ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಒಂದೇ ಕುಟುಂಬದಲ್ಲಿ 7 ಪಡಿತರ ಚೀಟಿ ಇದ್ದರೂ ಕ್ರಮ ಯಾಕಿಲ್ಲ?

1 min read

ಆಹಾರ ಇಲಾಖೆ ಅಧಿಕಾರಿಗಳೇ ಏನು ಮಾಡುತ್ತಿದ್ದೀರಿ?

ಒಂದೇ ಕುಟುಂಬದಲ್ಲಿ 7 ಪಡಿತರ ಚೀಟಿ ಇದ್ದರೂ ಕ್ರಮ ಯಾಕಿಲ್ಲ?

ಎರಡು ಎಪಿಎಲ್, ೫ ಬಿಪಿಎಲ್ ಕಾರ್ಡುಗಳಿದ್ದರೂ ಕ್ರಮ ಇಲ್ಲ

ಪಡಿತರ ಅಂಗಡಿ ಮಾಲೀಕರು, ಆಹಾರ ನಿರೀಕ್ಷಕರ ನಿರ್ಲಕ್ಷ

ವೀಕ್ಷಕರೇ, ಇದು ಇಡೀ ರಾಜ್ಯವೇ ಬೆಚ್ಚಿ ಬೀಳೋ ಸುದ್ದಿ, ಯಾಕೆ ಅಂತೀರಾ, ಅನ್ನ ರಾಮಯ್ಯ ಎಂದೇ ಖ್ಯಾತಿ ಪಡೆದಿರುವ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಅನ್ನಭಾಗ್ಯಕ್ಕೆ ಕನ್ನ ಹಾಕಿದ ಖದೀಮರ ಸ್ಟೋರಿ. ಕೋಟ್ಯಂತರ ರುಪಾಯಿ ಆಸ್ತಿ ಇದ್ದರೂ, ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೂ ಒಂದೇ ಕುಟುಂಬದಲ್ಲಿ 7 ಪಡಿತರ ಚೀಟಿ ಪಡೆದಿರುವ ಆಶ್ಚರ್ಯಕರ ಸ್ಟೋರಿ. ಹಾಗಾದರೆ ಯಾರು ಆ ಖದೀಮರು, ಎಲ್ಲಿ ನಡೆದ ವಿಚಾರ ಇದು ಅಂತಾರಾ, ನೀವೇ ನೋಡಿ.

ವೀಕ್ಷಕರೇ ಪ್ರಸ್ತುತ ವಿರೋಧ ಪಕ್ಷದಲ್ಲಿರುವ ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡುತ್ತಿದೆ. ಅದು ಏನು ಅನ್ನೋದನ್ನ ನೀವೂ ಕೇಳಿರಬಹುದು. ರಾಜ್ಯದಲ್ಲಿ ಲಕ್ಷಾಂತರ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ. ಇದರಿಂದ ಬಡವರ ಅನ್ನ ಕಸಿಯೋ ಪ್ರಯತ್ನವನ್ನ ರಾಜ್ಯ ಸರ್ಕಾರ ಮಾಡುತ್ತಿದೆ. ಬಡ ಮತ್ತು ಮಧ್ಯಮ ಕುಟುಂಬಗಳಿಗೆ ರಾಜ್ಯ ಸರ್ಕಾರ ತೀರದ ಮೋಸ ಮಾಡುತ್ತಿದೆ ಎಂಬುದು ಬಿಜೆಪಿ ಮಾಡುತ್ತಿರೋ ಗಂಭೀರ ಆರೋಪ. ಆದರೆ ಇಲ್ಲಿ ಅದೇ ಬಿಜೆಪಿಯ ನಗರಸಭಾ ಸದಸ್ಯರೊಬ್ಬರು ತನ್ನ ಕುಟುಂಬಕ್ಕೆ ಬರೋಬ್ಬರಿ 7 ಪಡಿತರ ಚೀಟಿಗಳನ್ನು ಮಾಡಿಕೊಂಡು ದಾಖಲೆ ಮಾಡಿದ್ದಾರೆ. ಇನ್ನೂ ಪಡಿತರ ಚೀಟಿಗಳಿರುವ ಆರೋಪ ಇದ್ದು, ಸಿಟಿವಿ ನ್ಯೂಸ್‌ಗೆ ಲಭ್ಯವಾಗಿರೋದು ಕೇವಲ 7 ಪಡಿತರ ಚೀಟಿ ಮಾತ್ರ.

ಇನ್ನು ಹೀಗೆ ನಗರಸಭಾ ಸದಸ್ಯರೊಬ್ಬರು ಒಂದೇ ಕುಟುಂಬಕ್ಕೆ 7 ಪಡಿತರ ಚೀಟಿ ಪಡೆದಿದ್ದಾರಲ್ಲ, ಇದರಲ್ಲಿ ಎರಡು ಪಡಿತರ ಚೀಟಿಗಳು ಎಪಿಎಲ್ ಆಗಿದ್ದರೆ, ಉಳಿದ ಐದು ಪಡಿತರ ಚೀಟಿಗಳು ಬಿಪಿಎಲ್. ಅಂದರೆ ಕಳೆದ ಹಲವು ವರ್ಷಗಳಿಂದಲೂ ಈ ನಗರಸಭಾ ಸದಸ್ಯರು ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆಗೆ ಕನ್ನ ಕೊರೆಯುತ್ತಲೇ ಇದ್ದು, ಅದು ಈಗಲೂ ಮುಂದುವರಿದಿದೆ. ಆದರೆ ಬಡವರ ಮತ್ತು ಮಧ್ಯಮ ವರರ್ಗದವರ ಪಡಿತರ ಚೀಟಿ ರದ್ದು ಮಾಡುತ್ತಿರೋ ಆಹಾರ ಇಲಾಖೆ ಮತ್ತು ಕಂದಾಯ ಇಲಾಖೆ ಈ ನಗರಸಭಾ ಸದಸ್ಯರ ಪಡಿತರ ಚೀಟಿಗಳನ್ನು ಯಾಕೆ ರದ್ದು ಮಾಡಿಲ್ಲ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ದೊರೆಯಬೇಕಿದೆ.

ಇಲ್ಲಿ ನೋಡಿ, ಇಲ್ಲಿ ಕಾಣ್ತಾ ಇದೆಯಲ್ಲ, ಈ ಬಿಪಿಎಲ್ ಪಡಿತರ ಚೀಟಿ ಈ ಚೀಟಿಯಂತೆ ಕಾವೇರಮ್ಮ ಎಂಬುವರು ಕುಟುಂಬದ ಮುಖ್ಯಸ್ಥರು. ಇವರ ಕುಟುಂಬದಲ್ಲಿಯೇ ಕೃಷ್ಣಾಚಾರಿ, ಶ್ರೀದೇವಿ ಎಂಬ ಮಗ ಮತ್ತು ಸೊಸೆ ಇದ್ದಾರೆ. ಈ ಪಡಿತರ ಚೀಟಿ ಸಂಖ್ಯೆ ಕೊನೆಯ ನಾಲ್ಕು ಸಂಖ್ಯೆಗಳನ್ನು ಮಾತ್ರ ಹೇಳುತ್ತಿದ್ದೇನೆ 7282 ಆಗಿದೆ. ಅದೇ ರೀತಿಯಲ್ಲಿ ಈ ಪಡಿತರ ಚೀಟಿಯನ್ನೂ ನೋಡಿ ಇದು ಎಪಿಎಲ್ ಕಾರ್ಡು. ಈ ಕಾರ್ಡಿನ ಕುಟುಂಬದ ಮುಖ್ಯಸ್ಥರಾದವರು ಎ.ಬಿ. ಮಂಜುನಾಥ್, ಇದೇ ಕುಟುಂಬದಲ್ಲಿ ವೀರೇಂದ್ರ ಕುಮಾರ್, ನವನೀತ್ ಕುಮಾರ್, ಜಯಶ್ರೀ ಮತ್ತು ಕಲ್ಪನಾ ಎಂಬುವರಿದ್ದಾರೆ. ಈ ಎಪಿಎಲ್ ಪಡಿತರ ಚೀಟಿ ಸಂಖ್ಯೆ 4028 ಆಗಿದೆ.

ಇನ್ನು ಈ ಎಪಿಎಲ್ ಪಡಿತರ ಚೀಟಿಯನ್ನೂ ನೋಡಿ. ಈ ಚೀಟಿಯಂತೆ ಕುಟುಂಬದ ಮುಖ್ಯಸ್ಥರು ಕಲ್ಪನಾ, ಕುಟುಂಬದ ಸದಸ್ಯರು ಎ.ಬಿ. ಮಂಜುನಾಥ್, ಅಂದರೆ ಈ ಹಿಂದೆ ನೀವು ನೋಡಿದ್ರಲ್ಲಾ, ಎಪಿಎಲ್ ಪಡಿತರ ಚೀಟಿ, ಅದರ ಉಲ್ಟಾ ಹೆಸರುಗಳು ಇದರಲ್ಲಿ ನಮೂದಾಗಿವೆ. ಅಂದರೆ ಎ.ಬಿ. ಮಂಜುನಾಥ್ ಮತ್ತು ಕಲ್ಪನಾ ಅವರ ಹೆಸರಿನಲ್ಲಿ ಎರಡೆರಡು ಎಪಿಎಲ್ ಕಾರ್ಡುಗಳನ್ನು ಮಾಡಿಸಲಾಗಿದೆ. ಈ ಎಪಿಎಲ್ ಪಡಿತರ ಚೀಟಿ ಸಂಖ್ಯೆ 8114 ಆಗಿದೆ.

ಇನ್ನು ಈ ಪಡಿತರ ಚೀಟಿಯನ್ನೊಮ್ಮೆ ನೋಡಿ, ಗಂಡನನ್ನು ಕಳೆದುಕೊಂಡು ಏಕಾಂಗಿಯಾಗಿರೋ ವಿಧವಾ ಮಹಿಳೆ ಒಬ್ಬರೇ ಇದ್ದರೆ ಅವರಿಗೆ ನಮ್ಮ ಆಹಾರ ಇಲಾಖೆಯಿಂದ ಪಡಿತರ ಚೀಟಿ ನೀಡೋದಿಲ್ಲ. ಆದರೆ ಇಲ್ಲಿ ನೋಡಿ ಕೇವಲ 22 ವರ್ಷದ ಸೂರಜ್ ಎಂಬ ಯುವಕ ಕುಟುಂಬದ ಮುಖ್ಯಸ್ಥನಾಗಿದ್ದಾನೆ. ಈತನೊಂದಿಗೆ 19 ವರ್ಷದ ಜಯಶ್ರೀ ಎಂಬುವರು ಕುಟುಂಬದ ಸದಸ್ಯರಾಗಿದ್ದಾರೆ. ಇವರ ಮಧ್ಯ ಇರುವ ಸಂಬ0ಭವೂ ಪಡಿತರ ಚೀಟಿಯಲ್ಲಿ ದಾಖಲಾಗಿಲ್ಲ. ಈ ಬಿಪಿಎಲ್ ಪಡಿತರ ಚೀಟಿಯ ಸಂಖ್ಯೆ 4368 ಆಗಿದೆ.

ಇನ್ನು ಈ ಪಡಿತರ ಚೀಟಿಯನ್ನು ನೋಡಿದರೆ ನೀವು ಆಶ್ಚರ ಪಡೋದು ಮಾತ್ರವಲ್ಲ, ನಮ್ಮ ಆಹಾರ ಇಲಾಖೆ ಅಧಿಕಾರಿಗಳಿಗೆ ಸ್ವಲ್ಪವಾದರೂ ವೃತ್ತಿ ಧರ್ಮ ಇದ್ದರೆ ಮೋರ್ಚೆ ಹೋಗಬೇಕು. ಯಾಕೆ ಇಷ್ಟೆಲ್ಲ ಹೇಳುತ್ತಿದ್ದೇನೆ ಎಂಬ ಕುತೂಹಲ ಬೇಡ. ಕಾರಣ ಕೇವಲ 16 ವರ್ಷದ ವೀರೇಂದ್ರ ಕುಮಾರ್ ಎಂ ಎಂಬ ಯುವಕ ಕುಟುಂಬದ ಮುಖ್ಯಸ್ಥನಾಗಿ ಪಡಿತರ ಚೀಟಿ ಪಡೆದಿದ್ದಾನೆ. ಮತ್ತೂ ವಿಪರ್ಯಾಸವೆಂದರೆ ಈತ ಒಬ್ಬನೇ ಇದ್ದು, ಈತನ ಕುಟುಂಬದ ವಿವರಗಳೇ ದಾಖಲಾಗಿಲ್ಲ. ಅಪ್ರಾಪ್ತ ಬಾಲಕನಿಗೂ ಬಿಪಿಎಲ್ ಪಡಿತರ ಚೀಟಿ ಮಾಡಿಸಿದ ಕೀರ್ತಿ ನಮ್ಮ ಆಹಾರ ಇಲಾಖೆಗೆ ಸಲ್ಲಲಿದ್ದು, ಈ ಬಿಪಿಎಲ್ ಪಡಿತರ ಚೀಟಿ ಸಂಖ್ಯೆ 4367 ಆಗಿದೆ.

ಇನ್ನು ಈ ಪಡಿತರ ಚೀಟಿಯನ್ನೂ ನೋಡಿ ನೀರಜಾ ಎಂಬ ಕುಟುಂಬದ ಮುಖ್ಯಸ್ಥರು, ಇವರ ಪತಿ ಎ. ರಮೇಶ್ ಎಂದು ನಮೂದಿಸಲಾಗಿದ್ದು, ಕಾರ್ತಿಕ್ ಆರ್, ಪವನ್ ಕುಮಾರ್ ಆರ್, ದೀಕ್ಷಿತ ಆರ್, ನವನೀತ್ ಕುಮಾರ್ ಎಂ ಎಂಬ ಕುಟುಂಬದ ಸದಸ್ಯರಿದ್ದಾರೆ. ಇದರಲ್ಲಿರುವ ನವನೀತ್ ಕುಮಾರ್ ಈ ಹಿಂದೆ ನೋಡಿದ ಎಪಿಎಲ್ ಪಡಿತರ ಚೀಟಿಯಲ್ಲೂ ದಾಖಲಾಗಿದ್ದಾನೆ. ಅಂದರೆ ಏಳೂ ಪಡಿತರ ಚೀಟಿಗಳಲ್ಲಿಯೂ ಒಂದೇ ಕುಟುಂಬದ ಹೆಸರುಗಳು ಪುನರಾವರ್ತನೆಯಾಗಿವೆ. ಈ ಬಿಪಿಎಲ್ ಪಡಿತರ ಚೀಟಿ ಸಂಖ್ಯೆ 4029 ಆಗಿದೆ. ಇನ್ನು ಕೊನೆಯದಾಗಿ 23 ವರ್ಷದ ವಿನಯ್ ಎಂಬ ಯುವಕ ಕುಟುಂಬದ ಮುಖ್ಯಸ್ಥನಾಗಿದ್ದು, ಈತನ ಕುಟುಂಬದ ವಿವರಗಳೂ ದಾಖಲಾಗಿಲ್ಲ, ಅಂದರೆ ಏಕ ಸದಸ್ಯ ಕುಟುಂಬದಲ್ಲಿ 23 ವರ್ಷದ ವಿನಯ್ ಇದ್ದಾನೆ. ಈ ಪಡಿತರ ಚೀಟಿ ಸಂಖ್ಯೆ 4030 ಆಗಿದೆ.

ಈ ಎಲ್ಲ ಪಡಿತರ ಚೀಟಿಗಳು ನೋಡಿದ ಮೇಲೆ ನಿಮಗೆ ಅರ್ಥವಾಗಿರಬಹುದು, ಈ ನಗರಸಭಾ ಸದಸ್ಯರ ಕುಟುಂಬ ಯಾವುದು ಅಂತ. ಈ ನಗರಸಭಾ ಸದಸ್ಯನ ಕುಟುಂಬಕ್ಕೆ ಎರಡೋ ಮೂರೋ ಚಿನ್ನದ ಅಂಗಡಿಗಳಿವೆ. ಹತ್ತಾರು ಎಕರೆ ಭೂಮಿ ಇದೆ. ಜಿಲ್ಲಾಕೇಂದ್ರದಲ್ಲಿ ಸ್ವಂತ ಮನೆ ಮಾತ್ರವಲ್ಲ, ಮನೆಗಳು ಮತ್ತು ಜೊತೆಗೆ ಸ್ವಂತ ಅಂಗಡಿಗಳೂ ಇವೆ. ಅಷ್ಟೇ ಅಲ್ಲ, ಚಿನ್ನದ ವ್ಯಾಪಾರದಲ್ಲಿ ಈತ ಆದಾಯ ತೆರಿಗೆಯನ್ನೂ ಪಾವತಿಸುತ್ತಿದ್ದಾನೆ. ಹಾಗಿದ್ದರೂ ಐದು ಬಿಪಿಎಲ್ ಮತ್ತು ಎರಡು ಎಪಿಎಲ್ ಪಡಿತರ ಚೀಟಿಗಳು ಹಲವು ವರ್ಷಗಳ ಹಿಂದೆಯೇ ಹೇಗೆ ನೀಡಲಾಗಿದೆ ಎಂಬ ಪ್ರಶ್ನೆಗೆ ಆಹಾರ ಇಲಾಖೆ ಅಧಿಕಾರಿಗಳು ಉತ್ತರ ನೀಡಬೇಕಿದೆ.

ಜಿಲ್ಲಾಧಿಕಾರಿಗಳು, ಉಪ ವಿಭಗಾಧಿಕಾರಿಗಳು ಮತ್ತು ತಹಸೀಲ್ದಾರ್ ಅವರು ಈ ಕುರಿತು ಕೂಡಲೇ ನಗರಸಭಾ ಸದಸ್ಯನ ವಿರುದ್ಧ ಪ್ರಕಣ ದಾಖಲಿಸಬೇಕಿದೆ. ಮಾತ್ರವಲ್ಲ, ಜನಪ್ರತಿನಿಧಿಯಾಗಿ ಬಡವರ ಅನ್ನಕ್ಕೆ ಕನ್ನ ಹಾಕಿದ ನಗರಸಭಾ ಸದಸ್ಯ ಎಷ್ಟು ವರ್ಷಗಳಿಂದ ಪಡಿತರ ಪಡೆದಿದ್ದಾನೋ ಅಷ್ಟೂ ಪಡಿತರ ದಂಡದ ಸಮೇತ ವಸೂಲಿ ಮಾಡಬೇಕಿದೆ. ಮುಂದೆ ಈ ರೀತಿಯಲ್ಲಿ ಯಾರೂ ಮಾಡದಂತೆ ಈತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕಿದೆ. ಇಲ್ಲವಾದರೆ ಅರ್ಹರಿಗೆ ಸಿಗಬೇಕಾದ ಪಡಿತರ ಇಂತಹ ಅನರ್ಹರ ಪಾಲಾಗುವುದರಲ್ಲಿ ಅನುಮಾನವಿಲ್ಲ.

About The Author

Leave a Reply

Your email address will not be published. Required fields are marked *