ಮಕ್ಕಳ ಕೈಯಲ್ಲಿ ಅರಳಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳು
1 min readಮಕ್ಕಳ ಕೈಯಲ್ಲಿ ಅರಳಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳು
ಪಿಒಪಿ, ಬಾಂಬೆ ಗಣೇಶನಿಗೆ ಗುಡ್ ಬೈ, ಪರಿಸರ ಸ್ನೇಹಿ ಗಣೇಶನಿಗೆ ಜೈ
ಮಕ್ಕಳು ಮಣ್ಣಿನಲ್ಲಿ ಆಟವಾಡಲು ಇಷ್ಟಪಡುತ್ತಾರೆ, ಹಾಗೆಯೇ ಮಕ್ಕಳ ಕೈಗೆ ಜೇಡಿ ಮಣ್ಣು ಸಿಕ್ಕರೆ ಅವರ ಕೈಯಲ್ಲಿ ಕಲೆಯ ರೂಪ ಪಡೆಯುವುದು ಗಣೇಶ ಮೂರ್ತಿಗಳು, ಮಣ್ಣನಿಂದ ದೂರವಾಗುತ್ತಿರುವ ಮಕ್ಕಳಿಗೆ ಜೇಡಿ ಮಣ್ಣಿನಲ್ಲಿ ಗಣೇಶಮೂರ್ತಿಗಳ ತಯಾರಿಸುವ ಅವಕಾಶವನ್ನ ಇಲ್ಲಿ ಮಾಡಿಕೊಡಲಾಗಿತ್ತು.
ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಪರಿಸರದ ಬಗ್ಗೆ ಇಂದಿನಿ0ದಲೇ ಕಾಳಜಿ ಬೆಳೆಸುವ ಕಾರಣಕ್ಕೆ ಯುವ ಸಂಚಲನ, ನಾಗರಕೆರೆ ಜೀವ ವೈವಿಧ್ಯತೆ ಸಮಿತಿ ಮತ್ತು ದೊಡ್ಡಬಳ್ಳಾಪುರ ನಗರಸಭೆ ಸಹಯೋಗದಲ್ಲಿ ಪರಿಸರ ಸ್ನೇಹಿ ಜೀವ ಗಣೇಶಮೂರ್ತಿಗಳ ತಯಾರಿಕೆ ಶಿಬಿರ ಇಂದು ಅಯೋಜಿಸಲಾಗಿತು.ನಾಗರಕೆರೆ ಏರಿ ಮೇಲಿನ ಅಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆದ ಶಿಬಿರದಲ್ಲಿ ಭಾಗವಹಿಸಿದ 70ಕ್ಕೂ ಹೆಚ್ಚು ಮಕ್ಕಳು ಶುದ್ಧ ಜೇಡಿ ಮಣ್ಣಿನಿಂದ ಗಣೇಶಮೂರ್ತಿಗಳ ತಯಾರಿಸಿ ಖುಷಿಪಟ್ಟರು.
ಇನ್ನು ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಯುವ ಸಂಚಲನದ ಮುಖಂಡ ಚಿದಾನಂದ್, 1974ರ ಪರಿಸರ ಮಾಲಿನ್ಯ ನಿಯಂತ್ರಣ ಕಾಯ್ದೆ ಪ್ರಕಾರ, ಬಾಂಬೆ ಗಣೇಶ, ಪಿಒಪಿ, ಬಿದಿರು ಮತ್ತು ಹುಲ್ಲಿನಿಂದ ತಯಾರಿಸಿದ ಗಣೇಶ ಮತ್ತು ಬಣ್ಣಕಾರಕ ಗಣೇಶಮೂರ್ತಿಗಳು ಮತ್ತು 5 ಆಡಿಗಿಂತ ಎತ್ತರದ ಗಣೇಶಮೂರ್ತಿಗಳನ್ನ ಕೂರಿಸುವುದಕ್ಕೆ ಅವಕಾಶ ಇಲ್ಲ, ಒಂದು ವೇಳೆ ಕಾನೂನು ಉಲ್ಲಂಘನೆಯಾದ್ದಲ್ಲಿ 10 ಸಾವಿರ ದಂಡ ಹಾಗೂ ಜೈಲು ಶಿಕ್ಷೆ ಆಗಲಿದೆ, ಭವಿಷ್ಯದ ನಮ್ಮ ಮಕ್ಕಳಿಗಾಗಿಯಾದ್ರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನ ಕೂರಿಸಿ ಹಬ್ಬವನ್ನ ಸಂಭ್ರಮಿಸೋಣ ಎಂದರು.