ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣವೇ ಪ್ರಭಲ ಅಸ್ತ
1 min readಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣವೇ ಪ್ರಭಲ ಅಸ್ತ
ಬಲಿಜ ಸಮುದಾಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಭಾಗಿ
ಬಲಿಜ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣವೊಂದೆ ಪ್ರಭಲ ಅಸ್ತವಾಗಿದ್ದು, ಪೋಷಕರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಆಧ್ಯತೆ ನೀಡಬೇಕು ಎಂದು ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಮನವಿ ಮಾಡಿದರು.
ಗೌರಿಬಿದನೂರು ನಗರದ ಡಾ.ಹೆಚ್.ಎನ್.ಕಲಾಭವನದಲ್ಲಿ ಬಲಿಜ ಯುವ ಘರ್ಜನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್, ಸಮುದಾಯ ಸಂಘಟನೆಯ ಜೊತೆಗೆ ಸಮುದಾಯದ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಥದತ್ತ ಸಾಗಲು ಸಹಕರಿಸಬೇಕು. ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ವಸತಿ ನಿಲಯಗಳನ್ನು ಸ್ಥಾಪಿಸಬೇಕು, ಅದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಘೋಷಿಸಿದರು. ಅಳ್ಲದೆ ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ಉದ್ಯೋಗಕ್ಕೂ ನೀಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ಸಂಘಟನೆಯಿ0ದ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ ಸಮಾಜದ ಎಲ್ಲಾ ರಂಗಗಳಲ್ಲೂ ತೊಡಗಿರುವ ಬಲಿಜ ಸಮುದಾಯ ತನ್ನದೇ ಆದ ಛಾಪು ಹೊಂದಿದೆ. ಕೈವಾರ ತಾತಯ್ಯನವರ ಕಾಲನ ಇಂದಿಗೂ ಪ್ರಸ್ತುತವಾಗಿದ್ದು, ಕಲಿಕೆಯಿಂದ ಮಾತ್ರ ಸಮಾಜ ಮುಖ್ಯವಾಹಿನಿಗೆ ಬರಲು ಸಾಧ್ಯ. ಬಲಿಜ ಸಮುದಾಯ ಶಿಕ್ಷಣಕ್ಕೆ ಮಾತ್ರ ೨ಎ ಮೀಸಲಾತಿ ಇದ್ದು, ಈ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುವ ಮೂಲಕ ೨ಎ.ಮೀಸಲಾತಿಯಿನ್ನು ಪೂರ್ಣ ಪ್ರಮಾಣದಲ್ಲಿ ಘೋಷಣೆ ಮಾಡುವಂತೆ ಒತ್ತಾಯಿಸಲಾಗುವುದು ಎಂದರು.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ ಮತ್ತು ಛಲ ಮೈಗೂಡಿಸಿಕೊಂಡಾಗ ಉಜ್ವಲ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ, ವಿದ್ಯಾರ್ಥಿಗಳು ಎದೆಗುಂದದೆ ಪ್ರಯತ್ನದಲ್ಲಿ ಮುಂದುವರೆದಾಗ ನಿಮ್ಮ ಕನಸು ನನಸಾಗಿಸಿಕೊಳ್ಳಲು ಸಾಧ್ಯ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣವೊಂದೇ ಪ್ರಭಲ ಅಸ್ತವಾಗಿದೆ ಎಂಬುದನ್ನು ಮರೆಯಬಾರದು. ಸ್ವಾರ್ಥ ಪ್ರಪಂಚದಲ್ಲಿ ವಾಸ್ಥವತೆ ಅರಿತು ಶೈಕ್ಷಣಿಕವಾಗಿ ಮುಂದುವರೆಯಬೇಕು ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬಲಿಜ ಸಮುದಾಯ ಭವನ ನಿರ್ಮಾಣ ಮಾಡಲು ಒಂದು ಎಕರೆ ಜಮೀನು ಮಂಜೂರಾಗಿದ್ದು, 50 ಲಕ್ಷ ಅನುದಾನ ಬಿಡುಗಡೆಯಾಗಿದೆ. ವ್ಯವಸ್ಥಿತವಾದ ಭವನ ನಿಮಾಣ ಮಾಡಲು ೩ ಕೋಟಿ ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರು. ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ಪೂರ್ಣವಾಗಿಸುವಂತೆ ಈಗಾಗಲೇ ಮುಖ್ಯಮಂತಿಗಳಲ್ಲಿ ಒತ್ತಾಯಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮುಂದಿನ ವಿಭಾನಸಭ ಅಧಿವೇಶನದಲ್ಲಿ ಗೌರಿಬಿದನೂರು ಶಾಸಕರು ಮತ್ತು ತಾವು ಧ್ವನಿ ಎತ್ತುವ ಮೂಲಕ ಸಮುದಾಯಕ್ಕೆ 2ಎ ಮೀಸಲಾತಿ ತರುತ್ತೇವೆ ಎಂದರು.
ಸಮುದಾಯದ ಐಎಎಸ್ ಅಧಿಕಾರಿ ರಾಘವೇಂದ್ರ ಮಾತನಾಡಿ, ಸಮುದಾಯಕ್ಕೆ ಶೈಕ್ಷಣಿವಾಗಿ 2ಎ ಮೀಸಲಾತಿ ಇದೆ, ಆದರೆ ಅದು ಪೂರ್ಣವಾಗಿ ಮೀಸಲಾತಿ ದೊರೆತಾಗ ಮಾತ್ರ ಸಮುದಾಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ, ವಿದ್ಯಾರ್ಥಿಗಳು ಐಎಎಸ್ , ಕೆಎಎಸ್ ಪರೀಕ್ಷೆಗಳಲ್ಲಿ ತೊಡಗಿ ಉನ್ನತ ಮಟ್ಟದ ಅಧಿಕಾರಿಗಳಾಗಿ ಸಮಾಜದಲ್ಲಿ ಹೊರಹೊಮ್ಮಬೇಕು ಎಂದು ಆಶಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಲಿಜ ಯುವ ಘರ್ಜನೆ ಅಧ್ಯಕ್ಷ ಜಿ.ಎ.ಪ್ರದೀಪ್ ಮಾತನಾಡಿ, ಸಮುದಾಯದ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಪೋಷಕರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದರು. ರಾಜ್ಯ ಬಲಿಜ ಸಂಘದ ಅಧ್ಯಕ್ಷ ಡಾ.ಟಿ. ವೇಣುಗೋಪಾಲ್, ಯೋಗಿನಾರೇಯಣ ಬಲಿಜ ಸಂಘದ ಅದ್ಯಕ್ಷ ವಿ. ರವೀಂದ್ರನಾಥ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಬಲಿಜ ಸಂಘದ ರಾಜ್ಯಾಧ್ಯಕ್ಷ ಎನ್. ನಾಗಾರ್ಜುನ ನಾಯ್ಡು , ನಗರಸಭೆ ಸದಸ್ಯ ವಿ. ರಮೇಶ್, ಎ. ಮೋಹನ್, ಪದ್ಮಾವತಮ್ಮ, ರೂಪಾಅನಂತರಾಜು, ಜಿ.ವಿ. ಅಶ್ವತ್ಥನಾರಾಯಣ್, ಅನಂತರಾಜ್, ಹೊಸೂರು ಗ್ರಾಪಂ ಅಧ್ಯಕ್ಷೆ ಗೀತಾನಾಗರಾಜ್, ಡಾ.ಕೆ.ವಿ. ಪ್ರಕಾಶ್, ಛತ್ರಂ ಎಸ್. ವೆಂಕಟಾದ್ರಿ ಇದ್ದರು.