ಕಾಳಿಹುಂಡಿ ಗ್ರಾಮದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಅಭಿಮತ
1 min readರೈತರು ಜಾಗೃತರದಾಗ ಮಾತ್ರ ಅನ್ಯಾಯ ತಡೆಯಲು ಸಾಧ್ಯ
ಕಾಳಿಹುಂಡಿ ಗ್ರಾಮದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಅಭಿಮತ
ಕೃಷಿ ಭೂಮಿಯನ್ನು ಉತ್ತಿ, ಬಿತ್ತಿ, ಹದ ಮಾಡಿ ಬೆಳೆ ತೆಗೆದು ಜಗತ್ತಿಗೆ ಅನ್ನ ಹಾಕುವ ಅನ್ನದಾತ ಜಾಗೃತನಾದಾಗ ಮಾತ್ರ ಅನ್ಯಾಯ ಮತ್ತು ಅಕ್ರಮಕ್ಕೆ ಕಡಿವಾಣ ಹಾಕಿ ನಮ್ಮ ಸೇವೆಗೆ ಇರುವ ಅಧಿಕಾರಿಗಳನ್ನು ಜಾಗೃತಿಗೊಳಿಸಲು ಸಾಧ್ಯ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಹೇಳಿದರು.
ನಂಜನಗೂಡು ತಾಲೂಕಿನ ಕಾಳಿಹುಂಡಿ ಗ್ರಾಮದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಗ್ರಾಮ ಘಟಕದ ನೂತನ ಸದಸ್ಯರಿಗೆ ಹಸಿರು ಶಾಲು ನೀಡಿ, ಕಾರ್ಯಕ್ರಮ ಉದ್ಘಾಟನೆ ಮಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ಕಾಳಿಹುಂಡಿ ಗ್ರಾಮದ ಶ್ರೀ
ಮಹದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಗ್ರಾಮದ ರೈತರು ಯುವಕರು ಮತ್ತು ಸಾರ್ವಜನಿಕರು ರೈತ ಸಂಘ ಮತ್ತು ಹಸಿರು ಸೇನೆ ಗ್ರಾಮ ಘಟಕದ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಸತೀಶ ನೇತೃತ್ವದಲ್ಲಿ ಕಾಳಿಹುಂಡಿ ಗ್ರಾಮದ ನೂರಾರು ರೈತರು ಮತ್ತು ಯುವಕರು ಹಸಿರು ಶಾಲುವನ್ನು ಸ್ವೀಕರಿಸುವ ಮೂಲಕ ಸದಸ್ಯರಾಗಿ ಸೇರ್ಪಡೆಯಾದರು. ದೇಶದಲ್ಲಿ ಮತ್ತು ರಾಜ್ಯದಲ್ಲಿ ರೈತರ ಪರಿಶ್ರಮ ಅಪಾರವಾದದ್ದು, ಆಳಿದ ಆಳುವ ಸರ್ಕಾರಗಳು ರೈತರ ಬಗ್ಗೆ ಜಾಗೃತಿ ವಹಿಸಿ, ರೈತರಿಗೆ ಆಯಾ ಸಮಯಕ್ಕೆ ಬೇಕಾಗುವ ಬಿತ್ತನೆ ಬೀಜ ರಸಗೊಬ್ಬರ ಮತ್ತು ಇತರೆ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ನಮ್ಮ ಸೇವೆಗೆ ಇರುವ ಅಧಿಕಾರಿಗಳನ್ನು ಎಚ್ಚರಿಸಬೇಕಾದರೆ ರೈತರು ಜಾಗೃತರಾಗಿರಬೇಕು ಎಂದರು.
ಈಗ ಕಾಳಿಹುಂಡಿ ಗ್ರಾಮದಲ್ಲಿ ನೂತನವಾಗಿ ರೈತ ಸಂಘ ಮತ್ತು ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನೆಯಾಗಿದೆ ಸದಸ್ಯರು ಮತ್ತು ಮುಖಂಡರಾಗಿರುವ ಎಲ್ಲರೂ ತಮ್ಮ ಅಭಿವೃದ್ಧಿಗೆ ಮತ್ತು ಇತರರ ಏಳಿಗೆಗೆ ಬದ್ಧರಾಗಿರಲು ಹಸಿರು ಶಾಲು ಧರಿಸಿರುವ ಮುಖಂಡರು ಪ್ರಾಮಾಣಿಕತೆಯಿಂದ ಹೋರಾಟ ಮಾಡಲು ಮುಂದಾಗಬೇಕು ಎಂದು ಸದಸ್ಯರಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ತಾಲೂಕು ಅಧ್ಯಕ್ಷ ಸತೀಶ್, ಕೆಂಪಣ್ಣ ಇದ್ದರು.