ದೊಡ್ಮನೆ ಕುಡಿ ಯುವ ರಾಜಕುಮಾರ್ ಅಭಿನಯದ ‘ಯುವ’ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ!
1 min readಸಂತೋಷ್ ಆನಂದ್ರಾಮ್ ನಿರ್ದೇಶನದ ‘ಯುವ’ ಚಿತ್ರದ ಮೂಲಕ ದೊಡ್ಮನೆ ಕುಡಿ ಯುವ ರಾಜ್ಕುಮಾರ್ ಅವರನ್ನು ಸ್ಯಾಂಡಲ್ವುಡ್ಗೆ ಪರಿಚಯಿಸುತ್ತಿರುವ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ್ ಆರಂಭದಲ್ಲಿ ಡಿಸೆಂಬರ್ 22ರಂದು ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಿತ್ತು.
ಈಗ ಯುವ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲು ಹೊಂಬಾಳೆ ಫಿಲ್ಮ್ಸ್ ನಿರ್ಧರಿಸಿದೆ. ಸಂತೋಷ್ ಆನಂದ್ರಾಮ್ ನಿರ್ದೇಶನದ ‘ಯುವ’ ಚಿತ್ರದ ಮೂಲಕ ದೊಡ್ಮನೆ ಕುಡಿ ಯುವ ರಾಜ್ಕುಮಾರ್ ಅವರನ್ನು ಸ್ಯಾಂಡಲ್ವುಡ್ಗೆ ಪರಿಚಯಿಸುತ್ತಿರುವ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ್ ಆರಂಭದಲ್ಲಿ ಡಿಸೆಂಬರ್ 22ರಂದು ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, ಈಗ ಆ ದಿನದಂದು ‘ಸಲಾರ್’ ಬಿಡುಗಡೆಯಾಗಲಿದ್ದು, ಯುವ ಚಿತ್ರದ ಬಿಡುಗಡೆಯನ್ನು ಮುಂದೂಡಲು ಹೊಂಬಾಳೆ ಫಿಲ್ಮ್ಸ್ ನಿರ್ಧರಿಸಿದೆ. ಇದೀಗ ಯುವ ಸಿನಿಮಾ ಮುಂದಿನ ವರ್ಷ ಮಾರ್ಚ್ 28ರಂದು ಬಿಡುಗಡೆಯಾಗಲಿದೆ.
ಮೇರುನಟ ಡಾ. ರಾಜ್ಕುಮಾರ್ ಕುಟುಂಬದಿಂದ ಬಂದಿರುವ ಯುವ ರಾಜ್ಕುಮಾರ್ ಯುವ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಯುವ ಸಿನಿಮಾ ಅಭಿಮಾನಿಗಳು ಮತ್ತು ಸಿನಿಮಾ ಪ್ರೇಮಿಗಳಲ್ಲಿ ವ್ಯಾಪಕ ನಿರೀಕ್ಷೆ ಉಂಟುಮಾಡಿದೆ. ಕೆಜಿಎಫ್ ಮತ್ತು ಕಾಂತಾರ ಸಿನಿಮಾಗಳಿಗೆ ಹೆಸರುವಾಸಿಯಾದ ವಿಜಯ್ ಕಿರಗಂದೂರು ನಿರ್ಮಿಸಿದ ಯುವ ಸಿನಿಮಾ, ಯೂತ್ಫುಲ್ ಆಯಕ್ಷನ್ ಎಂಟರ್ಟೈನರ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.ಹೊಂಬಾಳೆ ಫಿಲ್ಮ್ಸ್ನ ಬಹುನಿರೀಕ್ಷಿತ ‘ಸಲಾರ್’, ‘ಯುವ’ ಚಿತ್ರ ಒಂದೇ ದಿನ ಬಿಡುಗಡೆ?ಚಿತ್ರದಲ್ಲಿ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.