ಪುರಾತನ ಧರ‍್ಮಿಕ ಸಂಸ್ಕೃತಿ ಪಾಲಿಸಿದರೆ ಮನಶ್ಸಾಂತಿ

ಆಸ್ತಿ ವಿವಾದ ಹಿನ್ನಲೆ ಒಂದೆ ಕುಟುಂಬದವರ ಜಟಾಪಟಿ

ಶ್ರೀದುರ್ಗಾಪರಮೇಶ್ವರಿ ದೇವಿ ವಿಗ್ರಹ ಪ್ರತಿಷ್ಠಾಪನೆ

ಏಕಾಏಕಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ

April 20, 2025

Ctv News Kannada

Chikkaballapura

ಬಾಲ್ಯ ವಿವಾಹ ತಡೆಗೆ ಎಲ್ಲರ ಸಹಕಾರ ಅಗತ್ಯ

1 min read

ಬಾಲ್ಯ ವಿವಾಹ ತಡೆಗೆ ಎಲ್ಲರ ಸಹಕಾರ ಅಗತ್ಯ

ಗೌರಿಬಿದನೂರಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

ಬಾಲ್ಯ ವಿವಾಹ ತಡೆಯುವಲ್ಲಿ ಹೆಣ್ಣು ಮಕ್ಕಳ ಪಾತ್ರ ಹೆಚ್ಚಿನದು, ಹೆಣ್ಣು ಮಕ್ಕಳು ಶಿಕ್ಷಣದ ಕಡೆ ಹೆಚ್ಚು ಒತ್ತು ನೀಡಿ ತಮ್ಮ ಜೀವನ ಹಸನು ಮಾಡಿಕೊಳ್ಳಬೇಕು ಎಂದು ಹಿರಿಯ ಶ್ರೇಣಿ ನ್ಯಾಯದೀಶೆ ಗೀತಾ ಕುಂಬಾರ್ ತಿಳಿಸಿದರು.

ಗೌರಿಬಿದನೂರು ನಗರದ ಅಚಾರ್ಯ ಕಾಲೇಜ್ ಸಭಾಂಗದಲ್ಲಿ ಕಾನೂನು ಸೇವಾ ಸಮಿತಿಯಿಂದ ವಿಶ್ವ ಕಾನೂನು ಸೇವಾ ದಿನ ಮತ್ತು ಬಾಲ್ಯ ವಿವಾಹ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದು ಹಿರಿಯ ಶ್ರೇಣಿ ನ್ಯಾಯದೀಶೆ ಗೀತಾ ಕುಂಬಾರ್, ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹ ಹೆಚ್ಚಿದೆ, ಇದು ಸಮಾಜಕ್ಕೆ ಮಾರಕ, ಹೆಣ್ಣು ಮಕ್ಕಳು 18 ವರ್ಷದವರೆಗೂ ವಿವಾಹಕ್ಕ ಅಸ್ಪದ ಕೊಡಬಾರದು ಎಂದರು.

ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆ ಹೋಗಬೇಕು, ಅಗ ಮಾತ್ರ ನಿಮ್ಮ ಜೀವನ ಹಸನಾಗಲು ಸಾಧ್ಯ, ಹಿರಿಯರ ಒತ್ತಾಯ ಅಸೆ ಅಮೀಷಕ್ಕೆ ಒಳಗಾಗದೆ ಶಿಕ್ಷಣಕ್ಕೆ ಒತ್ತು ನೀಡಿ ಎಂದು ತಿಳಿಸಿದರು. ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರಮೇಶ್ ಗುಗ್ಗರಿ ಮಾತನಾಡಿ, ಪೊಕ್ಸೋ ಕಾಯ್ದೆ ಇನ್ನಷ್ಟು ಕಠಿಣಗೊಳಿಸಲು ಕಾನೂನು ಮುಂದಾಗಿದೆ, ಅದರೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಲೈಂಗಿಕ ಹಿಂಸೆ ಕಡಿವಾಣ ಅಗಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ ಎಂದರು.

ಹಿರಿಯ ವಕೀಲ ಅರ್. ರಾಮಚಂದ್ರ ಮಾತನಾಡಿ, ಕಾನೂನು ಅರಿವು ಎಲ್ಲರಿಗೂ ಅಗತ್ಯ, ಕಾನೂನು ಅರಿವಿದ್ದರೆ ಸಮಾಜದಲ್ಲಿ ಶಾಂತಿ ನೆಲಸಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಕಾಲೇಜ್ ಪ್ರಾಂಶುಪಾಲ ಶ್ರೀನಿವಾಸ್, ಸರಕಾರಿ ಅಭೀಯೋಜಕ ಪಯಾಜ್ ಪಟೀಲ್ ಮಾತನಡಿದರು. ವಕೀಲರ ಸಂಘ ಕಾರ್ಯದರ್ಶಿ ದಯನಂದ್, ವಕೀಲ ಜಗದೀಶ್, ಶ್ರೀನಿವಾಸಮೂರ್ತಿ ಇದ್ದರು.

 

About The Author

Leave a Reply

Your email address will not be published. Required fields are marked *