ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ನಾಡಿನಾದ್ಯಂತ ಮುಗಿಲು ಮುಟ್ಟಿದ ದಸರಾ ಸಂಭ್ರಮ

1 min read

ನಾಡಿನಾದ್ಯಂತ ಮುಗಿಲು ಮುಟ್ಟಿದ ದಸರಾ ಸಂಭ್ರಮ
ಚಿಕ್ಕಬಳ್ಳಾಪುರದಲ್ಲಿಯೂ ನವರಾತ್ರಿ ಗೊಂಬೆ ಪ್ರದರ್ಶನ
ನವ ದುರ್ಗೆಯರ ಪೂಜೆ ಜೊತೆಗೆ ಬಣ್ಣದ ಉಡುಪು ಧರಿಸುವ ಕುಟುಂಬ

ನಾಡ ಹಬ್ಬ ದಸರಾ ಸಂಭ್ರಮ ನಾಡಿನಾದ್ಯಂತ ಮುಗಿಲು ಮುಟ್ಟಿದೆ. 9 ದಿನಗಳ ಕಾಲ ನವದುರ್ಗೆಯರನ್ನು ಪೂಜಿಸುವ ನವರಾತ್ರಿ ಹಬ್ಬ ಮಹಿಳೆಯರ ಪಾಲಿಗೆ ವಿಶೇಷ. 9 ದಿನಗಳ ಕಾಲ ಪ್ರತಿನಿತ್ಯ ಒಂದೊ0ದು ದುರ್ಗೆಯ ಪೂಜೆ ಮಾಡುವುದು ಸಾಂಪ್ರದಾಯ. ಅಲ್ಲದೆ ಪ್ರತಿನಿತ್ಯ ಒಂದೊ0ದು ಬಣ್ಣದ ಉಡುಗೆ ತೊಟ್ಟು ದೇವಿ ಆರಾಧನೆ ಮಾಡುವುದು ನವರಾತ್ರಿಯ ವಿಶೇಷವಾಗಿದೆ. ಇಂತಹ ನವರಾತ್ರಿಯ ಪ್ರಮುಖ ಆಕರ್ಷಣೆ ದಸರಾ ಬೊಂಬೆ. ಇದು ಕ್ರನಾಟಕದಲ್ಲಿ ಮಾತ್ರವಲ್ಲದೆ, ದಕ್ಷಿಣ ಭಾರತದ ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡಿನಲ್ಲಿಯೂ ಜನಪ್ರಿಯ, ಕನ್ನಡದಲ್ಲಿ ಇದನ್ನು ಗೊಂಬೆ ಹಬ್ಬ ಎನ್ನುತ್ತಾರೆ.

ದಸರಾ ಗೊಂಬೆ ಕೂರಿಸುವ ಪದ್ಧತಿ ಇಂದು ನೆನ್ನೆಯದಲ್ಲ. 18ನೇ ಶತಮಾನದಿಂದಲೂ ಅಚರಿಸಿಕೊಂಡು ಬಂದಿರುವ ಸಾಂಪ್ರದಾಯ. ಆಧನಿಕ ಜೀವನ ಕ್ರಮದಲ್ಲಿ ಈ ಬೊಂಬೆ ಪ್ರದರ್ಶನ ಕಡಿಮೆಯಾಗುತ್ತಿದೆ. ಆದರೆ ಯಾರು ಹಿಂದಿನಿ0ದಲೂ ಈ ಸಂಪ್ರದಾಯವನ್ನು ಆಚರಿಸುತ್ತಾ ಬಂದಿದ್ದಾರೋ, ಅಂತಹವರ ಮನೆಯಲ್ಲಿ ಈ ಗೊಂಬೆ ಮನೆಯನ್ನು ನೋಡಬಹುದು. ಅಂತಹ ಒಂದು ಮನೆ ಚಿಕ್ಕಬಳ್ಳಾಪುರದಲ್ಲಿಯೂ ಇದೆ. ಅದು ಬಿ.ವಿ. ಮಂಜುನಾಥ್ ಅವರ ನಿವಾಸ. ದಸರಾ ಹಬ್ಬದಲ್ಲಿ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸುವ ಪದ್ಧತಿ ಮೈಸೂರು ಪ್ರಾಂತ್ಯದಲ್ಲಿ ಮೊದಲು ಆರಂಭವಾಯಿತು. ಮೈಸೂರು ದಸರಾ ಎಂದು ಜಗತ್ ಪ್ರಸಿದ್ಧಿ ಪಡೆದಿರುವ ಆಚರಣೆ ಮೈಸೂರು ಅರಮನೆಯಲ್ಲಿ ನಡೆದರೆ, ಮೈಸೂರು ರಾಜರ ಪ್ರಜೆಗಳೆಲ್ಲರ ಮನೆಯಲ್ಲಿ ಹಬ್ಬದ ಸಂಭ್ರಮವಾಗಿ ಪಟ್ಟದ ಗೊಂಬೆಗಳನ್ನು ಇಟ್ಟು ಪೂಜಿಸುವ ಪದ್ಧತಿ ಬೆಳೆದುಬಂದಿದೆ. ಗೊಂಬೆ ಕೂರಿಸಲು ಸಾಕಷ್ಟು ತಯಾರಿ ಅಗತ್ಯ. ಪ್ರತಿವರ್ಷ ಒಂದು ನಿರ್ದಿಷ್ಟ ವಿಷಯದ ಮೂಲಕ ಮನೆಗಳಲ್ಲಿ ಗೊಂಬೆ ಕೂರಿಸುತ್ತಾರೆ, ಭರತದ ಪೌರಾಣಿಕ ಹಿನ್ನೆಲೆ, ಕಲೆ, ಸಂಪ್ರದಾಯ, ಜನ ಜೀವನವನ್ನು ದಸರಾ ಬೊಂಬೆಗಳು ಸಾರುತ್ತದೆ. ಮನೆಗಳಲ್ಲಿ ಗೊಂಬೆ ಕೂರಿಸುವಾಗ ಸ್ಥಳಾವಕಾಶ ನೋಡಿಕೊಂಡು ಹಲವು ಹಂತಗಳಲ್ಲಿ ಕೂರಿಸುತ್ತಾರೆ. ಹೆಚ್ಚು ಗೊಂಬೆಗಳಿದ್ದವರು ೯ ಹಂತಗಳಲ್ಲಿ ಕೂರಿಸಿದರೆ, ಇನ್ನು ಕೆಲವರು ಕಡಿಮೆ ಹಂತಗಳಲ್ಲಿ ಕೂರಿಸುತ್ತಾರೆ. ಗೊಂಬೆಗಳನ್ನು ಕೂರಿಸಲು ಮರದ ಸ್ಟಾಡ್‌ಗಳನ್ನೂ ಬಳಸುತ್ತಾರೆ. ಮೊದಲ ಅಂತಸ್ತಿನಲ್ಲಿ ಪಟ್ಟದ ಬೊಂಬೆ, ಕಲಶ, ಗಣಪತಿ, ಮನೆ ದೇವರು, ದೀಪಗಳನ್ನಿಟ್ಟು, ಉಳಿದ ಅಂತಸ್ತುಗಳಲ್ಲಿ ಇತರ ಬೊಂಬೆಗಳನ್ನು ಜೋಡಿಸಲಾಗುತ್ತದೆ. ಮುಖ್ಯವಾಗಿ ಅಷ್ಟಲಕ್ಷ್ಮಿಯರು, ದಶಾವತಾರದ ಬೊಂಬೆಗಳು, ಸೀತಾ ಕಲ್ಯಾಣದ ಜೋಡಿಗಳು, ವೈಕುಂಠ ಪ್ರದರ್ಶನದ ಬೊಂಬೆಗಳು, ಶಿವ-ಪಾರ್ವತಿಯರ ಕೈಲಾಸದ ಸೆಟ್ ಹೀಗೆ ಒಂದೊ0ದು ಅಂತಸ್ತಿನಲ್ಲಿ ಒಂದೊ0ದನ್ನು ಇಟ್ಟು ಅಲಂಕರಿಸಲಾಗುತ್ತದೆ. ಗುರು ಪರಂಪರೆಯ ಎಲ್ಲಾ ಗುರುಗಳನ್ನು ಒಂದು ವಿಭಗದಲ್ಲಿ, ಚಾಮುಡೇಶ್ವರಿ ಹಬ್ಬದಲ್ಲಿ ಚಾಮುಂಡೇಶ್ವರಿಯ ವಿಶೇಷತೆ ಇರುವುದರಿಂದ ಆ ದೇವಿಯ ವಿಗ್ರಹವನ್ನು ಮಧ್ಯದಲ್ಲಿರಿಸಿ ಸರಸ್ವತಿ, ಗೌರಿ, ಲಕ್ಷ್ಮಿಯರ ವಿಗ್ರಹಗಳನ್ನಿಟ್ಟು ಪೂಜಿಸುತ್ತಾರೆ. ಗೊಂಬೆ ಕೂರಿಸುವವರು ಪ್ರತೀ ವರ್ಷ ಹಳೆಯ ಗೊಂಬೆಯ ಜೊತೆಗೆ ಒಂದು ಜೋಡಿ ಹೊಸ ಗೊಂಬೆಯನ್ನು ಸೇರಿಸಿ ಗೊಂಬೆ ಕೂರಿಸಬೇಕು ಎನ್ನುವುದು ವಾಡಿಕೆ. ಹಾಗಾಗಿ ಪ್ರತಿಯೊಬ್ಬರು ಹಳೆ ಗೊಂಬೆ ಜೊತೆಗೆ ಹೊಸ ಗೊಂಬೆಯನ್ನು ಕೂರಿಸುತ್ತಾರೆ. ಇತ್ತೀಚೆಗೆ ಹಳೆ ಸಂಪ್ರದಾಯದ ಬೊಂಬೆಗಳ ಜೊತೆ ಆಧನಿಕ ಸ್ಪರ್ಶ ನೀಡಲಾಗುತ್ತದೆ. ಮರದ, ಮಣ್ಣಿನ ಗೊಂಬೆ ಜೊತೆಗೆ ಕಾಗದಗಳಿಂದ ತಯಾರಿಸುವ ಗೊಂಬೆಗಳೂ ವಿವಿಧ ಅಲಂಕಾರಗಳಲ್ಲಿ, ವಿವಿಧ ಬಣ್ಣಗಳಲ್ಲಿ ಸಿಗುತ್ತದೆ.

ನವದುರ್ಗೆಯರಲ್ಲಿ ಪ್ರತಿದಿನ ಆಯಾ ದೇವಿಯರ ಕುಂಕುಮಾರ್ಚನೆ ಮಾಡಿ, ಪಾಯಸ, ಸಿಹಿ ಪೊಂಗಲ್, ಕೋಸಂಬರಿ, ಕಡಲೆ ಉಸುಲಿ ಹೀಗೆ ತಿನಿಸುಗಳ ನೈವೇದ್ಯ ಮಾಡಿ ಮಂಗಳಾರತಿ ಮಾಡಿ ಸಂಜೆಯ ವೇಳೆಗೆ ಮ಼ತೈದೆಯರನ್ನು, ಹೆಣ್ಣುಮಕ್ಕಳನ್ನು ಕರೆದು ಬಾಗಿನ ಕೊಟ್ಟು ಆರತಿ ಮಾಡುವ ಪದ್ಧತಿ ಇದೆ. ಮ಼ತೈದೆಯರು ಒಬ್ಬರು, ಮತ್ತೊಬ್ಬರ ಮನೆಗೆ ಹೋಗುತ್ತಾ ದಸರಾ ಸಂಭ್ರಮದಲ್ಲಿ ಪಾಲ್ಗೊಂಡು ಸಂತೋಷಪಡುತ್ತಾರೆ.

ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕೊಡುವಾಗ ವಧವಿನ ತಂದೆ ತಾಯಿ ಒಂದು ಜೊತೆ ಪಟ್ಟದ ಬೊಂಬೆ ಕೊಡುವ ಸಂಪ್ರದಾಯದ0ತೆ ಮುಂದಿನ ವರ್ಷಗಳಲ್ಲಿ ಹಬ್ಬವನ್ನು ಆಚರಿಸಲು ಅನುಮತಿ ಕೊಡುತ್ತಾರೆ. ದೇವಿ ಮಹಾತ್ಮೆ, ದೇವರ ಸ್ಮರಣೆ, ಶ್ರೀನಿವಾಸ ಕಲ್ಯಾಣ, ಗುರು ಚರಿತ್ರೆ ಮುಂತಾದವುಗಳನ್ನು ಪಾರಾಯಣ ಮಾಡುವು ಮೂಲಕವೂ ಗೊಂಬೆ ಪ್ರದರ್ಶನ ಏರ್ಪಡಿಸಲಾಗುತ್ತದೆ. ವಿಜಯದಶಮಿಯ ೧೦ನೇ ದಿನ ಮಹಾ ಮಂಗಳರಾರತಿ ಮಾಡಿ ದೇವಸ್ಥಾನಕ್ಕೆ ಹೋಗಿ ದೇವರ ದರುಶನ ಮಾಡಿ ಗೊಂಬೆ ಹಬ್ಬಕ್ಕೆ ಮುಕ್ತಾಯ ಮಾಡಲಾಗುತ್ತದೆ.

ಇನ್ನು ಚಿಕ್ಕಬಳ್ಳಾಪುರದಲ್ಲಿ ಕಳೆದ ೧೯ ವರ್ಷಗಳಿಂದ ಸತತವಾಗಿ ಗೊಂಬೆ ಹಬ್ಬ ಆಚರಿಸುತ್ತಿರುವ ಪಾರ್ವತಮ್ಮ ಅವರು ಹೇಳುವಂತೆ ತಮ್ಮನ್ನು ಅನಂತಪುರಕ್ಕೆ ವಿವಾಹ ಮಾಡಿಕೊಟ್ಟಿದ್ದು, ಅಲ್ಲಿಯೂ ದಸರಾ ಗೊಂಬೆ ಪ್ರದರ್ಶನ ಮಾಡುತ್ತಿದ್ದೆವು. ಆದರೆ ಕಳೆದ ೧೯ ವರ್ಷಗಳ ಹಿಂದೆ ಕಾರಣಾಂತರಗಳಿ0ದ ಇಲ್ಲಿಗೆ ಬಂದು 19 ವರ್ಷಗಳಿಂದಲೂ ಸತತವಾಗಿ ಗೊಂಬೆ ಹಬ್ಬ ಆಚರಿಸಲಾಗುತ್ತಿದೆ ಎಂದು ಹೇಳುತ್ತಾರೆ. ಸರಸ್ವತಿಪೂಜೆಯೊಂದಿಗೆ ಆರಂಭವಾಗುವ ಗೊಂಬೆಗಳ ಪ್ರದರ್ಶನ ಬಂಧಗಳೆಲ್ಲ ಸೇರಿ ಆಚರಿಸುತ್ತಿರುವುದಾಗಿ ಅವರು ಹೇಳುತ್ತಾರೆ.

ಇನ್ನು ಉಪನ್ಯಾಸಕಿಯಾಗಿರುವ ಅದೇ ಮನೆಯ ಸೊಸೆ ಪದ್ಮ ಈ ಮನೆಗೆ ಸೊಸೆಯಾಗಿ ಬಂದು 13 ವರ್ಷಗಳಾಗಿದೆ. ಅಂದಿನಿ0ದ ಗೊಂಬೆ ಪ್ರದರ್ಶನ ಆಚರಿಸುವ ಜೊತೆಗೆ ಸಂಬ0ಧಿಕರೆಲ್ಲ ಸೇರಿ ಒಂದೊ0ದು ಹಬ್ಬವನ್ನು ಒಂದೊ0ದು ಮನೆಯಲ್ಲಿ ಆಚರಿಸಲು ನಿರ್ಧರಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತಾರೆ. ಬಂಧಗಳೆಲ್ಲ ಪ್ರತಿ ಹಬ್ಬಕ್ಕೆ ಒಂದೊ0ದು ಮನೆಯಲ್ಲಿ ಸೇರುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನವರಾತ್ರಿಯ ೯ ದಿನ ಪ್ರತಿನಿತ್ಯ ಸಂಬ0ಧಿಸಿದ ಬಣ್ಣದ ಉಡುಪು ಧರಿಸಿ, ಗೊಂಬೆ ಪ್ರದರ್ಶನದಲ್ಲಿ ದುರ್ಗೆಯರನ್ನು ಪೂಜಿಸುವುದು ಈ ಮನೆಯ ಸಾಂಪ್ರದಾಯವಾಗಿದೆ.

ಒಟ್ಟಿನಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ನವರಾತ್ರಿಗಳಲ್ಲಿ ನವ ದುರ್ಗೆಯರನ್ನು ಪೂಜಿಸುವ ಜೊತೆಗೆ ಸತತ ೧೯ ವರ್ಷಗಳಿಂದ ದಸರಾ ಗೊಂಬೆ ಹಬ್ಬ ಆಚರಿಸುವ ಕುಟುಂಬಗಳು ಚಿಕ್ಕಬಳ್ಳಾಪುರದಲ್ಲಿಯೂ ಇದ್ದೇ, ನಮ್ಮ ಸಂಕೃತಿ, ಸಾಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ರವಾನಿಸುವ ಕೆಲಸ ಮಾಡುತ್ತಿರುವ ಈ ಕುಟುಂಬದ ಕಾರ್ಯ ಮೆಚ್ಚುವಂತದ್ದಾಗಿದೆ.

 

About The Author

Leave a Reply

Your email address will not be published. Required fields are marked *