ಭರವೇಶ್ವರ ದೇವಾಲಯದ ಬಳಿ ಇರುವ ಎಕೋ ಪಾರ್ಕ್
1 min readನಿರ್ವಹಣೆ ಇಲ್ಲದೆ ಸೊರಗುತ್ತಿರುವ ಎಕೋಪಾರ್ಕ್
ಭರವೇಶ್ವರ ದೇವಾಲಯದ ಬಳಿ ಇರುವ ಎಕೋ ಪಾರ್ಕ್
ಬಾಗೇಪಲ್ಲಿಯಲ್ಲಿರುವ ಏಕೈಕ ಪಾರ್ಕಿಗೂ ನಿರ್ವಹಣೆ ಇಲ್ಲ
ಬಾಗೇಪಲ್ಲಿ ಪಟ್ಟಣದ ಜನತೆಯ ಅನುಕೂಲಕ್ಕಾಗಿ ಎಕೋ ಪಾರ್ಕ್ ಬೈರವೇಶ್ವರ ದೇವಾಲಯದ ಎದುರು ನಿರ್ಮಿಸಲಾಗಿದೆ. ಸುಸಜ್ಜಿತ ಮತ್ತು ಉತ್ತಮ ವಾತಾವರಣದಲ್ಲಿ ಈ ಉಧ್ಯಾನ ಇದ್ದು, ನಿರ್ವಹಣೆ ಇಲ್ಲದ ಕಾರಣ ಪಾಳು ಬೀಳುವ ಸ್ಥಿತಿಗೆ ಉದ್ಯಾನ ತಲುಪಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಾಗಹೇಪಲ್ಲಿ ಪಟ್ಟಣದ ಭರವೇಶ್ವರ ದೇವಾಲಯದ ಬಳಿ ನಿರ್ಮಿಸಿರುವ ಎಕೋ ಪಾರ್ಕಿನಲ್ಲಿ ಸಾರ್ವಜನಿಕರು ಓಡಾಡಲು ಅನುಕೂಲವಾಗುವಂತೆ ಪಾರ್ಕಿಂಗ್ ಟೈಲ್ಸ್ ಹಾಕಿ ಸುಸಜ್ಜಿತವಾದ ಪಾದಾಚಾರಿ ಮಾರ್ಗ ನಿರ್ಮಿಸಲಾಗಿದೆ. ಆದರೆ ಅವುಗಳ ನಿರ್ವಹಣೆ ಇಲ್ಲದೆ ಟೈಲ್ಸ್ ಮಧ್ಯದಲ್ಲಿ ಹುಲ್ಲು ಬೆಳೆದಿದೆ. ಇನ್ನು ಪಾದಾಚಾರಿ ಮಾರ್ಗದ ಇಕ್ಕೆಲಗಳಲ್ಲೂ ಗಿಡಮರಗಳ ರೆಂಬೆಕೊ0ಬೆಗಳು,ಉದ್ದನೆಯ ಹುಲ್ಲು ಬೆಳೆದು ಹಲವೆಡೆ ಮಾರ್ಗವೇ ಮುಚ್ಚಿ ಹೋಗಿದ್ದು, ಟೈಲ್ಸ್ ಒಂದೊ0ದಾಗಿ ಕಿತ್ತು ಹೋಗುವ ಸ್ಥಿತಿಯಲ್ಲಿವೆ.
ಪಾರ್ಕಿನೊಳಗೆ ತರಹೇವಾರಿ ಅಲಂಕಾರಿಕ ಗಿಡಗಳನ್ನು ನೆಟ್ಟಿರುವ ಕುರುಹುಗಳಿದ್ದು, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮುಳ್ಳಿನ ಗಿಡಗಳು, ಅನಪೇಕ್ಷಿತ ಕಳೆ ಗಿಡಗಳು ಪೊದೆಗಳಾಗಿ ಮಾರ್ಪಟ್ಟಿವೆ. ಇನ್ನು ಅಲಂಕಾರಿಕ ಗಿಡಗಳು ಹಾಗೂ ಬೆಳೆಬಾಳುವ ಮಾವು, ನೇರಳೆಯಂತಹ ಗಿಡಗಳಿಗೆ ಪೋಷಣೆಯಿಲ್ಲದೆ ಸತ್ತು ಗೆದ್ದಲು ಹುಳಗಳಿಗೆ ಆಹಾರವಾಗಿ ಹೋಗಿವೆ. ಮರಗಿಡಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಯಾವುದೋ ಕಾಡಿನಂತಾಗಿದೆ.
ಪಾರ್ಕಿನಲ್ಲಿ ಎಲ್ಲಂದರ¯್ಲೆ ಚಿಪ್ಸ್, ಸಿಗರೇಟ್,ಅಲ್ಲಲ್ಲಿ ಮದ್ಯದ ಪಾಕೆಟ್ ಗಳನ್ನು ಎಸೆಯಲಾಗಿದ್ದು, ಅವುಗಳನ್ನು ಸ್ವಚ್ಛಗೊಳಿಸದೇ ಅಲ್ಲಿಯೇ ಗಾಳಿಗೆ ಸುರುಳಿ ಸುತ್ತಿಕೊಳ್ಳುತ್ತಿವೆ. ಇನ್ನು ಯುವಕರು, ಜೋಡಿಗಳು ಹುಟ್ಟು ಹಬ್ಬಗಳನ್ನು ಆಚರಿಸಿಕೊಳ್ಳಲು ಸೂಕ್ತ ಜಾಗವೆಂಬ0ತೆ ಮಾರ್ಪಟ್ಟಿದ್ದು, ಕೇಕ್ ಕಾಗದಗಳೇ ಹೆಚ್ಚು ಕಾಣಿಸುತ್ತವೆ. ಹಾಗಾಗಿ ಅದೊಂದು ಹುಟ್ಟು ಹಬ್ಬಗಳ ಆಚರಣೆಯ ಅಡ್ಡೆಯಾಗಿ ಪರಿಣಮಿಸಿದೆ.
ಪಾರ್ಕಿಗೆ ಬರುವ ನಾಗರಿಕರಿಗೆ ಅನುಕೂಲವಾಗಲೆಂದು ಎರಡು ಸಿಮೆಂಟ್ ಟ್ಯಾಂಕ್ ಕೊಳವೆಗಳನ್ನೇ ಶೌಚಾಲಯಗಳನ್ನಾಗಿ ಆಧುನಿಕ ಶೈಲಿಯಲ್ಲಿ ನಿರ್ಮಿಸಲಾಗಿದೆ. ಆದರೆ ಆ ಶೌಚಾಲಯಗಳು ಬಳಕೆಯಾಗಿ ವರ್ಷಗಳೇ ಕಳೆದಿವೆ. ಅಲ್ಲಿ ನೀರಿಲ್ಲ,ಬಾಗಿಲುಗಳು ತುಕ್ಕು ಹಿಡಿದಿದ್ದು, ಅದರ ಸುತ್ತಲೂ ದಟ್ಟವಾಗಿ ಹುಲ್ಲು ಬೆಳೆದು ಮ್ಯೂಸಿಯಂ ನಲ್ಲಿಟ್ಟಂತಾಗಿದೆ. ಈ ಬಗ್ಗೆ ಕರವೇ ತಾಲೂಕು ಅಧ್ಯಕ್ಷ ಕೆ.ಎನ್ ಹರೀಶ್ ಮಾತನಾಡಿ, ಎಕೋ ಪಾರ್ಕನ್ನು ನಿರ್ವಹಣೆ ಮಾಡದೇ ನಿರ್ಲಕ್ಷಿಸಿದ್ದು, ಪುಂಡಾಟಿಕೆಗಳಿಗೆ ಸೀಮಿತವಾಗಿದೆ ಎಂದು ಆರೋಪಿಸಿದರು.
ಅಲ್ಲಿ ಸ್ವಚ್ಛತೆ ಇಲ್ಲ, ಶೌಚಾಲಯಗಳು ಗಬ್ಬು ನಾರುತ್ತಿವೆ. ಮಕ್ಕಳು ಆಟವಾಡಬೇಕಿದ್ದು ಉಪಕರಣಗಳು ನಾಶವಾಗುತ್ತಿವೆ. ಅಲ್ಲಿದ್ದ ಸೆಕ್ಯೂರಿಟಿ ಸಿಬ್ಬಂದಿಯನ್ನು ಹಿಂಪಡೆದ ಪುರಸಭೆಯ ನಿರ್ಲಕ್ಷ ಉಗ್ರವಾಗಿ ಖಂಡಿಸುತ್ತೇವೆ. ಕೂಡಲೇ ಸೆಕ್ಯೂರಿಟಿ ಸಿಬ್ಬಂದಿ ನೇಮಿಸಿ, ಪಾರ್ಕಿನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಇಲ್ಲದಿದ್ದರೆ ಕರವೇ ಸಂಘಟನೆಯಿ0ದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.