ದಸರಾ ಆನೆ ಕೊಂಡೊಯ್ಯುತ್ತಿದ್ದ ಲಾರಿ ಅಪಘಾತ: ಚಾಲಕ ಸಾವು, ಪ್ರಾಣಾಪಾಯದಿಂದ ಪಾರಾದ ಆನೆ
1 min read
ದಸರಾ ಮಹೋತ್ಸವಕ್ಕೆ ತರಲಾಗಿದ್ದ ಆನೆಯನ್ನು ವಾಪಸ್ ಲಾರಿಯಲ್ಲಿ ಕೊಂಡೊಯ್ಯುತ್ತಿದ್ದಾಗ ಅಪಘಾತ ಸಂಭವಿಸಿ ಲಾರಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಆದರೆ, ಅದೃಷ್ಟವಶಾತ್ ಲಾರಿಯಲ್ಲಿದ್ದ ಆನೆ ಪ್ರಾಣಾಪಾಯದಿಂದ ಪಾರಾಗಿದೆ. ನಂತರ, ಕ್ರೇನ್ ತರಿಸಿ ಆನೆಯನ್ನು ರಕ್ಷಣೆ ಮಾಡಲಾಗಿದೆ.
ಬೆಂಗಳೂರಿನ ಹೊರವಲಯ ಬನ್ನೇರುಘಟ್ಟ ಬಳಿ ದಸರಾ ಉತ್ಸವಕ್ಕೆ ತರಲಾಗಿದ್ದ ತಮಿಳುನಾಡಿನ ತಿರುಚ್ಚಿಯ ಆನೆಯನ್ನು ವಾಪಸ್ ಲಾರಿಯಲ್ಲಿ ಕೊಂಡೊಯ್ಯುತ್ತಿದ್ದಾಗ ಲಾರಿ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ಚಾಲಕ ಮೂತ್ರ ವಿಸರ್ಜನೆಗೆ ತೆರಳಿದಾಗ ಲಾರಿಯನ್ನು ಹ್ಯಾಂಡ್ ಬ್ರೇಕ್ ಮಾಡದ ಹಿನ್ನೆಲೆಯಲ್ಲಿ ಲಾರಿ ಮುಂದಕ್ಕೆ ಚಲಿಸಿ ಮುಂಭಾಗದಲ್ಲಿದ್ದ ಚಾಲಕನ ಮೇಲೆ ಹರಿದಿದೆ. ಇದರಿಂದ ಲಾರಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನು ರಸ್ತೆ ಬದಿಯ ತಗ್ಗು ಪ್ರದೇಶಕ್ಕೆ ಇಳಿದಿದ್ದ ಲಾರಿಯಲ್ಲಿ ಆನೆ ನಿಂತುಕೊಂಡಿದ್ದು, ಅದನ್ನು ಕ್ರೇನ್ ಮೂಲಕ ಸಂರಕ್ಷಣೆ ಮಾಡಲಾಗಿದೆ.