ಟೊಮೇಟೊ ಹಣ್ಣಿಗೆ ಬಂಪರ್ ಬೆಲೆ ಇರುವಗಲೂ ಬೆಳೆ ನಾಶಕ್ಕೆ ಮುಂದಾದ ರೈತರು
1 min readಟೊಮೇಟೊ ಹಣ್ಣಿಗೆ ಬಂಪರ್ ಬೆಲೆ ಇರುವಗಲೂ ಬೆಳೆ ನಾಶಕ್ಕೆ ಮುಂದಾದ ರೈತರು
ರಾಜ್ಯದಲ್ಲೇ ಕೆಂಪು ಸುಂದರಿಗೆ ಬೇಡಿಕೆ, ಗ್ರಾಮದಲ್ಲಿ ರೈತರು ಬೆಳೆನಾಶಕ್ಕೆ
ಮುದಡು ರೊಗ ಬಾಧೆಯಿಂದ ಬೇಸೆತ್ತಿರುವ ರೈತರು
ಬೆಳೆ ಕಿತ್ತು ಕೃಷಿಯಿಂದ ದೂರಾ ಸರಿಯುತ್ತಿದ್ದಾರೆ
ರೈತರ ನೆರವಿಗೆ ನಿಲ್ಲಬೇಕಾದ ಇಲಾಖೆ
ಟೊಮೇಟೊ ಎಂದರೆ ಬಂಪರ್ ಲಾಟರಿ ಹೊಡೆಯುತ್ತಿರುವ ರೈತರಿಗೆ ಇಂತಹ ಸಮಯದಲ್ಲಿಯೂ ಶಾಕ್ ಆಗಿದೆ. ಜಿಲ್ಲೆಯಲ್ಲಿ ಟೊಮೇಟೋ ಎಂದರೆ ರೈತರಿಗೆ ಪ್ರಧಾನ ಬೆಳೆ. ಮಾರ್ಚ್ ಏಪ್ರಿಲ್ ತಿಂಗಳಿಗಾಗಿ ಟೊಮೆಟೋ ಬೆಳೆಯುವ ರೈತರು ಕಾಯುತ್ತಾರೆ. ಹಾಗೆ ಕಾದರೂ ಉಪಯೋಗವಿಲ್ಲದಂತೆ ಆಗಿದೆ. ಕಾರಣ ಟೊಮೇಟೋ ಬೆಳೆಗೆ ರೋಗ ಕಾಣಿಸಿಕೊಂಡು ರೈತರ ಕನಸನ್ನು ನುಚ್ಚುನೂರಾಗಿಸಿ ರೈತರು ಬೆಳೆದ ಬೆಲೆಯನ್ನು ತಾವೇ ಕೈಯಾರೇ ಕಿತ್ತು ಹಾಕುತ್ತಿರುವ ಘಟನೆ ನಡೆದಿದೆ ಇಷ್ಟಕ್ಕೂ ಯಾವ ರೊಗ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.
ಟೊಮೇಟೊ ಅಂದರೆ ಚಿನ್ನ ಅಂತಾ ಕರೆಯುತ್ತಿದ್ದ ಈ ಜಿಲ್ಲೆಯಲ್ಲಿ ಟಮೋಟೋ ಬೆಳೆದ ರೈತರು ಸರ್ಕಾರದ ವಿರುದ್ಧ ಶಾಪ ಹಾಕುತ್ತಿದ್ದಾರೆ. ಹೀಗೇ ಚೆನ್ನಾಗಿ ಬೆಳೆದಿರೋ ಟೊಮೇಟೊ ತೋಟ, ಮತ್ತೊಂದೆಡೆ ರೈತರು ಬೆಳೆದ ತೋಟವನ್ನು ತಾವೇ ಕಿತ್ತು ಎಸೆಯುತ್ತಿರುವುದು. ಇದೆಲ್ಲಾ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ರಾಯಪ್ಪಲ್ಲಿ ಗ್ರಾಮದಲ್ಲಿ.
ಒಂದು ಎಕರೆ ತೋಟದಲ್ಲಿ ಟೊಮೇಟೋ ಬೆಳೆ ಇಡಬೇಕಾದರೆ ಕನಿಷ್ಟ ೨ ರಿಂದ ೨.೫ ಲಕ್ಷ ಬೇಕು. ಮೇಲೆ ಮೆಸ್ ಕಟ್ಟಲು 70 ಸಾವಿರ ಬೇಕು. ಹೀಗೆ ಲೆಕ್ಕ ಹಾಕಿದರೆ ಮೂರು ಲಕ್ಷ ಖರ್ಚು ಮಾಡಿದರೂ ರೈತರು ದಿಕ್ಕುಕಾಣದಾಗಿದ್ದಾರೆ.
ಚಿಂತಾಮಣಿ ತಾಲೂಕಿನಲ್ಲಿ ಈ ವರ್ಷ ಟೊಮೇಟೊ ಬೆಳೆಗಾಗಿ ರೈತರು ತಮ್ಮ ಒಡವೆ ವಸ್ತ ಅಡ ಇಟ್ಟು ಬೆಳೆ ಇಟ್ಟಿದ್ದಾರೆ. ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಮುದುಡು ರೋಗ ಬರೆ ಹಾಕಿದೆ. ಈ ಸಂಬoಧ ಚಿಂತಾಮಣಿ ತಾಲೂಕಿನ ರಾಯಪಲ್ಲಿ ಗ್ರಾಮದ ಶಿವಾನಂದರೆಡ್ಡಿ ಮಾತನಾಡಿ, ರೈತರು ಟೊಮೇಟೊ ಮುಖ್ಯಬೆಳೆಯಾಗಿ ಬೆಳೆಯುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈವರ್ಷ ಇದಕ್ಕೆ ರೋಗ ಕಾಣಿಸಿಕೊಂಡಿದೆ. ಹಣ್ಣು ಬಿಡುವ ಕಾಲಕ್ಕೆ ಮುದುಡು ರೋಗ ಬಂದಿದ್ದು, ಏನು ಮಾಡಬೇಕು ಎಂದು ತಿಳಿಯದೆ ಕಂಗಾಲಾಗಿ ಬೆಳೆಯನ್ನೇ ಕಿತ್ತು ಹಾಕುತ್ತಿರುವುದಾಗಿ ಹೇಳಿದ್ದಾರೆ.
ಒಂದು ಎಕರೆಯಲ್ಲಿ ಬೆಳೆ ಬೆಳೆಯಲು 3.5 ಲಕ್ಷ ಖರ್ಚು ಮಾಡಬೇಕು. ಇದಕ್ಕಾಗಿ ಮನೆಯಲ್ಲಿರುವ ಒಡವೆ ವಸ್ತಗಳನ್ನು ಬ್ಯಾಂಕಿನಲ್ಲಿ ಗಿರವಿಯಿಟ್ಟು ತಂದು ಬೆಳೆಯ ಮೇಲೆ ಹಾಕಿದ್ದೇವೆ. ಈಗ ರೋಗ ಬಾಧೆಯಿಂದ ಬೆಳೆ ಹಾಳಾಗಿದೆ. ವಾರಕ್ಕೆ ಎರಡು ಬಾರಿ ಔಷಧಿ ಸಿಂಪಡಣೆ ಮಾಡಿದರೂ, ಉತ್ತಮ ರೀತಿಯಲ್ಲಿ ಔಷಧೋಪಚಾರ ಮಾಡಿದರೂ ಬೆಳೆ ಉಳಿಸಿಕೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ನೆರವಿಗೆ ನಿಲ್ಲುವ ಬದಲು ಕುಂಭಕರ್ಣ ನಿದ್ದೆಯಲ್ಲಿದ್ದಾರೆ. ಟೊಮೇಟೊ ಹಣ್ಣಿಗೆ ಬಂಪರ್ ಬೆಲೆಯಿರುವ ಈ ಕಾಲದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ಕಳೆದ ವರ್ಷ ಉತ್ತಮ ಬೆಲೆ ದೊರೆತ ಕಾರಣ ಈವರ್ಷವೂ ಟೊಮೇಟೋ ಬೆಳೆ ಇಟ್ಟಿದ್ದೇವೆ. ಈಗ ಮುದುಡು ರೋಗ ಬಾಧಿಸುತ್ತಿದೆ. ಈರೋಗ ಬಂದರೆ ಗಿಡ ಒಂದೇ ಒಂದು ಕಾಯಿ ಬಿಡುವುದಿಲ್ಲ. ಗಿಡ ಹಾಗೆಯೇ ಸತ್ತುಹೋಗುತ್ತದೆ. ರೈತರು ಒಂದು ಎಕರೆಗೆ ಖರ್ಚು ಮಾಡುವ 2.5 ಲಕ್ಷ ಬಂಡವಾಳವೂ ಬಾರದೆ ನಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಇದು ಹೀಗೇ ಮುಂದುವರೆದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ನೊಂದು ನುಡಿಯುತ್ತಾರೆ.
ಸರ್ಕಾರ ಮತ್ತು ಕೃಷಿ ಸಚಿವರು ಈ ಬಗ್ಗೆ ಗಮನ ಹರಿಸಿ ರೈತರಿಗೆ ನೆರವು ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಸರಕಾರಕ್ಕೆ ಟೊಮೇಟೋ ಬೆಳೆಗಾರರ ಕಷ್ಟ ತಿಳಿಸಿ ನಷ್ಟಪರಿಹಾರ ಕೊಡಿಸುತ್ತಾರೊ ಕಾದು ನೋಡಬೇಕಾಗಿದೆ.