ಬಾಗೇಪಲ್ಲಿ ಪುರಸಭೆಯಿಂದ ಅತಿಕ್ರಮ ತೆರವು ಕಾರ್ಯಾಚರಣೆ
1 min read
ಬಾಗೇಪಲ್ಲಿ ಪುರಸಭೆಯಿಂದ ಅತಿಕ್ರಮ ತೆರವು ಕಾರ್ಯಾಚರಣೆ
ಫುಟ್‌ಪಾತ್ ಒತ್ತುವರಿ ತೆರುವುಗೊಳಿಸಿದ ಪುರಸಭೆ ಅಧಿಕಾರಿಗಳು
ಬೆಳ್ಳಂ ಬೆಳಗ್ಗೆ ಕಾರ್ಯಾಚರಣೆಗಿಳಿದ ಜೆಸಿಬಿ, ಟ್ರಾಕ್ಟರ್‌ಗಳು
ಬಾಗೇಪಲ್ಲಿ ಪಟ್ಟಣದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಫುಟ್‌ಪಾತ್ ಒತ್ತುವರಿ ತೆರುವು ಕಾರ್ಯಾಚರಣೆ ಇಂದು ನಡೆದಿದ್ದು, ಪುರಸಭೆ ಮತ್ತು ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ಹಾಗೂ ವೃತ್ತ ನಿರೀಕ್ಷಕ ಪ್ರಶಾಂತ್ ವರ್ಣಿ ನೇತೃತ್ವದಲ್ಲಿ ಫುಟ್ ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆ ನೆಡೆಯಿತು.
ಹೌದು, ಬಾಗೇಪಲ್ಲಿಯಲ್ಲಿ ಮೊದಲು ರಸ್ತೆ ಅಗಲೀಕರಣ ಆಯಿತು. ರಸ್ತೆ ಅಗಲೀಕರಣವಾಗಿ ದಶಕಗಳೇ ಕಳೆದರೂ ರಸ್ತೆ ಮಾತ್ರ ಸಾರ್ವಜನಿಕರ ಸುಗಮ ಸಂಚಾರಕ್ಕೆ ಸಾಧ್ಯವಾಗಿರಲಿಲ್ಲ. ಇದಕ್ಕೆ ಕಾರಣ ಫುಟ್‌ಪಾತ್ ಸೇರಿದಂತೆ ರಸ್ತೆ ಒತ್ತುವರಿ ತೆರುವು. ಈ ಫುಟ್‌ಪಾತ್ ಒತ್ತುವರಿ ತೆರುವು ಮಾಡಲು ಜನಪ್ರತಿನಿಧಿಗಳಿಗೆ ಮತ ಬ್ಯಾಂಕ್ ಧಯವಾದರೆ, ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಭೀತಿ. ಇದರಿಂದಾಗಿ ದಶಕಗಳಿಂದಲೂ ಫುಟ್‌ಪಾತ್ ಒತ್ತುವರಿ ತೆರುವು ಎಂಬ ವಿಚಾರ ಕಗ್ಗಂಟಾಗಿ ಪರಿಣಮಿಸಿತ್ತು.
ಪುರಸಭೆ ವ್ಯಾಪ್ತಿಯ ಡಿವಿಜಿ ರಸ್ತೆ, ಗೂಳೂರು ವೃತ್ತ ಹಾಗೂ ಇತರೆ ರಸ್ತೆ, ಪುಟ್ ಪಾತ್ ಮೇಲೆ ಡಬ್ಬಾ ಅಂಗಡಿಗಳು, ಬಾಳೆ ಹಣ್ಣು, ಹೂವು, ತರಕಾರಿ ಸೇರಿದಂತೆ ಇತರೆ ವ್ಯಾಪಾರ ಮಾಡಲು ಶಡ್ ನಿರ್ಮಿಸಿಕೊಂಡು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗಿದ್ದ ಎಲ್ಲ ಒತ್ತುವರಿಗೆ ಇಂದು ಮುಕ್ತಿ ದೊರಕಿಸಲಾಯಿತು. ಒತ್ತುವರಿ ಮಾಡಿದ್ದವರಿಗೆ ಪುರಸಭೆ ಅಧಿಕಾರಿಗಳು ಜೆಸಿಪಿ,ಟ್ರಾö್ಯಕ್ಟರ್ ಮೂಲಕ ಕಾರ್ಯಚರಣೆ ನಡೆಸಿ, ಬಿಸಿ ಮುಟ್ಟಿಸುವ ಜೊತೆಗೆ ಯಾವುದೇ ಮುಲಾಜಿಲ್ಲದೆ ತೆರವು ಮಾಡಿದರು.
ಜೆಸಿಬಿಯೊಂದಿಗೆ ಪುರಸಭೆ ಅಧಿಕಾರಿಗಳು ಅತಿಕ್ರಮಣ ಡಬ್ಬಾ ಅಂಗಡಿಗಳ ತೆರವು ಕಾರ್ಯಚರಣೆ ಪ್ರಾರಂಬಿಸುವ ಬಗ್ಗೆ ಕಳೆದ ಒಂದು ವಾರದಿಂದಲೂ ಪ್ರಕಟನೆ ಹೊರಡಿಸಲಾಗಿತ್ತು. ಆದರೂ ಒತ್ತುವರಿದಾರರು ಅಂಗಡಿಗಳನ್ನು ತೆರವುಗೊಳಿಸದೆ ನಿರ್ಲಕ್ಷ ವಹಿಸಿದ್ದರು. ಸಾಲದೆಂಬAತೆ ಶಾಸಕರ ಮೊರೆ ಹೋಗಿ, ಫುಟ್‌ಪಾತ್ ತೆರುವು ಮಾಡದಂತೆ ಮನವಿಯನ್ನೂ ಮಾಡಿದ್ದರು. ಆದರೆ ಇದು ನ್ಯಾಯಾಂಗ ವಿಚಾರವಾದ ಕಾರಣ ಶಾಸಕರೂ ಮಧ್ಯಪ್ರವೇಶಕ್ಕೆ ನಿರಾಕರಿಸಿದ್ದರು. ಇದರಿಂದಾಗಿ ಇಂದು ಬೆಳ್ಳಂ ಬೆಳಿಗ್ಗೆ ಜೆಸಿಬಿ ಘರ್ಜನೆಯೊಂದಿಗೆ ತೆರವು ಕಾರ್ಯಚರಣೆ ಆರಂಭಿಸುತ್ತಿದ್ದ0ತೆ ಇದನ್ನು ಗಮನಿಸಿದ ಕೆಲ ಒತ್ತುವರಿದಾರರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ತೆರವು ಮಾಡಿಕೊಂಡರು.
ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ಮಾತನಾಡಿ, ಪಾದಚಾರಿಗಳಿಗೆ ನಡೆಯಲು ಅನುಕೂಲ ಮಾಡಿಕೊಡುವುದು ಪ್ರಮುಖ ಉಧ್ಧೇಶವಾಗಿದೆ. ತೆರವು ಕಾರ್ಯಾಚರಣೆ ಯಾರ ಮೇಲಿನ ಸೇಡಿನ ಕ್ರಮವಲ್ಲ. ನ್ಯಾಯಲಯಗಳು ಈಗಾಗಲೇ ಫುಟ್ ಪಾತ್ ಒತ್ತುವರಿ ತೆರವು ಮಾಡಬೇಕು ಎಂಬ ಆದೇಶ ನೀಡಿವೆ. ಕಾನೂನು ಪರಿಪಾಲನೆ ನಮ್ಮ ಕರ್ತವ್ಯ ಅದ್ದರಿಂದ ತೆರವು ಕಾರ್ಯಚರಣೆ ಮಾಡಲಾಗಿದೆ. ಜನರ ಸುರಕ್ಷತೆ ನಮ್ಮ ಆದ್ಯತೆ, ಸುಗಮ ಸಂಚಾರ, ಪಾದಚಾರಿಗಳಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ. ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿ, ಪೋಲಿಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.