ಅಪ್ಪ ದರ್ಶನ್‌ಗಾಗಿ ಮಗ ವಿನೀಶ್ ಮಾಡಿದ ತ್ಯಾಗ ಎಂತದ್ದು ಗೊತ್ತಾ?
1 min readರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿ ನೋವು ಅನುಭವಿಸುತ್ತಿದ್ದರೆ, ಹೊರಗಡೆ ಇರುವ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಕೂಡ ನೋವಿನಲ್ಲಿದ್ದಾರೆ. ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಪ್ಪನನ್ನು ಭೇಟಿಯಾದ ಮಗ ವಿನೀಶ್, ಅಪ್ಪನ ಸ್ಥಿತಿ ಕಂಡು ಮರುಗಿದ್ದಾರೆ.
ದರ್ಶನ್‌ರ ವಿಗ್ ಅನ್ನು ನಿಭಾಯಿಸುವುದು ಕಷ್ಟವಾದ ಕಾರಣ, ಜೈಲಿನಲ್ಲಿ ತಲೆ ಬೋಳಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ತಂದೆಯನ್ನು ಬಗೆ ಬಗೆಯ ಹೇರ್ ಸ್ಟೈಲ್‌ನಲ್ಲಿ ನೋಡಿ ಖುಷಿಪಟ್ಟಿದ್ದ ಮಗ ವಿನೀಶ್ ಈಗ ಅಪ್ಪನ ಹೊಸ ಅವತಾರ ಕಂಡು ಮರುಗಿದ್ದಾರೆ.
ಅಪ್ಪನ ಭೇಟಿ ಮಾಡಿ ಮನೆಗೆ ಬರುತ್ತಿದ್ದಂತೆ, ಅಪ್ಪನಿಗೆ ಇಲ್ಲದ ಖುಷಿ ನನಗೇಕೆ ಎಂದು ತಾನು ಕೂಡ ಕೇಶ ಮುಂಡನ ಮಾಡಿಸಿಕೊಂಡಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ವಿನೀಶ್ ದರ್ಶನ್ ಹೊರಗಡೆ ಸದ್ಯ ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಜೈಲಿನಲ್ಲಿರುವ ದರ್ಶನ್‌ರನ್ನು ಅವರ ಅಭಿಮಾನಿಗಳೇ ಬಿಟ್ಟುಕೊಡುತ್ತಿಲ್ಲ ಇನ್ನು ಮಗ ವಿನೀಶ್ ಬಿಟ್ಟುಕೊಡುತ್ತಾರಾ? ಯಾರು ಏನೇ ಅಂದರೂ ನೀವೇ ನನ್ನ ಹೀರೋ ಎನ್ನುವ ವಿನೀಶ್‌ಗೆ ಅಪ್ಪನ ಮೇಲೆ ಸಿಕ್ಕಾಪಟ್ಟೆ ಲವ್ ಇದೆ. ದರ್ಶನ್‌ಗು ಕೂಡ ಮಗನೆಂದರೆ ಅಷ್ಟೇ ಅಚ್ಚುಮೆಚ್ಚು. ಈಗ ತಾನು ಕೂಡ ಅಪ್ಪನಂತೆ ತಲೆ ಕೂದಲು ತೆಗೆಸಿ ಅಪ್ಪನ ಕಷ್ಟದ ಸಮಯದಲ್ಲಿ ತಾನು ಜೊತೆಗಿದ್ದೇನೆ ಎನ್ನುವ ಸಂದೇಶ ಕೊಟ್ಟಿದ್ದಾರೆ.
ಜೈಲಿನಲ್ಲಿ ಅಪ್ಪನನ್ನು ತಬ್ಬಿ ಕಣ್ಣೀರಿಟ್ಟಿರುವ ಮಗ ವಿನೀಶ್ ನಿಮ್ಮನ್ನು ಈ ರೀತಿ ನೋಡಲು ಆಗುತ್ತಿಲ್ಲ ಎಂದಿದ್ದಾರೆ. ಅಪ್ಪ ಮಗನ ಬಾಂಧವ್ಯ ನೋಡಿ ವಿಜಯಲಕ್ಷ್ಮಿ ದರ್ಶನ್ ಕೂಡ ಭಾವುಕರಾಗಿದ್ದಾರೆ.
ನಟ ದರ್ಶನ್ ಆದಷ್ಟು ಬೇಗ ಹೊರಗೆ ಬರಲಿ ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ವಿವಿಧ ದೇವಸ್ಥಾನಗಳಲ್ಲಿ ಅರ್ಚನೆ ಮಾಡಿಸುವ ಮೂಲಕ ದೇವರ ಸಹಾಯ ಬೇಡುತ್ತಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಕೂಡ ಪತಿಯನ್ನು ಹೊರತರಲು ದೇವರಿಗೆ ಪ್ರಾರ್ಥನೆ ಮಾಡಿದ್ದಾರೆ. ಹಲವು ವಕೀಲರನ್ನು ಭೇಟಿಯಾಗುತ್ತಿರುವ ಅವರು, ದರ್ಶನ್‌ರನ್ನು ಬೇಗನೆ ಹೊರಗೆ ತರಲು ಇರುವ ಎಲ್ಲಾ ಸಾಧ್ಯತೆಗಳನ್ನು ಹುಡುಕುತ್ತಿದ್ದಾರೆ.