್ಡಿ, ವಿಜಯ್, ವಾಸಿಮ್,ವಿಶ್ವನಾಥ್ ಇದ್ದರು.

About The Author

Leave a Reply

Your email address will not be published. Required fields are marked *