ಜನರ ಸಮಸ್ಯೆಗಳಿಗೆ ಅತ್ಮಸಾಕ್ಷಿಯಾಗಿ ಕರ್ತವ್ಯ ನಿರ್ವಹಿಸಿ
1 min readಜನರ ಸಮಸ್ಯೆಗಳಿಗೆ ಅತ್ಮಸಾಕ್ಷಿಯಾಗಿ ಕರ್ತವ್ಯ ನಿರ್ವಹಿಸಿ
ಅಧಿಕಾರಿಗಳಿಗೆ ತಾಕೀತು ಮಾಡಿದ ಶಾಸಕ ಪುಟ್ಟಸ್ವಾಮಿಗೌಡ
ಜನರನ್ನು ಪದೇ ಪದೇ ಕಚೇರಿಗಳಿಗೆ ಅಲೆಸದೆ ಅತ್ಮಸಾಕ್ಷಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಿ ಉತ್ತಮ ಅಧಿಕಾರಿಗಳಾಗುವಂತೆ ಗೌರಿಬಿದನೂರು ಶಾಸಕ ಕೆಎಚ್. ಪುಟ್ಟಸ್ವಾಮಿಗೌಡ ತಿಳಿಸಿದರು.
ಗೌರಿಬಿದನೂರು ನಗರದ ಹೊರವಲಯದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಅಯೋಜಿಸಿದ್ದ ಜನಸ್ಪಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಪುಟ್ಟಸ್ವಾಮಿಗೌಡ, ತಾಲ್ಲೂಕಿನಲ್ಲಿ ರೈತರ, ಬಡವರ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹಾರ ಮಾಡಿದ್ದು, ಇಂದು ಸುಮಾರು ೫೦ಕ್ಕೂ ಹೆಚ್ಚು ದೂರುಗಳು ಬಂದಿದೆ, ಅವುಗಳಲ್ಲಿ ಸ್ಮಶಾನ, ಜೋಡಿಗ್ರಾಮ, ಖಾತೆಗಳ ಸಮಸ್ಯೆ, ಜಮೀನು ಸಮಸ್ಯೆಗಳು ಬಂದಿವೆ. ಅವುಗಳನ್ನು ಕಾನೂನು ರೀತಿಯಲ್ಲಿ ಇತ್ಯರ್ಥ ಮಾಡಲಾಗಿದೆ, ಶೇ.90 ರಷ್ಟು ಸಮಸ್ಯೆಗಳಿಗೆ ಇತಿಶ್ರೀ ಹಾಡಿದ್ದು ಇನ್ನು ಉಳಿಕೆ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.
ಪ್ರತಿ ತಿಂಗಳು ಹೊಸ ಸಮಸ್ಯೆಗಳು ತಾಲ್ಲೂಕಿನಲ್ಲಿ ಉದ್ಬವಿಸುವುದು ಸಾಮಾನ್ಯ, ಅವುಗಳಿಗೆ ಅಧಿಕಾರಿಗಳಿಗೆ ತಕ್ಷಣ ಸ್ಪಂದಿಸಿ ಬಗೆಹರಿಸಬೇಕು ಎಂದು ಅಧಿಕಾರಗಳಿಗೆ ತಾಕೀತು ಮಾಡಿದರು. ದೂರುದಾರರೊಬ್ಬರು ಅಕ್ರಮ ಮದ್ಯ ಮಾರಾಟದ ಬಗ್ಗೆ ದೂರು ನೀಡಿದರು. ಈ ಬಗ್ಗೆ ತಹಸೀಲ್ದಾರ್, ಅಧಿಕಾರಿ ಅಧಿಕಾರಿಗಳಿಗೆ ಉತ್ತರ ನೀಡಿ ಎಂದು ಪ್ರಶ್ನೆ ಮಾಡಿದರು. ಅಕ್ರಮ ಮದ್ಯ ಮಾರಾಟ ರಾಜ್ಯದಲ್ಲಿ ಎಲ್ಲಾ ಮೀರಿದೆ, ಈ ವಿಚಾರದಲ್ಲಿ ಸರ್ಕಾರ ಕೈಚೆಲ್ಲಿದೆ, ಆಧಿಕಾರಿಗಳು ನಿಮ್ಮ ವ್ಯಾಪ್ತಿಯಲ್ಲಿ ಅಧಿಕಾರಿ ಕಾನೂನು ಅನ್ವಯ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಹೇಶ್ ಎಸ್ ಪತ್ರಿ, ಶ್ರೀನಿವಾಸಗೌಡ, ಕಾಂತರಾಜ್, ರೈತ ಸಂಘದ ಅಧ್ಯಕ್ಷ ಲೋಕೇಶ್ ಗೌಡ, ಮೇಳ್ಯ ರಾಮಚಂದ್ರರೆಡ್ಡಿ, ದಲಿತ ಮುಖಂಡ ನಂಜುಅಡಪ್ಪ, ನಾರ್ಗಜುನ ಇದ್ದರು.