ಗುಡಿಬಂಡೆಯಲ್ಲಿ ಸರ್ಕಾರಿ ನೌಕರರ ಸಂಘದ ಚುನಾವಣೆ
1 min readಗುಡಿಬಂಡೆಯಲ್ಲಿ ಸರ್ಕಾರಿ ನೌಕರರ ಸಂಘದ ಚುನಾವಣೆ
ಫಲಿತಾಂಶದಲ್ಲಿ ಕೆ.ವಿ. ನಾರಾಯಣಸ್ವಾಮಿ ಬಣ ಮೇಲುಗೈ
ಎರಡು ಬಣಗಳ ನಡುವೆ ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಕಾರ್ಯದರ್ಶಿಗಳ ಚುನಾವಣೆಯಲ್ಲಿ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ನಾಲ್ಕು ಸ್ಥಾನಗಳಿಗಾಗಿ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಕೆ.ವಿ. ನಾರಾಯಣಸ್ವಾಮಿ ಬಣ ಮೇಲುಗೈ ಸಾಧಿಸಿದೆ.
ಗುಡಿಬಂಡೆ ಪಟ್ಟಣದ ಕೆಪಿಎಸ್ ಶಾಲೆ ಆವರಣದಲ್ಲಿ ನಡೆದ ಮತದಾನ ಕೇಂದ್ರದಲ್ಲಿ ಬೆಳಿಗ್ಗೆ 9 ರಿಂದ ಸಂಜೆ ವರೆಗೆ ಬಿರುಸಿನ ಮತದಾನ ನಡೆದು, 195 ಮಂದಿ ಮತದಾರರು ಪಾಲ್ಗೊಂಡು ಮತ ಚಲಾಯಿಸಿದರು. ಸಂಜೆ 4 ಗಂಟೆ ನಂತರ ನಡೆದ ಮತ ಎಣಿಕೆ ಪ್ರಕ್ರಿಯೆ ೬ ಗಂಟೆಗೆ ಮುಗಿದು ಫಲಿತಾಂಶ ಪ್ರಕಟಿಸಿದಾಗ ಕೆ.ವಿ. ನಾರಾಯಣಸ್ವಾಮಿ ಬಣದಿಂದ ಕೆ.ವಿ. ನಾರಾಯಣಸ್ವಾಮಿ, ಮುನಿಕೃಷ್ಣ ಹಾಗೂ ರಾಜಶೇಖರ್ ಜಯಶೀಲರಾದರೆ ಬಾಲಾಜಿ ಬಣದಿಂದ ಬಾಲಾಜಿ ಗೆಲುವು ಸಾಧಿಸಿದರು.
ಬಾಲಾಜಿ ಬಣದಿಂದ ಸ್ಪರ್ಧಿಸಿದ್ದ ಬಾಲಾಜಿ 121 ಮತ ಪಡೆದರೆ, ಕೆ. ವಿ. ನಾರಾಯಣಸ್ವಾಮಿ 119, ಮುನಿಕೃಷ್ಣ 98, ಪಿ. ಎನ್. ರಾಜಶೇಖರ್ 89 ಮತ ಪಡೆದು ಜಯಗಳಿಸಿದ್ದಾರೆ. ಉಳಿದಂತೆ ಎ.ಕೃಷ್ಣಪ್ಪ 88 ಮತ, ಎನ್. ನಾಗಲಿಂಗಪ್ಪ 86 ಮತ, ಜಿ.ನಾರಾಯಣ ಸ್ವಾಮಿ 81 ಮತ ಹಾಗೂ ಜಿ. ವಿ. ಮುರಳಿ 76 ಮತ ಪಡೆದು ಪರಾಭವಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಎ. ರವೀಂದ್ರ ತಿಳಿಸಿದರು.
ಈ ಸಂದರ್ಭದಲ್ಲಿ ಹಾಲಿ ಅಧ್ಯಕ್ಷ ಕೆ. ವಿ. ನಾರಾಯಣಸ್ವಾಮಿ ಮಾತನಾಡಿ, ತಮ್ಮ ಮೇಲೆ ಅನೇಕರು ಇಲ್ಲ ಸಲ್ಲದ ಆರೋಪ ಮಾಡಿ, ಸಾಮಾಜಿಕ ಜಾಲಾ ತಾಣಗಳಲ್ಲಿ ಹರಿಯಬಿಟ್ಟಿದ್ದರು, ಎನ್. ಪಿ. ಎಸ್ ವಿರೋಧಿ ಎಂದು ಬಿಂಬಿಸಿದ್ದರು. ಆದರೂ ಶಿಕ್ಷಕರು ತಮ್ಮನ್ನು ಗೆಲ್ಲಿಸುವ ಮೂಲಕ ಎಲ್ಲಾ ಆರೋಪಗಳಿಗೂ ಉತ್ತರ ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ವಿವಿಧ ಶಾಲೆಗಳ ಶಿಕ್ಷಕರು ಇದ್ದರು.