ಭೂಮಿಪೂಜೆ ಆಗಿ ಒಂದೂವರೆ ವರ್ಷ ಕಳೆದರೂ ರಸ್ತೆಗಿಲ್ಲ ಮುಕ್ತಿ
1 min read
ಭೂಮಿಪೂಜೆ ಆಗಿ ಒಂದೂವರೆ ವರ್ಷ ಕಳೆದರೂ ರಸ್ತೆಗಿಲ್ಲ ಮುಕ್ತಿ
ಆಮೆಗತಿಯಲ್ಲಿ ಸಾಗಿದ ರಾಜಘಟ್ಟ ಕೆರೆ ಏರಿ ರಸ್ತೆ ಅಗಲೀಕರಣ ಕಾಮಗಾರಿ
2.60 ಕೋಟಿ ರೂ.ವೆಚ್ಚದಲ್ಲಿ ಆರಂಭಗೊAಡಿದ್ದ ಯೋಜನೆಗೆ ನೂರೆಂಟು ವಿಘ್ನ
ಇದು ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ಮಾರ್ಗದ ಪ್ರಮುಖ ರಸ್ತೆ.. ಧೀರಜ್ ಮುನಿರಾಜು ಶಾಸಕರಾಗಿ ಆಯ್ಕೆಯಾದ ಬಳಿಕ ಭೂಮಿಪೂಜೆ ನೇರವೇರಿಸಿದ ಮೊದಲ ಅಭಿವೃದ್ಧಿ ಯೋಜನೆ. ಆದರೆ ಇದೀಗ ಬರೊಬ್ಬರಿ ಒಂದೂವರೆ ವರ್ಷ ಕಳೆದರೂ ಈ ರಸ್ತೆ ಅಭಿವೃದ್ಧಿಗೆ ಮಾತ್ರ ಮುಕ್ತಿ ಸಿಕ್ಕಿಲ್ಲ.
ದೊಡ್ಡಬಳ್ಳಾಪುರ ತಾಲ್ಲೂಕಿನ ಐತಿಹಾಸಿಕ ರಸ್ತೆಯಾದ ರಾಜಘಟ್ಟ ಕೆರೆ ಏರಿ ರಸ್ತೆ ಅಭಿವೃದ್ಧಿಗೆ ಕಳೆದ ಒಂದೂವರೆ ವರ್ಷದ ಹಿಂದೆ ಶಾಸಕ ಧೀರಜ್ ಮುನಿರಾಜು ಭೂಮಿಪೂಜೆ ನೇರವೇರಿಸಿದ್ದರು. ಶಾಸಕರಾಗಿ ಆಯ್ಕೆಯಾದ ಬಳಿಕ ಮಹತ್ವಾಕಾಂಕ್ಷೆಯಿ0ದ ಮೊದಲ ಬಾರಿಗೆ ತಾಲ್ಲೂಕಿನ ಅಭಿವೃದ್ಧಿಯ ಯೋಜನೆಯ ಭಾಗವಾಗಿ ಈ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಇದೀಗ ಏರಿ ರಸ್ತೆ ಅಭಿವೃದ್ಧಿಯಾಗದೆ ಅಪಘಾತಗಳ ಸ್ಪಾಟ್ ಆಗಿ ಪರಿರ್ವತನೆಯಾಗದೆ.
ಕೆರೆ ಏರಿ ರಸ್ತೆಯ ಪಕ್ಕದಲ್ಲೇ ಇದ್ದ ಶತಮಾನಗಳ ಇತಿಹಾಸವುಳ್ಳ ಬೃಹತ್ ಹುಣಸೆ ಮರಗಳು ಮತ್ತು ಇತರ ಮರಗಳನ್ನ ತೆರವು ಮಾಡಲು ಒಂದುವರ್ಷ ಕಳೆದಿದೆ. ಇನ್ನೂ ಮರಗಳಿದ್ದು ಮರಗಳ ತೆರವಿಗೆ ಅರಣ್ಯ ಇಲಾಖೆ-ಲೋಕೋಪಯೋಗಿ ಇಲಾಖೆಗಳ ಮಧ್ಯ ಸಮನ್ವಯ ಕೊರತೆ ಕಗ್ಗಂಟಾಗಿ ಮಾರ್ಪಟ್ಟ ಪರಿಣಾಮ ಕಾಮಗಾರಿ ಆಮೆಗತಿಯಲ್ಲಿ ಸಾಗಿ, ಮರ ಕಡಿಯುವುದರ ಕಾಲ ಸವೆದಿದೆ.
ಹತ್ತಕ್ಕೂ ಹೆಚ್ಚು ತಿರುವುಗಳನ್ನ ಹೊಂದಿರುವ ಕೆರೆ ಏರಿ ರಸ್ತೆ ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ಸಂಪರ್ಕದ ಮುಖ್ಯ ರಸ್ತೆಯಾಗಿದೆ.
ಒಂದೂವರೆ ವರ್ಷದ ಹಿಂದೆ ಭೂಮಿಪೂಜೆ ನೇರವೇರಿಸಿದ ಸಮಯದಲ್ಲಿ 2.60 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಕೆಲಸಕ್ಕೆ ಗುದ್ದಲ್ಲಿ ಪೂಜೆ ನೇರವೇರಿಸಲಾಗಿತ್ತು. ಆದರೀಗ ತಿರುವುಗಳ ಸಂಖ್ಯೆ ಹೆಚ್ಚಾಗಿರುವದರಿಂದ ಮತ್ತಷ್ಟು ಅಗಲ ಮಾಡಿ ರಸ್ತೆ ಮಾಡುವ ಪ್ರಸ್ತಾವನೆ ಗುತ್ತಿಗೆದಾರರು ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದ್ದಾರೆ. ಈ ಮೂಲಕ ಬಜೆಟ್ ಮೊತ್ತವನ್ನ ಹಿಗ್ಗಿಸುವಂತೆ ಗುತ್ತಿಗೆದಾರ ನಿಖಿಲ್ ಇಲಾಖೆಗೆ ಮನವಿ ಮಾಡಿದ್ದು, ಅನುಮೋದನೆಗೆ ಒಪ್ಪಿಗೆ ಸಿಕ್ಕ ಕೂಡಲೇ ಕಾಮಗಾರಿ ಆರಂಭಿಸಲಾಗುವುದೆ0ದು ತಿಳಿಸಿದ್ದಾರೆ.