ಶೀ ಕೆವಿ ಬಿ.ಎಡ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ
1 min readಶೀ ಕೆವಿ ಬಿ.ಎಡ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ
ನಲ್ಲಪರೆಡ್ಡಿಪಲ್ಲಿಯಲ್ಲಿ ಬಿಎಡ್ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ
ಪರಿಸರ ಉಳಿವು, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಜನರಿಗೆ ಅರಿವು
ಬಾಗೇಪಲ್ಲಿ ತಾಲೂಕಿನ ನಲಪರೆಡ್ಡಿಪಲ್ಲಿಯಲ್ಲಿ ಬಿಎಡ್ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇತ್ತೀಚಿಗೆ ಪರಿಸರ ಮಾಲಿನ್ಯ, ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು ವಾತಾವರಣದಲ್ಲಿ ಏರುಪೇರಾಗುತ್ತಿದೆ. ಈ ಎಲ್ಲವನ್ನು ತಡೆಯಲು ಗಿಡ ಮರಗಳು ಮುಖ್ಯ ಕಾಡನ್ನು ಬೆಳೆಸಿ ನಾಡನ್ನು ಉಳಿಸಿ ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕಾಗಿದೆ ಎಂದು ಗ್ರಾಮೀಣ ಜನರಲ್ಲಿ ಅರಿವು ಮೂಡಿಸಿದರು.
ಬಾಗೇಪಲ್ಲಿ ತಾಲೂಕಿನ ನಲಪರೆಡ್ಡಿಪಲ್ಲಿಯಲ್ಲಿ ಬಿಎಡ್ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇತ್ತೀಚಿಗೆ ಪರಿಸರ ಮಾಲಿನ್ಯ, ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು ವಾತಾವರಣದಲ್ಲಿ ಏರುಪೇರಾಗುತ್ತಿದೆ. ಈ ಎಲ್ಲವನ್ನು ತಡೆಯಲು ಗಿಡ ಮರಗಳು ಮುಖ್ಯ. ಕಾಡನ್ನು ಬೆಳೆಸಿ ನಾಡನ್ನು ಉಳಿಸಿ ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕಾಗಿದೆ ಎಂದು ಗ್ರಾಮೀಣ ಜನರಲ್ಲಿ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಬಿ ಎಡ್ ವಿದ್ಯಾರ್ಥಿ ಹರೀಶ್.ಡಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿ ಒಂದು ಮನೆಗೆ ಒಂದು ಗಿಡ ನೆಟ್ಟು ಪರಿಸರ ಉಳಿಸಬೇಕು. ಇತ್ತೀಚಿನ ದಿನಗಳಲ್ಲಿ ಪರಿಸರ ನಾಶ ಹೆಚ್ಚಾಗುತ್ತಿದೆ. ಇದರಿಂದ ವಾಯು ಮಾಲಿನ್ಯ, ಜಲ ಮಾಲಿನ್ಯ ಸೇರಿದಂತೆ ಪರಿಸರ ಮಾಲಿನ್ಯ ಉಂಟಾಗಿ, ಜನರು ಅನೇಕ ರೋಗಗಳಿಗೆ ತುತ್ತಾಗುವಂತಾಗಿದೆ. ಗಾಂಧೀಜಿಯವರು ಹೇಳಿದಂತೆ ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ, ನಾಗರಿಕರು ಗ್ರಾಮದ ರಸ್ತೆಬದಿ, ಶಾಲೆ ಹಾಗೂ ಗ್ರಾಮದ ಸುತ್ತಮುತ್ತ ಗಿಡ ನೆಟ್ಟು ಪರಿಸರವನ್ನು ಉಳಿಸಿಬೇಕಾಗಿದೆ ಎಂದು ವಿದ್ಯಾರ್ಥಿ ಹರೀಶ್ ಹೇಳಿದರು.
ಕೆವಿ ಕ್ಯಾಂಪಸ್ ನಲ್ಲಿ ಜುಲೈ ೨೪ ರಂದು ದತ್ತಿ ದಿನಾಚರಣೆ ನಡೆಸಲಾಗುತ್ತಿದ್ದು, ಈ ದತ್ತಿ ದಿನಾಚರಣೆ ಅಂಗವಾಗಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ, ರಕ್ತದಾನ ಶಿಬಿರವನ್ನು ಕೆ.ವಿ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದು, ಎಲ್ಲ ಆರೋಗ್ಯವಂತ ಯುವಕರೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಡುವ ಮೂಲಕ ಜೀವಧಾತರಾಗುವಂತೆ ಮನವಿ ಮಡಿದರು.
ಆರೋಗ್ಯ ಇಲಾಖೆಯ ಕಲ್ಪನಾ ಮಾತನಾಡಿ, ಇತ್ತೀಚಿಗೆ ಗ್ರಾಮೀಣ ಭಾಗಗಳಲ್ಲಿ ಸೊಳ್ಳೆಗಳಿಂದ ಡೆಂಘೀ ಜ್ವರ ಹೆಚ್ಚಾಗುತ್ತಿದೆ. ನಾಗರಿಕರು ಪರಿಸರ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮನೆ ಮುಂದೆ ಚರಂಡಿ ಹಾಗೂ ತೊಟ್ಟಿಗಳನ್ನು ಸ್ವಚ್ಛತೆ ಮಾಡಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ, ಲಾರ್ವಾ ಉತ್ಪತ್ತಿಯಾಗುವುದನ್ನು ತಪ್ಪಿಸಲು ಚಿಕ್ಕ ಚಿಕ್ಕ ಮೀನುಗಳನ್ನು ತೊಟ್ಟಿಗಳಲ್ಲಿ ಬಿಡುವುದರಿಂದ ಲಾರ್ವಾ ತಿಂದು ಸೊಳ್ಳೆ ಉಥ್ಪತ್ತಿಯನ್ನು ತಡೆಯುತ್ತವೆ ಎಂದರು.
ಸೊಳ್ಳೆ ಉತ್ಪತ್ತಿ ತಡೆಯುವುದರಿಂದ ಮಾರಕ ಡೆಂಘೀ ಜ್ವರ ತಡೆಯಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ರತ್ನಮ್ಮ, ಆಶಾ ಕಾರ್ಯಕರ್ತೆ ಜಯಮ್ಮ, ಶಿವಕುಮಾರ್, ಹರೀಶ್, ಆಶಾ, ಶಾಲಾ ಮಕ್ಕಳು, ಬಿ ಎಡ್ ವಿದ್ಯಾರ್ಥಿಗಳು ಇದ್ದರು.