ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಕುತೂಹಲ ಕೆರಳಿಸಿದ ನಗರಸಭೆ ಅಧ್ಯಕ್ಷ ಚುನಾವಣೆ

1 min read

ಕುತೂಹಲ ಕೆರಳಿಸಿದ ನಗರಸಭೆ ಅಧ್ಯಕ್ಷ ಚುನಾವಣೆ

ಇನ್ನೂ ಅಖಾಡಕ್ಕಿಳಿಯದ ಸಂಸದ ಡಾ.ಕೆ. ಸುಧಾಕರ್

ಸದಸ್ಯರೊಂದಿಗೆ ಮಾತುಕತೆ ನಡೆಸುತ್ತಿರುವ ಶಾಸಕ

ಉಭಯ ಪಕ್ಷಗಳಲ್ಲೂ ಅತೃಪ್ತರ ದಂಡು

ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಗಾದಿಗೆ ಈಗಾಗಲೇ ಮೀಸಲಾತಿ ಪ್ರಕಟವಾಗಿದೆ. ಅಧ್ಯಕ್ಷ ಉಪಾಧ್ಯಕ್ಷರ ?ಆಯ್ಕಗೆ ದಿನಾಂಕ ನಿಗಧಿಯಾಗಬೇಕಿದ್ದು, ಚುನಾವಣೆ ನಿಗಧಿಗೂ ಮುನ್ನವೇ ಸದಸ್ಯರಲ್ಲಿ ರಾಜಕೀಯ ಗರಿಗದರಿದೆ. ಆದರೆ ಸಂಸದ ಡಾ.ಕೆ. ಸುಧಾಕರ್ ಅವರು ಇನ್ನೂ ಅಖಾಡಕ್ಕಿಳಿಯದೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದರೆ, ಶಾಸಕರು ಶತಾಯ ಗತಾಯ ಅಧಿಕಾರ ಹಿಡಿಯಲು ಈಗಾಗಲೇ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ.

ಹೌದು, ಇಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಸ್ಥಾನ ಎಂಬುದು ಇದೀಗ ಪ್ರತಿಷ್ಠೆಯಾಗಿ ಪರಿಣಮಿಸಿದೆ. ವಿಧಾನಸಭಾ ಚುನಾವಣೆಗಳಲ್ಲಿ ಸೋತು, ಲೋಕಸಭಾ ಚುನಾವಣಯೆಲ್ಲಿ ಗೆಲುವಿನ ನಗೆ ಬೀರಿದ ಡಾ.ಕೆ. ಸುಧಾಕರ್ ಅವರ ಅಧಿಕಾರವೇ ಕಳೆದ 10 ವರ್ಷಗಳಿಂದ ನಡೆಯುತ್ತಿತ್ತು. ಆದರೆ ಇದೀಗ ಚಿಕ್ಕಬಳ್ಳಾಪುರಕ್ಕೆ ಹೊಸ ಶಾಸಕರು ಬಂದಿರುವ ಹಿನ್ನೆಲೆಯಲ್ಲಿ ಇದೀಗ ರಾಜಕೀಯ ಬಿಸಿಯೇರಿದ್ದು, ಉಳಿದ ಒಂದು ವರ್ಷದ ಅವಧಿಗೆ ನಗರಸಭಾ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಕುತೂಹಲ ತೀವ್ರವಾಗಿದೆ.

ಪ್ರಸ್ತುತ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಒಟ್ಟು 31 ಸದಸ್ಯರಿದ್ದು, ಇದರಲ್ಲಿ 16 ಕಾಂಗ್ರೆಸ್, 9 ಬಿಜೆಪಿ, 6 ಜೆಡಿಎಸ್ ಮತ್ತು 4 ಪಕ್ಷೇತ್ರ ಸದಸ್ಯರು ಆಯ್ಕಯಾಗಿದ್ದಾರೆ. ಈ ಹಿಂದೆಯೂ ಸಾಮಾನ್ಯ ಅಭ್ಯರ್ಥಿಗೆ ನಗರಸಭಾ ಅಧ್ಯಕ್ಷರ ಮೀಸಲು ಪ್ರಕಟವಾಗಿದ್ದ ಕಾರಣ ಪಕ್ಷೇತರ ಸದಸ್ಯರಾಗಿದ್ದ ಆನಂದರೆಡ್ಡಿ ಅವರು ನಗರಸಭೆಯ ಮೊದಲ ಅವಧಿಗೆ ಅಧ್ಯಕ್ಷರಾಗಿದ್ದರು. ಈಗ ಮತ್ತೆ ಸಾಮಾನ್ಯ ಅಭ್ಯರ್ಥಿಗೆ ಅಧ್ಯಕ್ಷ ಗಾಗಿ ಮೀಸಲಾಗಿದ್ದು, ನಗರಸಭೆ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ತೀವ್ರವಾಗಿದೆ.

ಪ್ರಸ್ತುತ ಕಾಂಗ್ರೆಸ್ ಮತ್ತು ಬಿಜೆಪಿ ಉಭಯ ಪಕ್ಷಗಳಿಗೂ ಬಂಡಾಯದ ಬಿಸಿ ತಪ್ಪಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಒಂದೇ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡಲಾಗುತ್ತಿದೆ ಎಂಬ ಅಸಮಾಧಾನ ಸದಸ್ಯರಲ್ಲಿ ಮನೆಮಾಡಿತ್ತು. ಆದರೆ ಇದೀಗ ಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ಬದಲಾವಣೆಯಾಗುವ ಸೂಚನೆಗಳಿವೆ ಎನ್ನುತ್ತಿವೆ ಮೂಲಗಳು. ಕಾರಣ ಒಂದೇ ಸಮುದಾಯಕ್ಕೆ ಬಂಬಲ ಎಂಬ ಆರೋಪದಿಂದ ಮುಕ್ತಿ ಪಡೆಯಲು ಇದೀಗ ಬಲಿಜ ಸಮುದಾಯಕ್ಕೆ ಸೇರಿದವರನ್ನು ಅಧ್ಯಕ್ಷ ಸ್ಥಾನದ ಮೇಲೆ ಕೂರಿಸಲು ಕಾಂಗ್ರೆಸ್ ಪ್ಲಾನ್ ಮಾಡಿರುವುದಾಗಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.

೧೪ನೇ ವಾರ್ಡಿನ ದೀಪಕ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಶಾಸಕರು ನಿರ್ಧರಿಸಿದ್ದು, ಉಪಾಧ್ಯಕ್ಷ ಸ್ಥಾನ ಎಸ್‌ಸಿಗೆ ಮೀಸಲಾಗಿರುವ ಕಾರಣ ೨೯ನೇ ವಾರ್ಡಿನ ನಗರಸಭಾ ಸದಸ್ಯರಾಗಿರುವ ಕಣಿತಹಳ್ಳಿ ವೆಂಕಟೇಶ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಎಸ್‌ಸಿ ಮಹಿಳಾ ಮೀಸಲಾತಿ ಬರಲಿದೆ, ಅಧ್ಯಕ್ಷ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಮಿಲ್ಟನ್ ವೆಂಕಟೇಶ್ ಅವರಿಗೆ ಪ್ರಸ್ತುತ ಬಂದಿರುವ ಮೀಸಲಾತಿ ತೀವ್ರ ನಿರಾಸೆ ಮೂಡಿಸಿದ್ದು, ಇದರಿಂದ ಅಸಮಾಧಾನ ಹೊರಹಾಕುತ್ತಿದ್ದಾರೆ ಎನ್ನಲಾಗಿದೆ.

ಅಲ್ಲದೆ ಈ ಹಿಂದೆ ಕಾಂಗ್ರೆಸ್ ಚಿಹ್ನೆಯಡಿ ಗೆದ್ದು, ಬಿಜೆಪಿ ಬೆಂಬಲಿಸಿದ್ದ ಸದಸ್ಯರ ವಿರುದ್ಧ ಅನರ್ಹತೆ ತೂಗುಕತ್ತಿ ನೇತಾಡಿತ್ತು. ಆದರೆ ವಿಪ್ ಉಲ್ಲಂಘಿಸಿದ್ದ ಎಲ್ಲ ಸದಸ್ಯರೂ ವಾಪಸ್ ಕಾಂಗ್ರೆಸ್ ಸೇರುವ ಮೂಲಕ ಅನರ್ಹತೆ ತೂಗುಕತ್ತಿಯಿಂದ ತಪ್ಪಿಸಿಕೊಂಡಿದ್ದರು. ಆದರೆ ಇದೀಗ ಮತ್ತೆ ಕಾಂಗ್ರೆಸ್‌ಗೆ ಕೈ ಕೊಟ್ಟು ಬಿಜೆಪಿ ಬೆಂಬಲಿಸಲು ಹಲವು ಸದಸ್ಯರು ಸಿದ್ಧರಾಗಿರುವ ಬಗ್ಗೆ ಮಾಹಿತಿ ಇದ್ದು, ಹೀಗೆ ವಿಪ್ ಉಳ್ಲಂಘನೆ ಮಾಡಲು ಅಸಮಾಧಾನವೇ ಕಾರಣ ಎನ್ನಲಾಗಿದೆ.

ಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ಹೀಗಿದ್ದರೆ ಬಿಜೆಪಿಯಲ್ಲಿ ಮಾತ್ರ ಎಲ್ಲವೂ ಸೈಲೆಂಟಾಗಿದೆ. ಸಂಸದ ಡಾ.ಕೆ. ಸುಧಾಕರ್ ಅವರು ಸಂಸತ್ ಕಲಾಪಗಳಿದ್ದ ಕಾರಣ ಮೊನ್ನೆ ಮೋನ್ನೆಯವರೆಗೂ ದೆಹಲಿಯಲ್ಲಿದ್ದರು. ಆದರೆ ದೆಹಲಿಯಿಂದ ಬಂದ ನಂತರವೂ ಅವರೂ ಚಿಕ್ಕಬಳ್ಳಾಪುರದತ್ತ ಮುಖ ಮಾಡಿಲ್ಲ. ಪ್ರತಿ ಸೋಮವಾರ ಜನಸಂಪರ್ಕ ಸಭೆ ನಡೆಸುತ್ತಿದ್ದ ಸಂಸದರು ನೆನ್ನೆ ಜನಸಂಪರ್ಕ ಸಭೆಗೆ ಆಗಮಿಸಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರವನ್ನೂ ಮಾಡಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಸಂಸದರು ಜನಸಂಪರ್ಕ ಸಭೆಗೂ ಬಂದಿಲ್ಲ.

ಬಿಜೆಪಿಯ ೯ ಮಂದಿ ಸದಸ್ಯರಲ್ಲಿ ಹಲವರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ ಎಂಬುದು ಬಹಿರಂಗ ಸತ್ಯ. ಕಳೆದ ಅವಧಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸೇರಿದಂತೆ ಇತರೆ ಪದಾಧಿಕಾರಿಗಳ ನೇಮಕ ಮಾಡದೆ ಕಾಲ ದೂಡಿದ್ದು, ಎಸ್‌ಸಿ ಮೀಸಲಾತಿ ಬಂದಿದ್ದರೂ ಅದನ್ನು ಮತ್ತೆ ಸಾಮಾನ್ಯ ಮೀಸಲಾತಿ ಮಾಡಿದ ವಿಚಾರಕ್ಕೆ ಸಂಬAಧಿಸಿ ಸದಸ್ಯರಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದು, ಪ್ರಸ್ತುತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಯಾವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂಬುದರ ಮೇಲೆ ಅಸಮಾಧಾನ ಸ್ಫೋಟಗೊಳ್ಳುವ ಎಲ್ಲ ಸೂಚನೆಗಳಿವೆ.

ಅಲ್ಲದೆ ಈ ಹಿಂದೆ ಬಿಜೆಪಿಯನ್ನು ಬೆಂಬಲಿಸಿದ್ದ ನಾಲ್ವರು ಪಕ್ಷೇತರರೂ ಇದೀಗ ಸಂಸದರಿ0ದ ಅಂತರ ಕಾಯ್ದುಕೊಡಂಇರೋದು ವಿಶೇಷ. ಕಳೆದ ಕೆಲ ದಿನಗಳ ಹಿಂದೆ ನೂತನ ಸಂಸದರಿಗೆ ಅಭಿನಂದನಾ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರದಲ್ಲಿ ಹಮಮಿಕೊಡಂಇದ್ದ ವೇಳೆ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಆನಂದರೆಡ್ಡಿ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಅಧಿಕಾರ ಅನುಭವಿಸಿಯೂ ಯಾಕೆ ಸಂಸದರಿ0ದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಪ್ರಶ್ನೆಗೆ ಸದಸ್ಯರ ಆಂತರಿಕ ಭಿನ್ನಮತವೇ ಕಾರಣ ಎಂಬ ಉಥ್ತರ ಸಿಗಲಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ನಗರಸಭಾ ಸದಸ್ಯರು ಡಾ.ಕೆ. ಸುಧಾಕರ್ ಅವರ ವಿರುದ್ಧ ಕೆಲಸ ಮಾಡಿದ್ದಾರೆ ಎಂಬ ಆರೋಪಗಳಿವೆ. ಅದರಲ್ಲಿ ಬಿಜೆಪಿ ಚಿಹ್ನೆಯಡಿ ಗೆದ್ದಿರುವ ನಗರಸಭಾ ಸದಸ್ಯರ ಜೊತೆಗೆ ಪಕ್ಷೇತರರೂ ಇದ್ದಾರೆ ಎಂಬುದು ಆರೋಪ. ಈ ಆರೋಪಗಳ ನಡುವೆ ತಮ್ಮ ವಿರುದ್ಧ ಪ್ರಚಾರ ಮಾಡುವ ಜೊತೆಗೆ ಶಾಸಕರನ್ನೂ ಭೇಟಿಯಾಗಿ ಬಂದಿದ್ದ ಸದಸ್ಯರೊಬ್ಬರಿಗೆ ಸುಧಾಕರ್ ಅವರು ಮತ್ತೆ ಮಣೆ ಹಾಕುತ್ತಿದ್ದಾರೆ ಎಂಬುದು ಈ ಸದಸ್ಯರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.

ಅಲ್ಲದೆ ಅದೇ ಸದಸ್ಯರನ್ನು ಮತ್ತೆ ಅಧ್ಯಕ್ಷ ಸ್ಥಾನ ನೀಡುವ ಸೂಚನೆಗಳಿದ್ದು, ಸ್ಥಾಯಿ ಸಮಿತಿಯೂ ಇಲ್ಲದೆ, ನಗರಸಭೆಯಲ್ಲಿ ಯಾವುದೇ ಅಧಿಕಾರ ಲಭಿಸದೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಸದಸ್ಯರಿಗೆ ಇದು ತೀವ್ರ ಅಸಮಾಧಾನ ಮೂಡಿಸಿದೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ ಕಳೆದ ಬಾರಿ ಸ್ಥಾಯಿ ಸಮಿತಿ ವಂಚಿತ ಸದಸ್ಯರಿಗೆ ಕನಿಷ್ಠ ಉಪಾಧ್ಯಕ್ಷ ಸ್ಥಾನವನ್ನಾದರೂ ನೀಡಬೇಕು, ಅದರಲ್ಲೂ ಬಿಜೆಪಿ ಚಿಹ್ನೆಯಡಿ ಗೆದ್ದಿರುವ ಸದಸ್ಯರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ನೀಡಬೇಕು, ಪಕ್ಷೇತ್ರವಾಗಿ ಗೆದ್ದವರಿಗೆ ನೀಡಬಾರದು ಎಂಬ ಚರ್ಚೆ ಇದೀಗ ಸದಸ್ಯರಲ್ಲಿ ತೀವ್ರವಾಗಿದೆ.

ಒಂದು ವೇಳೆ ಮತ್ತೆ ಅದೇ ರೀತಿಯ ನಿರ್ಧಾರಗಳನ್ನು ಸಂಸದರು ಕೈಗೊಂಡರೆ ಕಾಂಗ್ರೆಸ್ ಬೆಂಬಲಿಸಲು ಹಲವು ಬಿಜೆಪಿ ಸದಸ್ಯರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ವಿಶ್ವಕರ್ಮ ಸಮುದಾಯಕ್ಕೆ ಸಸೇರಿದ ಎ.ಬಿ. ಮಂಜುನಾಥ್ ಅವರು ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಶತಾಯ ಗತಾಯ ತಮಗೆ ಅಧ್ಯಕ್ಷ ಸ್ಥಾನದ ಅವಕಾಶ ನೀಡಲೇಬೇಕು ಎಂಬ ನಿರ್ಧಾರ ಕೈಗೊಂಡಿದ್ದಾರೆ. ಇದರೊಂದಿಗೆ ಉಪಾಧ್ಯಕ್ಷ ಸ್ಥಾನದ ಸಮಸ್ಯೆಯೂ ತಲೆ ಎತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಅವರನ್ನು ಸಮರ್ಥವಾಗಿ ಎದುರಿಸಿ, ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವ ನಾಯಕ ಬಿಜೆಪಿಯಲ್ಲಿ ಯಾರಾಗಲಿದ್ದಾರೆ ಎಂಬ ಕುತೂಹಲ ತೀವ್ರವಾಗಿದೆ.

ಒಟ್ಟಿನಲ್ಲಿ ಮೀಸಲಾತಿ ಘೋಷಣೆಯಾದ ದಿನದಿಂದಲೂ ನಗರಸಭೆ ರಾಜಕೀಯ ತೀವ್ರವಾಗಿದ್ದು, ಉಭಯ ಪಕ್ಷಗಳಲ್ಲಿಯೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುತ್ತಲೇ ಇದೆ. ಇನ್ನೂ ಚುನಾವಣೆಗೆ ದಿನ ನಿಗಧಿಯಾಗುವುದಕ್ಕೂ ಮೊದಲೇ ಪರಿಸ್ಥಿತಿ ಗಂಭೀರವಾಗಿದ್ದು, ಸಂಸದರು ಅಖಾಡ ಪ್ರವೇಶದ ನಂತರ ಅದು ಮತ್ತಷ್ಟು ತೀವ್ರವಾಗಲಿದೆ ಎಂಬ ಲೆಕ್ಕಾಚಾರಗಳಿವೆ.

About The Author

Leave a Reply

Your email address will not be published. Required fields are marked *