ಡೆಂಘೀ ಭಯ ಬೇಡ ಮುನ್ನೆಚ್ಚರಿಕೆ ಇರಲಿ
1 min readಡೆಂಘೀ ಭಯ ಬೇಡ ಮುನ್ನೆಚ್ಚರಿಕೆ ಇರಲಿ
ಬೀದರ್ ಡಿಎಚ್‌ಒ ಡಾ ಜ್ಞಾನೇಶ್ವರ ನೀರಗುಡೆ ಬೆನ್ನು ಬಿಡದ ಡೆಂಘೀ
ಬೀದರ್ ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ ೬೩ ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಕಳೆದ ಎರಡು ದಿನಗಳಲ್ಲಿ 6 ಪ್ರಕರಣಗಳು ಸಕ್ರಿಯವಾಗಿವೆ. ಡೆಂಘೀ ಪೀಡಿತರು ಬ್ರಿಮ್ಸ್ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಈಗಾಗಲೇ ಮನೆಗೆ ತೆರಳಿದ್ದಾರೆ.ಅವರ ಮೇಲೆ ಆರೋಗ್ಯ ಅಧಿಕಾರಿಗಳು ನಿಗಾವಹಿಸಲ್ಲಿದ್ದಾರೆ ಎಂದು ಡಿಎಚ್‌ಒ ಮಾಹಿತಿ ನೀಡಿದ್ದಾರೆ.
ಡೆಂಘೀ ಜ್ವರ ಈಡಿಸ್ ಎಂಬ ಜಾತಿಯ ಸೊಳ್ಳೆಗಳ ಕಡಿತದಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೈರಸ್ ಕಾಯಿಲೆಯಾಗಿದೆ. ಜಿಲ್ಲೆಯ ಜನತೆ ತಮ್ಮ ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಲು ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ. ಅಲ್ಲದೆ ಸಾರ್ವಜನಿಕ ರಿಗೆ ತೀವ್ರ ಜ್ವರ. ವಿಪರೀತ ತಲೆನೋವು. ಕಣ್ಣುಗಳ ಹಿಂಬದಿಯಲ್ಲಿ ನೋವು ಮಾಂಸಖoಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳವುದು ಡೆಂಘೀ ರೋಗದ ಲಕ್ಷಣಗಳಾಗಿವೆ ಎಂದು ಡಿಎಚ್‌ಒ ಹೇಳಿದ್ದಾರೆ.
ಬೀದರ್ ತಾಲೂಕಿನ 6.ಭಾಲ್ಕಿ 14. ಹುಮನಾಬಾದ 08. ಬಸವಕಲ್ಯಾಣ 11. ಔರಾದ್ 21. ಸೇರಿದಂತೆ ಒಟ್ಟು 63 ಡೆಂಘೀ ಪ್ರಕರಣಗಳು ಜಿಲ್ಲೆಯಲ್ಲಿ ಈವರೆಗೂ ದಾಖಲಾಗಿದ್ದು, ನಗರ ಪ್ರದೇಶಗಳಲ್ಲಿ 12 ಹಾಗೂ ಗ್ರಾಮೀಣ ಭಾಗದಲ್ಲಿ 51 ಡೆಂಘೀ ಪ್ರಕರಣ ಪತ್ತೆಯಾಗಿವೆ. ಕಳೆದ ಎರಡು ದಿನದಿಂದ ೬ ಡೆಂಘೀ ಪ್ರಕರಣ ಪತ್ತೆಯಾಗಿದೆ. ರೋಗದ ನಿಯಂತ್ರಣಕ್ಕೆ ವಿವಿಧ ಇಲಾಖೆಯ ಸಹಕಾರ ಅಗತ್ಯ ಎಂದು ಡಿ ಎಚ್ ಒ ಮನವಿ ಮಾಡಿದರು.