ಪ್ರತಿಯೊಬ್ಬರಿಗೂ ವಿದ್ಯುತ್ ಬಗ್ಗೆ ಜಾಗೃತಿ ಅಗತ್ಯ
1 min readಪ್ರತಿಯೊಬ್ಬರಿಗೂ ವಿದ್ಯುತ್ ಬಗ್ಗೆ ಜಾಗೃತಿ ಅಗತ್ಯ ಎಚ್ಚರಿಕೆಯಿಂದ ವಿದ್ಯುತ್ ಅವಘಡಗಳಿಂದ ದೂರ ಇರಬಹುದು
ಮಕ್ಕಳಿಂದ ಹಿರಿಯ ನಾಗರಿಕರವರೆಗಿನ ಎಲ್ಲರೂ ವಿದ್ಯುತ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ, ವಿದ್ಯುತ್ ಅಪಘಡಗಳಿಂದ ದೂರವಿರಿ ಎಂದು ಬಾಗೇಪಲ್ಲಿ ಬೆಸ್ಕಾಂ ಉಪ ಎಇಇ ಲಕ್ಷ್ಮೀನಾರಾಯಣ ಮೂರ್ತಿ ತಿಳಿಸಿದರು.
ಬಾಗೇಪಲ್ಲಿ : ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರುವರೆಗಿನ ಎಲ್ಲರೂ ವಿದ್ಯುತ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ ಮಾರಣಾಂತಿಕ ವಿದ್ಯುತ್ ಅಪಘಡಗಳಿಂದ ದೂರವಿರಿ ಎಂದು ಬಾಗೇಪಲ್ಲಿ ಬೆಸ್ಕಾಂ ಉಪ ವಿಭಾಗದ ಎಇಇ ಲಕ್ಷ್ಮೀನಾರಾಯಣ ಮೂರ್ತಿ ತಿಳಿಸಿದರು.
ಬಾಗೇಪಲ್ಲಿ ಮತ್ತು ಚೇಳೂರು ತಾಲ್ಲೂಕಿನ ಬೆಸ್ಕಾಂ ಇಲಾಖೆವತಿಯಿಂದ ಬಾಗೇಪಲ್ಲಿ ಪಟ್ಟಣದಲ್ಲಿ ಅಯೋಜಿಸಿದ್ದ ವಿದ್ಯುತ್ ಸುರಕ್ಷತೆ ಕುರಿತಾದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ರೈತರ ಕೃಷಿ ಪಂಪ್ ಸೆಟ್ ಗಳ ಬಳಿ ವಿದ್ಯುತ್ ಸಮಸ್ಯೆಗಳು ಕಂಡು ಬಂದಲ್ಲಿ ತಕ್ಷಣವೇ ನಿಮ್ಮ ಹತ್ತಿರದ ಎಲೆಕ್ಟ್ರಿಷಿಯನ್, ಲೈನ್ ಮ್ಯಾನ್ ಅಥವಾ ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಬೇಕೆ ಹೊರತು ಯಾರೊಬ್ಬರೂ ಸ್ವಯಂ ಪ್ರೇರಿತರಾಗಿ ದುರಸ್ತಿ ಕಾರ್ಯಕ್ಕೆ ಮುಂದಾಗಬಾರದು.
ಒದ್ದೆಯಾದ ಕೈಗಳಿಂದ ವಿದ್ಯುತ್ ಉಪಕರಣಗನ್ನು ಸ್ಪರ್ಷಿಸುವುದು, ದೋಷಪೂರಿತ ಹಾಗೂ ಗುಣಮಟ್ಟ ಇಲ್ಲದ ವಿದ್ಯುತ್ ಉಪಕರಣಗಳನ್ನು ಬಳಸುವದರಿಂದಲೂ ವಿದ್ಯುತ್ ಅವಘಡಗಳು ಸಂಭವಿಸುತ್ತವೆ.
ಮನುಷ್ಯನ ಸುಗಮ ಜೀವನಕ್ಕೆ ವಿದ್ಯುತ್ ಬೇಕು. ಬದುಕಿನ ಪ್ರತಿ ಹಂತದಲ್ಲಿ ನಾವು ವಿದ್ಯುತ್ ಬಳಕೆ ಮಾಡುವ ಸಂದರ್ಭದಲ್ಲಿ ಪ್ರಾಣ ರಕ್ಷಣೆಗೆ ಪೂರಕವಾದ ಸುರಕ್ಷತಾ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಬಹಳಷ್ಟು ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿ ಸುರಕ್ಷತೆಗೆ ಒತ್ತು ನೀಡದ ಕಾರಣ ರೈತರು, ಕಾರ್ಮಿಕರು ವಿದ್ಯುತ್ ಅವಘಡಗಳಿಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಆದ್ದರಿಂದ ವಿದ್ಯುತ್ ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯ ಎಲ್ಲರಿಗೂ ಇದೆ. ವಿದ್ಯುತ್ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಬೆಸ್ಕಾಂ ಇಲಾಖೆ ಸಾಕಷ್ಟು ಎಚ್ಚರಿಕೆ ಎಂದರು..
ಈ ಸಂದರ್ಭದಲ್ಲಿ ಬಾಗೇಪಲ್ಲಿ ಪಟ್ಟಣದ ಪುರಸಭೆ ಕಾರ್ಯಾಲಯ, ಡಿವಿಜಿ ಮುಖ್ಯ ರಸ್ತೆ, ಗೂಳೂರು ವೃತ್ತ, ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಮುಂಭಾಗದಲ್ಲಿ ವಿದ್ಯುತ್ ಸುರಕ್ಷತೆ ಕುರಿತು ನಾಗರೀಕರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಬೆಸ್ಕಾಂ ಸಹಾಯಕ ಇಂಜನೀಯರ್ ಕೆ.ಆರ್. ಸೋಮಶೇಖರ್, ಇಂಜಿನಿಯರ್‌ಗಳಾದ ಹರೀಶ್ ಕುಮಾರ್, ರಮೇಶ್, ಶ್ರೀನಿವಾಸ್, ನಾಗರಾಜು, ಲಕ್ಷ್ಮೀ ನಾರಾಯಣ, ಬೆಸ್ಕಾಂ ನೌಕರರ ಸಂಘದ ಕಾರ್ಯದರ್ಶಿ ಸಿ.ರವಿ, ಬೆಸ್ಕಾಂ ನೌಕರರು, ಸಿಬ್ಬಂದಿ ವರ್ಗದವರು ಇದ್ದರು…
https://youtube.com/@ctvnewschikkaballapura?si=C-CJWuVfM-65JQMa