ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವಾದ್ರೂ ರಸ್ತೆಗಳ ಅವ್ಯವಸ್ಥೆ.
1 min read
1 year ago
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ದಿನೆ ದಿನೆ ಜನದಟ್ಟಣೆ, ವಾಹನ ಸಂಚಾರದ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಅದಕ್ಕೆ ತಕ್ಕಂತೆ ರಸ್ತೆಗಳ ಅಭಿವೃದ್ದಿಯಾಗಿಲ್ಲ ಸದ್ಯ ಹೊಸ ರಸ್ತೆಗಳು ಮಾಡೋದಿರಲಿ ಇರೋ ರಸ್ತೆಗಳಲ್ಲೆಲ್ಲಾ ಹೊಂಡಗಳಾಗಿ ಮಾರ್ಪಟ್ಟಿವೆ ಸ್ವಲ್ಪ ಮಳೆ ಬಂದರೂ ಕೃಷಿ ಹೊಂಡಗಳಾಗಿ ಮಾರ್ಪಡುತ್ತವೆ, ಇಷ್ಟೆಲ್ಲಾ ಆದರೂ ಅವುಗಳನ್ನ ದುರಸ್ತಿ ಮಾಡೋ ಕೆಲಸವೂ ಆಗ್ತಿಲ್ಲ ನಗರದ ಹೊರ ವಲಯಗಳು ಜಿಲ್ಲಾದಿಕಾರಿಗಳ ಕಚೇರಿಗೆ ಹೋಗೊ ರಸ್ತೆ ಮಂಚನಬಲೆಗೆ ಹೋಗೋ ರಸ್ತೆ ಮುಸ್ಟೂರಿಂದ ಕೇತೇನಹಳ್ಳಿ ಇಶಾ ಪೌಂಡೇಶನ್‌ಗೆ ಹೋಗೋ ರಸ್ತೆ, ಚಿಕ್ಕಬಳ್ಳಾಪುರ ನಗರದ ಎಂ ಜಿ ರಸ್ತೆ, ಗಂಗಮ್ಮ ಗುಡಿ ರಸ್ತೆ, ಕಂದವಾರ ಬಾಗಿಲಿಂದ ಕಂದವಾರಕ್ಕೆ ಹೋಗೋ ರಸ್ತೆಗೆ ಹೋದರೆ ಇದರ ಅನುಭವವಾಗುತ್ತೆ ನೋಡಿ, ನಗರದ ಕೆ ಎಸ್ ಆರ್ ಟಿ ಸಿ ಡಿಪೋದಿಂದ ಮುಂದೆಕ್ಕೆ ಸಾಗಿದರೆ ಮುಸ್ಟೂರು ಹತ್ತಿರ ಹಳ್ಳ ಹಿಡಿದ ರಸ್ತಗೆ ರಿಪೇರಿ ಮಾಡಿ ಸುಮಾರು ವರ್ಷಗಳಾಗಿದೆ ಈ ರಸ್ತೆಯಲ್ಲಿ ಜನರು ನಡೆಯುವುದಾದರೂ ಹೇಗೆ, ವಾಹನಗಳ ಸಂಚಾರವಾದರೂ ಹೇಗೆ ಎಂದು ಜೆ.ಡಿ.ಎಸ್. ಮುಖಂಡ ಶ್ರೀಧರ್ ಆಕ್ರೋಶ ವ್ಯಕ್ತಪಡಿಸಿದ್ದು, ೧೫ ದಿನಗಳ ಒಳಗೆ ರಸ್ತೆ ಸರಿಪಡಸದೆ ಹೋದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿರುತ್ತಾರೆ.
ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ರಾಜ್ಯದಲ್ಲಿ ಹೆಸರಾಗಿದೆ ಎನ್ನುವುದು ಇದಕ್ಕೇನೆ. ಈಗಲಾದ್ರು ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ನಗರದ ಹೊರವಲಯಕ್ಕೆ ಬರುವ ಗ್ರಾಮಪಂಚಾಯಿತಿಗಳು ಎಚ್ಚೆತ್ತುಕೊಂಡು ರಸ್ತೆಗಳ ದುರಸ್ತಿಗೆ ಮುಂದಾಗುತ್ತಾರಾ ಕಾದುನೋಡಬೇಕಿದೆ.