ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರ ಆಯ್ಕೆ
1 min readರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರ ಆಯ್ಕೆ
ತಾಲೂಕು ಅಧ್ಯಕ್ಷರಾಗಿ ಅಶೋಕ್ ಕುಮಾರ್ ಆಯ್ಕೆ
ರಾಜ್ಯ ಸರ್ಕಾರಿ ನೌಕರರ ಚಿಂತಾಮಣಿ ತಾಲೂಕು ಸಂಘದ ಅಧ್ಯಕ್ಷರಾಗಿ ಆರ್. ಅಶೋಕ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸರ್ಕಾರಿ ನೌಕರರ ಎಲ್ಲಾ ಇಲಾಖೆಗಳಿಂದ 33 ನಿರ್ದೇಶಕರಿದ್ದು, ಅದರಲ್ಲಿ 23 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿ, ಉಳಿದ 10 ಸದಸ್ಯರಿಗೆ ಚುನಾವಣೆಯ ನಡೆದಿತ್ತು.
ರಾಜ್ಯ ಸರ್ಕಾರಿ ನೌಕರರ ಚಿಂತಾಮಣಿ ತಾಲೂಕು ಅಧ್ಯಕ್ಷರಾಗಿ ಆರ್. ಅಶೋಕ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದು, ಅಧ್ಯಕ್ಷ ಸ್ಥಾನಕ್ಕೆ ಆರ್. ಅಶೋಕ್ ಕುಮಾರ್ ಮತ್ತು ಡಾ. ಮುನಿರೆಡ್ಡಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ಬೇಡವೆಂದು ಸಭೆಯಲ್ಲಿ ತೀರ್ಮಾನಿಸಿ, ಐದು ವರ್ಷದ ಅವಧಿಯನ್ನು ಇಬ್ಬರೂ ಹಂಚಿಕೊಳ್ಳಲು ತೀರ್ಮಾನಿಸಿ, ಅವಿರೋಧ ಆಯ್ಕೆ ಮಾಡಲಾಗಿದೆ.
ಲಾಟರಿ ಮೂಲಕ ಮೊದಲ ಎರಡೂವರೆ ವರ್ಷದ ಅವಧಿಗೆ ಆರ್. ಅಶೋಕ್ ಕುಮಾರ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ ಮುಂದಿನ ಎರಡೂವರೆ ವರ್ಷದ ಅವಧಿಗೆ ಡಾ. ಮುನಿರೆಡ್ಡಿ ಅಧ್ಯಕ್ಷರಾಗಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸರ್ಕಾರಿ ನೌಕರರು ತಿಳಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಚಿಂತಾಮಣಿ ತಾಲೂಕು ಸಂಘಕ್ಕೆ ಖಜಾಂಚಿಯಾಗಿ ಜನಾರ್ಧನ ಬಾಬು, ರಾಜ್ಯ ಪರಿಷತ್ ಸದಸ್ಯರಾಗಿ ಆರ್. ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಮಣ ರೆಡ್ಡಿ ತಿಳಿಸಿದ್ದಾರೆ.
ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ ರೆಡ್ಡಿ. ಶಿಕ್ಷಕರಾದ ರಾಮರೆಡ್ಡಿ. ಈಶ್ವರ ರೆಡ್ಡಿ. ಆಂಜನೇಯರೆಡ್ಡಿ. ಬುರುಡುಗುಂಟೆ ವೆಂಕಟಾಚಲಪತಿ. ನಿವೃತ್ತ ಶಿಕ್ಷಕ ಆರ್. ನಾರಾಯಣ ರೆಡ್ಡಿ. ಸಿ.ಎಸ್. ಶ್ರೀನಿವಾಸರೆಡ್ಡಿ. ಚೌಡಪ್ಪ ಇದ್ದರು.