ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ಕುಂಟುತ್ತಾ ಸಾಗುತ್ತಿರುವ ಒಳಚರಂಡಿ ಕಾಮಗಾರಿ! ಅಧಿಕಾರಿಗಳೊಂದಿಗೆ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

1 min read

ಕುಂಟುತ್ತಾ ಸಾಗುತ್ತಿರುವ ಒಳಚರಂಡಿ ಕಾಮಗಾರಿ 9 ತಿಂಗಳಲ್ಲಿ ಪೂರ್ಣಗೊಳಿಸುವ ವಿಶ್ವಾಸ   ಅಧಿಕಾರಿಗಳೊಂದಿಗೆ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ*

 

ಬಾಗೇಪಲ್ಲಿ: ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷö್ಯದಿಂದ ಆಮೆವೇಗದಲ್ಲಿ ಕುಂಟುತ್ತಾ ಸಾಗುತ್ತಿರುವ ಒಳಚರಂಡಿ ಕಾಮಗಾರಿಯನ್ನು 6 ರಿಂದ 9 ತಿಂಗಳೊಳಗೆ ಮುಗಿಸಲು ಕಟ್ಟುನಿಟ್ಟಿನ ಸೂಚನೆಯನ್ನು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು

ಪಟ್ಟಣದ ವಿವಿದ ಕಡೆಗಳಲ್ಲಿ ಒಳಚರಂಡಿ ಅಧಿಕಾರಿಗಳೊಂದಿಗೆ ಒಳಚರಂಡಿ ಕಾಮಗಾರಿಯನ್ನ ವೀಕ್ಷಿಸಿದ ನಂತರ ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 2012 ರಲ್ಲಿ ಒಳಚರಂಡಿ ಕಾಮಗಾರಿ ಪ್ರಾರಂಭಿಸಲಾಯಿತು. 3 ಹಂತಗಳಲ್ಲಿ ಹಣ ಬಿಡುಗಡೆಯಾಗಿದ್ದು ಇದುವರೆಗೆ ಸುಮಾರು 51 ಕೋಟಿ ವೆಚ್ಚಮಾಡಲಾಗಿದೆ.

ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷö್ಯದಿಂದಾಗಿ ಕಾಮಗಾರಿ ಮಂದಗತಿಯಲ್ಲಿ ನಡೆದಿದೆ. ಅನೇಕ ಕಡೆಗಳಲ್ಲಿ ಅತ್ಯಂತ ಕಳಪೆಯಾಗಿ ಕಾಮಗಾರಿ ಮಾಡಲಾಗಿದೆ. ಗುತ್ತಿಗೆದಾರರ ಮೂಗಿನ ನೇರಕ್ಕೆ ಕಾಮಗಾರಿ ನಡೆಸಿದ್ದರೂ ಅಧಿಕಾರಿಗಳು ಕುಮ್ಮಕ್ಕಾಗಿ ಬಿಲ್ ಮಾಡಿದ್ದಾರೆ. ಕಠಿಣ ಸ್ಥಳಗಳಲ್ಲಿ ಕಾಮಗಾರಿಯನ್ನೇ ಮಾಡದೆ ಬಿಡಲಾಗಿದೆ. ಇವೆಲ್ಲಾ ವಿಚಾರಗಳನ್ನು ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದು ಇಂದು ಒಳಚರಂಡಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಸುಲಭವಾಗಿ ಆಗುವ ಕಡೆ ಕಾಮಗಾರಿ ಮುಗಿಸಿ ಕಠಿಣ ಎಂದ ಕಡೆ ಬಿಟ್ಟಿರುವ ಗುತ್ತಿಗೆದಾರನಿಗೆ ಬಿಲ್ ಮಾಡಿರುವುದಕ್ಕೆ ಚೀಫ್ ಇಂಜಿನಿಯರ್ ಚಂದ್ರಪ್ಪ ರವರಿಗೆ ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ಹಣ ಈ ರೀತಿ ದುರುಪಯೋಗಪಡಿಸಿಕೊಂಡಿರುವುದು ಅಧಿಕಾರಿಗಳ ನಿರ್ಲಕ್ಷö್ಯದಿಂದಾಗಿಯೇ ಎಂದರು.

ಎಸ್.ಟಿ.ಪಿ ಪ್ಲಾಂಟ್ ಕಾಮಗಾರಿ ಶೇ 90 ರಷ್ಟು ಮುಗಿದಿದ್ದು ಈಗಾಗಲೇ ಟ್ರಯಲ್ ರನ್ ಮಾಡಲಾಗಿದೆ. ಈಗ ನ್ಯಾಷನಲ್ ಕಾಲೇಜು ಕಡೆಯಿಂದ ಎಸ್.ಟಿ.ಪಿ ಪ್ಲಾಂಟ್‌ವರೆಗೆ ಪರೀಕ್ಷೆ ಮಾಡಬೇಕಾಗಿದ್ದು ಅದಕ್ಕೆ 10 ಲಕ್ಷ ಹಣದ ಅವಶ್ಯಕತೆ ಇದೆ ಎಂದು ಶಾಸಕರಲ್ಲಿ ಮನವಿ ಮಾಡಿದಾಗ ಕೂಡಲೇ ಬಿಡುಗಡೆಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ದೂರವಾಣಿಯಲ್ಲಿ ಸೂಚಿಸಿದರು.

ಎಸ್.ಟಿ.ಪಿ ಪ್ಲಾಂಟ್‌ಗೆ ಸ್ಥಳದ ಸಮಸ್ಯೆ, ಕೆಲ ಕಡೆ ಕಾವiಗಾರಿಗೆ ಕಲ್ಲುಗಳು ಅಡ್ಡಿಯಾಗುವುದರ ಜೊತೆಗೆ ಅಧಿಕಾರಿ-ಗುತ್ತಿಗೆದಾರರ ನಿರ್ಲಕ್ಷö್ಯ ನಿಧಾನಗತಿಗೆ ಕಾರಣವಾಗಿತ್ತು. ಈಗ ಕಾಮಗಾರಿಗೆ ವೇಗ ನೀಡಲಾಗುತ್ತಿದೆ.ಕಾಮಗಾರಿಗೆ ಅವಶ್ಯಕತೆ ಇರುವ 15-20 ಕೋಟಿ ರೂಪಾಯಿಗಳನ್ನು ಶೀಘ್ರ ಸರ್ಕಾರದಿಂದ ಕೊಡಿಸುತ್ತೇನೆ.ಅವೈಜ್ಞಾನಿಕ ಕಾಮಗಾರಿ ಸರಿಪಡಿಸುವ ಸಾಧ್ಯಾಸಾದ್ಯತೆಗಳ ಬಗ್ಗೆ ಪರಿಶೀಲನೆ ನಡೆದಿದೆ ಎಂದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ಅಧಿಕಾರಿಗಳೊಂದಿಗೆ ಒಳಚರಂಡಿ ಕಾಮಗಾರಿಗಳನ್ನು ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ವiತ್ತು ನಂತರ ನಡೆದ ಅಧಿಕಾರಿಗಳ ಸಭೆಗೆ ಗೈರುಹಾಜರಾಗಿದ್ದ ಪುರಸಭೆ ಮುಖ್ಯಾಧಿಕಾರಿ ರುದ್ರಮ್ಮ ಶರಣಯ್ಯ ರವರ ಕಾರ್ಯವೈಖರಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸಿಟ್ಟು ವ್ಯಕ್ತಪಡಿಸಿದರು. ಮೀಟಿಂಗ್ ಹೆಸರಲ್ಲಿ ಇಂದು ಗೈರುಹಾಜರಾಗಿದ್ದಾರೆ. ಸಾರ್ವಜನಿಕರಿಂದರ ಅವರ ಕಾರ್ಯವೈಖರಿ ಬಗ್ಗೆ ಹೆಚ್ಚಿನ ದೂರುಗಳು ಬಂದಿದ್ದು ಕೂಡಲೇ ಅವರಿಗೆ ಎಚ್ಚರಿಕೆ ನೀಡಲಾಗುವುದು. ಸರಿಪಡಿಸಿಕೊಳ್ಳದಿದ್ದರೆ ಅವರ ಜಾಗಕ್ಕೆ ಮತ್ತೊಬ್ಬರನ್ನು ತರುವುದು ನನಗೆ ಗೊತ್ತಿದೆ ಎಂದು ಮುಖ್ಯಾಧಿಕಾರಿ ವಿರುದ್ದ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು….

►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura

About The Author

Leave a Reply

Your email address will not be published. Required fields are marked *